ರಾಜ್ಯ

ಧಾರವಾಡದಲ್ಲಿ ಸಂಚಾರಿ ಪೊಲೀಸರ ಮಿಂಚಿನ ಕಾರ್ಯಾಚರಣೆ : 50 ಕ್ಕೂ ಹೆಚ್ಚು ವಾಹನ ಸೀಜ್…!

ಧಾರವಾಡದಲ್ಲಿ ಸಂಚಾರಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಮೂರು ದಿನಗಳಲ್ಲಿ 50 ಕ್ಕೂ ಹೆಚ್ಚು ಕರ್ಕಶ ಶಬ್ದ ಮಾಡುತ್ತಿದ್ದ
ವಾಹನ ಸೀಜ್…!

ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಕಳೆದ ಹಲವು ದಿನಗಳಿಂದ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಯರ್ರಾ ಬ್ರಿರಿ ವಾಹನಗಳನ್ನು ಚಲಾಯಿಸುತ್ತಿದ್ದ ವಾಹನ ಸವಾರರಿಗೆ ಬಿಸಿ ತಾಕಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಧಾರವಾಡದ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್
ಮಲ್ಲನಗೌಡ ನಾಯ್ಕರ ಇವರ ನೇತೃತ್ವದಲ್ಲಿ ವಾಹನ ಸಂಖ್ಯೆ ಇಲ್ಲದ (no number plate vehicles ) ಮತ್ತು (sports sylincer) ಕರ್ಕಶ ಶಬ್ದ ಹೊಂದಿರುವ ವಾಹನಗಳನ್ನು ಸೀಜ್ ಮಾಡುವ ಕೆಲಸ ನಡೆಯುತ್ತಿದೆ.
ಮಿಂಚಿನ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರ ತಂಡ ಅಂತಹ ಬೈಕ್ ಗಳನ್ನು ಜಪ್ತಿ ಮಾಡಿ ಸರಿಯಾಗಿ ಬಿಸಿ ತಾಕಿಸುತ್ತಿದ್ದಾರೆ.

ಪಿ ಎಸ್ ಐ ಅನಿಲ್ ಕುಮಾರ್ ಎ ಎಸ್ ಐ ಗಳಾದ ವೀರೇಶ್ ಬಳ್ಳಾರಿ, ಶ್ರೀಮತಿ ಸೀತಾ ಕಟಗಿ, ವೈ ಡಿ ವೇದರ್, ಎಸ್. ಹೆಚ್. ಕಡಕೋಳ, ಹೆಡ್ ಕಾನ್ಸಟೇಬಲ್ ಗಳಾದ ಡಿ.ವಿ ಘಾಳರೆಡ್ಡಿ, ಎಚ್ .ಎಮ್ ರೊಳ್ಳಿ, ಪೊಲೀಸ್ ಕಾನ್ಸಟೇಬಲ್ ಗಳಾದ ಬಸಯ್ಯ ಜಿ.ಎಸ್, ಶಿವಾನಂದ ಸುತಗಟ್ಟಿ. ಬಾಬು ಸೌದತ್ತಿ, ಬಸವರಾಜ್ ಹಾಗೂ ಇತರರು ಈ ಕಾರ್ಯಾಚರಣೆ ನಡೆಸುವ ಮೂಲಕ ಸಂಚಾರ ನಿಯಮ ಪಾಲಿಸುವ ಕುರಿತು ಪಾಠ ಮಾಡುತ್ತಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *