ಸಿನಿಮಾ

ನಟಿ ರಾಗಿಣಿ, ಸಂಜನಾಗೆ ಮತ್ತೇ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ

ಬೆಂಗಳೂರು prajakiran.com : ಅಂತರ್ ರಾಷ್ಟ್ರೀಯ ಮಟ್ಟದ ಡ್ರಗ್ಸ್ ಜಾಲದ ನಂಟು ಹೊಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ  ಮತ್ತಷ್ಟು ಮಾಹಿತಿ ಕಲೆ ಹಾಕಲು ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಅವರಿಗೆ ನ್ಯಾಯಾಲಯ ಮತ್ತೇ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಶುಕ್ರವಾರ ಸಿಸಿಬಿ ಪೊಲೀಸರು ವೀಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಕೇಳಿದ್ದರು.  

ಸಿಸಿಬಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದು, ನಮ್ಮ ಬಳಿ ಇದಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ದಾಖಲೆಗಳಿವೆ ಎಂದು ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಟಿಯರಿಬ್ಬರ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರ ವಿರುದ್ದ ಸಿಸಿಬಿ ಪೊಲೀಸರಬಳಿ ಈವರೆಗೆ ಯಾವುದೇ ಮಹತ್ವದ ಸಾಕ್ಷ್ಯಾಧರ ಸಿಕ್ಕಿಲ್ಲ.

ಡ್ರಗ್ಸ್ ಜಾಲದಲ್ಲಿ ಇವರಿಬ್ಬರು ಇದ್ದಾರೆ ಎಂಬುದಕ್ಕೆ ಸಿಸಿಬಿ ಬಳಿ ಯಾವುದೇ  ದಾಖಲೆಗಳಿಲ್ಲ. ಯಾರದೋ ಹೇಳಿಕೆ ಆಧಾರದ ಮೇಲೆ ಅವ್ರನ್ನುಬಂಧಿಸಲಾಗಿದೆ ಎಂದು ನ್ಯಾಯಾಧೀಶರ ಗಮನ ಸೆಳೆದರು.

ಆದರೆ, ಇದಕ್ಕೆ ತಿರುಗೇಟು ನೀಡಿದ ಸಿಸಿಬಿ ಪರ ವಾದ ಮಂಡಿಸಿದ ವಕೀಲರು ಅವರ ಮೊಬೈಲ್ ನಲ್ಲಿಯೇ ಡ್ರಗ್ಸ್ ಜಾಲದ ನಂಟು ಹೊಂದಿರುವ ಸಾಕಷ್ಟು ಆರೋಪಿಗಳ ಮೊಬೈಲ್ ಸಂಖ್ಯೆಗಳು ಸಿಕ್ಕಿವೆ. ಅವರೊಂದಿಗೆ ದೇಶ-ವಿದೇಶದಲ್ಲಿ ಸುತ್ತಾಡಿದ್ದಾರೆ. ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ.

ಅವರ ಮೂಲಕ ಹಣಕಾಸಿನ ವ್ಯವಹಾರ ನಡೆಸಿದ್ದಾರೆ ಎಂಬುದಕ್ಕೆ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದರು.

ವೀಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರಾದ ಇಬ್ಬರು ನಟಿಯರು ಪರ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸಿಸಿಬಿ ಹೆಚ್ಚಿನ ವಿಚಾರಣೆಗೆ ಅಗತ್ಯವಿದೆ ಎಂದು ಮತ್ತೇ ಮೂರು ದಿನಗಳ ಕಾಲ ವಶಕ್ಕೆ ನೀಡಿದರು.

ನ್ಯಾಯಾಲಯದಿಂದ ಈ ತೀರ್ಪು ಹೊರಬರುತ್ತಿದ್ದಂತೆ ಇಬ್ಬರು ನಟಿಯರು ಕೈ ಕೈ ಹಿಚುಕಿಕೊಂಡಿದ್ದಾರೆ.

ಸಿಸಿಬಿ ಪೊಲೀಸ ವಶದಿಂದ ತಮಗೆ ಇಂದು ಮುಕ್ತಿ ಸಿಗುವ ನಿರೀಕ್ಷೆಯಲ್ಲಿದ್ದ ನಟಿ ರಾಗಿಣಿ ಹಾಗೂ ಸಂಜನಾ ಮತ್ತೆ ಮೂರು ದಿನಗಳ ಕಾಲ ಮಹಿಳಾ ಸಾಂತ್ವಾನ ಕೇಂದ್ರದಲ್ಲಿಯೇ ವಿಚಾರಣೆ ಎದುರಿಸಬೇಕಾಗಿದೆ.

ಈಗ ಜಾರಿ ನಿರ್ದೇಶನಾಲಯ ಸರದಿ :

ಶ್ರೀಲಂಕಾದ ಕ್ಯಾಸಿನೋದಲ್ಲಿ ಭಾಗವಹಿಸಿದ್ದ ನಟಿಮಣಿಯರ ವಿರುದ್ದ ಹವಾಲಾ ಹಣ ವರ್ಗಾವಣೆ ಹಾಗೂ ಅಕ್ರಮ ವಿದೇಶಿ ವಿನಿಮಯ ಆರೋಪದ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಇಸಿಆರ್ ದಾಖಲಿಸಿಕೊಂಡಿದೆ. ಆ ಮೂಲಕಅವರಿಬ್ಬರಿಗೆ ಮತ್ತೆ ಸಂಕಷ್ಟ ಹಾಗೂ ಸವಾಲು  ಎದುರಾಗಿದೆ. 

ಸಾಂತ್ವಾನ ಕೇಂದ್ರವೇ ಗತಿ :

ನಟಿ ರಾಗಿಣಿ ದ್ವಿವೇದಿ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಈಗಾಗಲೇ ಕಳೆದ ಎಂಟು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದರೆ, ನಟಿ ಸಂಜನಾ ಗಲ್ರಾನಿ ಕಳೆದ ನಾಲ್ಕು ದಿನಗಳಿಂದ ಸಾಂತ್ವಾನ ಕೇಂದ್ರದಲ್ಲಿದ್ದು ಸಿಸಿಬಿ ವಿಚಾರಣೆ ಎದುರಿಸುತ್ತಿದ್ದಾರೆ. ಮೂರು ದಿನಗಳ ಕಾಲ  ತನಿಖೆ ಮತ್ತೆ ಮುಂದುವರೆಯಲಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *