ರಾಜ್ಯ

ಧಾರವಾಡದ ಶಿಬಾರಗಟ್ಟಿ ಯುವಕರ ವಿಶಿಷ್ಟ ಸಂಕಲ್ಪ

ಧಾರವಾಡ prajakiran.com : ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಸಂಕಲ್ಪ ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದಲ್ಲಿ ಶ್ರಮದಾನ, ಆರೋಗ್ಯ ಜಾಗೃತಿ, ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಜಾಗೃತಿ ಸೇರಿದಂತೆ ವಿವಿಧ ಚಟುವಟಿಗಳು ನಡೆದಿವೆ.

“ನಮ್ಮೂರು ನಮ್ಮ ಹೆಮ್ಮೆ” ಎಂಬ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, *ಶ್ರಮದಾನ ಸೇವೆ* ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕಾರ್ಯಕ್ರಮದ ನಿಮಿತ್ತ ಗ್ರಾಮದ ಸರ್ಕಾರಿ ಶಾಲೆಯ ಮೈದಾನ, ಮುಂಭಾಗ, ಆವರಣದಲ್ಲಿನ ಕಳೆ ಗಿಡಗಂಟಿಗಳನ್ನು ಕಿತ್ತು, ಅವರಣದಲ್ಲಿ ಬಿಸಾಡಿದ್ದ  ಕಸಕಡ್ಡಿ ಸಾರಾಯಿ ಪ್ಯಾಕಟ್ ಗಳನ್ನು ಹೆಕ್ಕಿ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಸೇರಿದಂತೆ ಶ್ರಮದಾನದ ಮೂಲಕ ಹಲವು ಸೇವಾ ಚಟುವಟಿಕೆಗಳು ಕೈಗೊಂಡರು.

*ಆರೋಗ್ಯ ಜಾಗೃತಿ*

ನಂತರ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮಾಸ್ಕ್ ಸ್ಯಾನಿಟೈಸರ್ ವಿತರಿಸುವ ಜತೆಗೆ ಕೈ ತೊಳಿಸುವ ಮೂಲಕ ಜನರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.

ಕೋರೋನಾ ವಿರುದ್ಧ ರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆರ್ಸೇನಿಕಂ ಅಲ್ಬಂ-೩೦ ಎಂಬ ೮ ಸಾವಿರ ಮಾತ್ರೆಗಳನ್ನು ವಿತರಿಸಲಾಯಿತು. 

*ಕಲಿಕಾ ಸಾಮಗ್ರಿ ವಿತರಣೆ*

ಬಾಲ ಕಾರ್ಮಿಕ ಪದ್ದತಿ ನಿರ್ಮೂಲನಾ ಜಾಗೃತಿ ಮೂಡಿಸಿ ಸ್ಥಳೀಯ ಬಡ ಮಕ್ಕಳಿಗೆ ಎನ್.ಸಿ.ಎಲ್.ಪಿ ಯೋಜನೆ ಮತ್ತು ಸ್ಥಳೀಯ ಯುವಕರ ಸಹಕಾರದೊಂದಿಗೆ ಅಂಕ ಲಿಪಿ, ನೋಟಬುಕ್, ಪೆನ್ಸಿಲ್ ಹಾಗೂ ಕಂಪಾಸಗಳು ಸೇರಿದಂತೆ ೪೦ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು  ವಿತರಿಸಿ ಖುಷಿ ಪಟ್ಟರು. 

*ಸ್ಥಳಿಯರ ಸಹಭಾಗಿತ್ವ*

 ಬೆಳಿಗ್ಗೆಯಿಂದ ಪ್ರಾರಂಭವಾದ ವಿವಿಧ ಚಟುವಟಿಕೆಗಳ ಮುಕ್ತಾಯದ ವರೆಗೂ ಸ್ಥಳೀಯ ಮಹಿಳೆಯರು, ಯುವಕರು  ಗ್ರಾಮದ ಮುಖಂಡರು ಸೇರಿದಂತೆ ೫೦ಕ್ಕೂ ಅಧಿಕ ಜನ ಉತ್ಸಾಹದಿಂದ ಭಾಗವಹಿಸಿ ಸೇವೆ ಸಲ್ಲಿಸಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು. 

*ಮಾದರಿ ಗ್ರಾಮದ ಸಂಕಲ್ಪ*

ಐತಿಹಾಸಿಕ ಹಿನ್ನೆಲೆಯುಳ್ಳ ಶಿಬಾರಗಟ್ಟಿ ಗ್ರಾಮವನ್ನು ಬರುವ ದಿನಗಳಲ್ಲಿ ಮಾದರಿ ಗ್ರಾಮವಾಗಿ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯರ ಸಹಕಾರದ ಅಗತ್ಯವಿದೆ ಎಂದು  ಸಂಕಲ್ಪ ಸಂಸ್ಥೆಯ ಪ್ರಕಾಶ ಹೂಗಾರ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಿಯಾ ಕೋದಾನಪುರ, ಬಸಣ್ಣೆವ್ವ, ನಾರಾಯಣ ಪೋಮೊಜಿ, ಶಂಕರ ದೊಡಮನಿ, ಶಿವಪ್ಪ ಪೋಮೋಜಿ, ಬಸಮ್ಮ, ಶಂಕರ ಹೂಗಾರ, ವಿವೇಕಾನಂದ, ಮಹಾದೇವ ರಾಧಾಯಿ, ನಶೇಸಾಬ ನದಾಫ, ಬಸವರಾಜ ಗಿರೆಪ್ಪನವರ, ವಾಸುದೇವ ಪೋಮೊಜಿ, ವಿಠ್ಠಲ ಬಾಲನವರ ಸೇರಿದಂತೆ ಗ್ರಾಮಸ್ಥರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *