ರಾಜ್ಯ

ಧಾರವಾಡದ ಬಹುಕೋಟಿ ಕೆ ಐ ಎ ಡಿ ಬಿ ಹಗರಣ : ಸಿಐಡಿ ತನಿಖೆ ಚುರುಕು ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದ ವಿ.ಡಿ. ಸಜ್ಜನ ಆಂಡ್ ಟೀಂ

ಸಿಐಡಿ ತನಿಖೆ ಚುರುಕು ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದ ವಿ.ಡಿ. ಸಜ್ಜನ ಆಂಡ್ ಟೀಂ

ಹದಿನೈದು ದಿನದಲ್ಲಿ ಹಲವರ ಜನ್ಮ ಜಾಲಾಡಿದ ಸಿಐಡಿ ತಂಡ

ತಕರಾರು ಅರ್ಜಿ ಸಲ್ಲಿಸಲಿದೆಯಾ ಸಿ ಐ ಡಿ ತಂಡ 

ಧಾರವಾಡ ಪ್ರಜಾಕಿರಣ.ಕಾಮ್ ಎಕ್ಸಕ್ಲೂಸಿವ್ : ಧಾರವಾಡದ ಕೆ ಐ ಎ ಡಿ ಬಿಯಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಂಡ ಬೆನ್ನಲ್ಲೇ ಆರೋಪಿಗಳು ನೀರಿಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ನಾಳೆ ಗುರುವಾರ ಫೆ. 23 ರಂದು ಧಾರವಾಡದ ಹೈಕೋರ್ಟ್ ಪೀಠದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.

ಇದಕ್ಕೆ ಸಿ ಐ ಡಿ ಅಧಿಕಾರಿಗಳ ತಂಡ ತಕರಾರು ಸಲ್ಲಿಸಲಿದೆಯಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕಳೆದ ಹಲವು
ದಿನಗಳಿಂದ ಧಾರವಾಡದಲ್ಲಿ ಬಿಡಾರ ಹೂಡಿರುವ ಸಿ ಐ ಡಿ ಅಧಿಕಾರಿಗಳ ತಂಡ ಹಲವರನ್ನು ತೀವ್ರವಾದ ವಿಚಾರಣೆ ಗೆ ಒಳಪಡಿಸಿ ಅನೇಕರ ಜನ್ಮ ಜಾಲಾಡಿ ಮಹತ್ವದ ಅಂಶಗಳನ್ನು ಕಲೆ ಹಾಕಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನನನ್ನು ಖೆಡ್ಡಾಕ್ಕೆ ಕೆಡವಲು ಸಿ ಐ ಡಿ ಬಲೆ ಹೆಣೆದಿರುವುದನ್ನು ಅರಿತು ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಕಳೆದ ಹಲವು ವರ್ಷಗಳ ಕಾಲ ಸ್ಥಳೀಯ ಪತ್ರಿಕೆಯೊಂದರ
ಹೆಸರಿನಲ್ಲಿ ಕೆ ಐ ಡಿ ಬಿ ಕಚೇಯಲ್ಲಿ ಏಜೆಂಟ್ ಗಿರಿ ಮಾಡುತ್ತಿದ್ದ ಆಶ್ಫಕ್ ದುಂಡಸಿ ಜೊತೆಗೆ ನಿರಂತರವಾದ ಸಂರ್ಪಕದಲ್ಲಿದ್ದ ವಿ.ಡಿ. ಸಜ್ಜನ ಕುರಿತು ಅಶ್ಪಕ್ ಬಳಿ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಕೆಲವೇ ವರ್ಷಗಳ ಅವಧಿಯಲ್ಲಿ ಕೋಟ್ಯಾಧೀಶನಾಗಿದ್ದರ ಕುರಿತು ಸಿ ಐ ಡಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ಡ್ರಿಲ್ ಮಾಡಿ ಬಾಯಿ ಬಿಡಿಸಿದ್ದರು.

ಸಿಐಡಿ ಅಧಿಕಾರಿಗಳು ಕೇಳಿದ ಹತ್ತು ಹಲವು ರೋಚಕ ಪ್ರಶ್ನೆಗಳಿಗೆ ತಬ್ಬಿಬ್ಬಾದ ಆಶ್ಫಕ್ ದುಂಡಿಸಿ, ವಿ.ಡಿ. ಸಜ್ಜನ ಆಂಡ್ ಗ್ಯಾಂಗ್ ಮಾಡಿದ್ದ ಖತರ್ ನಾಕ್ ಕೆಲಸದ ಕುರಿತು ಉತ್ತರಿಸಲು
ಕೆಲ ಕಾಲ ತಡಬಡಿಸಿದ್ದ.

ಈ ಹಿಂದೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಹಗರಣದಲ್ಲಿ ಭಾಗಿಯಾದ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ, ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರ, ಗುತ್ತಿಗೆ ನೌಕರ ಹೇಮಚಂದ್ರ ಚಿಂತಾಮಣಿ ಹಾಗೂ ಹಲವು ರೈತರು ಮತ್ತು ಐಡಿಬಿಐ ಬ್ಯಾಂಕ್, ಕೆವಿಜಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿ 14 ಜನರ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು.

ಇಪ್ಪತ್ತೈದು ಕೋಟಿ ಹಗರಣದ ಬಗ್ಗೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ದಾಖಲೆ ಬಿಡುಗಡೆ ಮಾಡಿ ಈ ಕುರಿತು ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಲಿಖಿತ ದೂರು ನೀಡಿದ ನಂತರ ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರ ಪ್ರಕರಣ ದಾಖಲಿಸಿದ ಬಳಿಕ ಮಹತ್ವದ ಹೆಜ್ಜೆ ಇರಿಸಿತ್ತು.

ಜೊತೆಗೆ ಇಬ್ಬರು ಸಿಬ್ಬಂದಿಗಳಾದ ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರನನ್ನು ಸೇವೆಯಿಂದ ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಇದು ಬಹು ಕೋಟಿ ಹಗರಣವಾಗಿದ್ದು, ಇದನ್ನು ಸಿಐಡಿ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದರು.

ಅಲ್ಲದೆ, ಈ ಕುರಿತು ಧಾರವಾಡ ಲೋಕಾಯುಕ್ತರಿಗೆ ಕೂಡ ನೊಂದ ರೈತ ಶಿವನಗೌಡ ಪಾಟೀಲ್, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಸದಸ್ಯರಾದ ಮಿಥುನ್ ಜಾಧವ್, ವಕೀಲರಾದ ಐ.ಕೆ.  ಧರಣಗೌಡರ, ಗುರು ಅಂಗಡಿ, ರೈತ ಶಿವನಗೌಡ  ಹಾಗೂ ಪದಾಧಿಕಾರಿಗಳು ದೂರು ಸಲ್ಲಿಸಿದ್ದರು.

ಆದರೂ ರಾಜ್ಯದ ಬಿಜೆಪಿ ಸರಕಾರ ಇದನ್ನು ಮೊದಲ ಹಂತದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಹಿನ್ನೆಲೆಯಲ್ಲಿ 420 ಕೇಸ್ ದಾಖಲಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಹೋರಾಟಕ್ಕೆ ಎರಡನೇ ಹಂತದ ಜಯ ಸಿಕ್ಕಂತಾಗಿತ್ತು.

ಈ ಹಗರಣದಲ್ಲಿ ಸಣ್ಣಪುಟ್ಟ ಪತ್ರಿಕೆ ಹೆಸರು ಹೇಳಿಕೊಂಡು ಬದುಕು ಸಾಗಿಸುವ ಕೆಲ ಆಸೆಬುರಕ ಪತ್ರಕರ್ತರು, ಮರಿ‌ ಪುಡಾರಿ ರಾಜಕಾರಣಿಗಳು ಹಾಗೂ ಕೆ ಐ ಎ ಡಿ ಬಿಯ ಏಜೆಂಟ್ ಆಗಿ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ ದೊಡ್ಡ ಕುಳಗಳು ಭಾಗಿಯಾಗಿರಯವ ಕುರಿತು
ಇನ್ನೂ ಹಲವರನ್ನು ವಿಚಾರಣೆ ನಡೆಸಿ ಕಂಬಿ ಹಿಂದೆ ಹಾಕಿದಾಗ ಮಾತ್ರ ಇದರ ಸತ್ಯಾಂಶ ಹಾಗೂ ಇನ್ನೊಂದು ಕರಾಳ ಮುಖ‌ ಬಯಲಿಗೆ ಬರುತ್ತದೆ ಎಂಬುದರಲಿ ಯಾವುದೇ ರೀತಿಯ ಅನುಮಾನವಿಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *