ಜಿಲ್ಲೆ

ಹುಬ್ಬಳ್ಳಿ ಧಾರವಾಡ ಕಸ ವಿಲೇವಾರಿ ಅವ್ಯವಸ್ಥೆ

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ಬಡಾವಣೆಗಳಲ್ಲಿ ಕಸವಿಲೇವಾರಿ ಅಸ್ತವ್ಯಸ್ತಗೊಂಡಿದೆ.

ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಸಕರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರಿಗಳಿವೆ.

ಈ ಕುರಿತು ಯಾಲಕ್ಕಿ ಶೆಟ್ಟರ್ ಕಾಲನಿಯ CMDR ಆಫೀಸ್ ಹತ್ತಿರ ಇರುವ ಚಾಲುಕ್ಯ ಬಡಾವಣೆ ವಾರ್ಡ ನಂ 20 ರಲ್ಲಿ 50 ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿ ಕಸ ವಿಲೇವಾರಿ ವ್ಯವಸ್ಥೆ ಇಲ್ಲದೆ ಇಲ್ಲಿಯ ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದೆ.

ಕೆಲವು ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಚಾಲುಕ್ಯ ಬಡಾವಣೆಯು ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡಿದೆ.

ಈ ಬಡಾವಣೆ ಹತ್ತಿರ ಇರುವ CMDR ಕಚೇರಿ ವರೆಗೆ ಕಸ ವಿಲೇವಾರಿ ವಾಹನ ಬರುತ್ತದೆ. ಆ ವಾಹನವನ್ನು ನಮ್ಮ ಬಡಾವಣೆವರೆಗೂ ಮುಂದುವರೆಸಿ ಕಸ ವಿಲೇವಾರಿ ವ್ಯವಸ್ಥೆ ಮಾಡಿ ಕಸ ಮುಕ್ತ ಬಡಾವಣೆಯನ್ನಾಗಿಸಬೇಕೆಂದು ಬಡಾವಣೆ ಅಧ್ಯಕ್ಷೆ ಲತಾ ಮುಳ್ಳೂರ,  ಪ್ರಧಾನ ಕಾರ್ಯದರ್ಶಿ ಬಸವರಾಜ ಕೋಷ್ಠಿ ಹಾಗೂ  ಬಡಾವಣೆ ಸಮಸ್ತ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಆಯುಕ್ತರಿಗೆ  ಮನವಿ ಪತ್ರ ನೀಡಲಾಗಿದ್ದು, ಆದಷ್ಟು ಬೇಗ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *