ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ 9, 10, 11 ರಂದು ಒಂದನೇ ತರಗತಿಯಿಂದ ಎಂಟನೇ ತರಗತಿಗಳಿಗೆ ರಜೆಯಿಲ್ಲ

ಧಾರವಾಡ prajakiran.com :  ಧಾರವಾಡ ಜಿಲ್ಲೆಯಲ್ಲಿ ದಿನಾಂಕ 9, 10 ಹಾಗೂ 11/2/2022 ರಂದು ಒಂದನೇ ತರಗತಿಯಿಂದ ಎಂಟನೆಯ ತರಗತಿಗಳು ಯಥಾವತ್ತಾಗಿ ನಡೆಯಲಿವೆ.

, 9 ಹಾಗೂ 10 ನೆಯ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ರಜೆ ನೀಡಲಾಗಿದ್ದು, ಪರೀಕ್ಷಾ ಸಮಯವಾದ್ದರಿಂದ ಶಿಕ್ಷಕರು ಶಾಲೆಯಲ್ಲಿದ್ದು ಈ ಮಕ್ಕಳಿಗೆ ಕಡ್ಡಾಯವಾಗಿ ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸಿ ಮಾರ್ಗದರ್ಶನ ಮಾಡುವುದು.

*ದಿನಾಂಕ 9, 10 ಹಾಗೂ 11/2/2022 ರಂದು ನಡೆಯಬೇಕಿದ್ದ ದ್ವಿತೀಯ ಭಾಷೆ, ಗಣಿತ ಹಾಗೂ ತೃತೀಯ ಭಾಷೆಯ ಎಸ್.ಎಸ್.ಎಲ್.ಸಿ ಒಂದನೆಯ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಕ್ರಮವಾಗಿ ದಿನಾಂಕ 14, 15 ಹಾಗೂ 16/2/2022 – ಈ ದಿನಗಳಂದು ನಡೆಸುವುದು.

ದಿನಾಂಕ 12/2/2022 ರಂದು ನಡೆಯಲಿರುವ ವಿಜ್ಞಾನ ವಿಷಯದ ಪರೀಕ್ಷೆಯು ಯಥಾಪ್ರಕಾರ ನಡೆಸಲು ತಿಳಿಸಿದೆ.

ನಾಳೆ ದಿನಾಂಕ 9/2/2022 ಹಾಗೂ 10/2/2022 – ಈ ಎರಡು ದಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಜಿಲ್ಲಾ ಮಟ್ಟದ ಸಭೆಯು ಈಗಾಗಲೇ ಸೂಚಿಸಿದಂತೆ ನಡೆಯಲಿದ್ದು, ಸದರ ದಿನಾಂಕಗಳಂದು ಸಂಬಂಧಿಸಿದ ತಾಲೂಕಿನ ಮುಖ್ಯೋಪಾಧ್ಯಾಯರು ನಿಗದಿತ ಸ್ಥಳದಲ್ಲಿ ಬೆಳಿಗ್ಗೆ ಸರಿಯಾಗಿ 10.00. ಗಂಟೆಗೆ ಹಾಜರಿರಲು ಸೂಚಿಸಿದೆ.

ಕ್ಷೇತ್ರಶಿಕ್ಷಣಾಧಿಕಾರಿಗಳು ಈ ಕುರಿತು ಕ್ರಮವಹಿಸಲು ತಿಳಿಸಿದೆ*

– *ಡಿಡಿಪಿಐ
ಸಾರ್ವಜನಿಕ ಶಿಕ್ಷಣ ಇಲಾಖೆಯ  ಉಪನಿರ್ದೇಶಕರು ಎಸ್.ಎಸ್.ಕೆಳದಿಮಠ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *