ರಾಜ್ಯ

ಧಾರವಾಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ೯ ಪ್ರಶಸ್ತಿಗಳಿಗೆ ೧೧ ಪತ್ರಕರ್ತರ ಆಯ್ಕೆ

ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೧೯-೨೦ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳ ಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋ ಗಳಿಗೆ ಈ ಬಾರಿ ೬ ವಿಭಾಗದಲ್ಲಿನ ೯ ಪ್ರಶಸ್ತಿಗಳಿಗೆ ೧೧ ಜನರನ್ನು ಆಯ್ಕೆ ಮಾಡ ಲಾಗಿದೆ. 

ಪ್ರಶಸ್ತಿಯ ಹೆಸರು ಹಾಗೂ ಪುರಸ್ಕೃತರ ಇಂತಿದೆ

೧. ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ

ಪುರಸ್ಕೃತರು: ಪ್ರಕಾಶ ಶೇಟ್, ಪ್ರಧಾನ ವರದಿಗಾರರು, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ ವರದಿ ವಿಷಯ: ಕರಾಳ ಕ್ವಾರಿ ಕುರಿತ ಸರಣಿ ವರದಿ

೨. ಶ್ರೀಮತಿ ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ ಪುರಸ್ಕೃತರು: ಕೃಷ್ಣಿ ಶಿರೂರ, ಹಿರಿಯ ವರದಿಗಾರರು, ಪ್ರಜಾವಾಣಿ, ಹುಬ್ಬಳ್ಳಿ ವರದಿ ವಿಷಯ: ಕಿಮ್ಸ್‌ಗೂ ಬೇಕ್ರಿ ಸ್ಕ್ಯಾನಿಂಗು, ಟ್ರೀಟ್‌ಮೆಂಟು…

೩. ಜೀತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ  ಪುರಸ್ಕೃತರು: ಪ್ರಭಾಕರ ನಾಯಕ, ವರದಿಗಾರರು, ಉದಯವಾಣಿ, ಕಲಘಟಗಿ ವರದಿ ವಿಷಯ: ತುಮರಿಕೊಪ್ಪ ಗ್ರಾಮಸ್ಥರಿಗೆ ಜಲಬೇನೆ

೪. ಶ್ರೀ ಸುಲೇಮಾನ ಅಬ್ದುಲ್ ಅಜೀಜಸಾಬ ಮುನವಳ್ಳಿ (ಪೊಲೀಸ್ ಇಲಾಖೆ) ಅತ್ಯುತ್ತಮ ಲೇಖನ ಪ್ರಶಸ್ತಿ ಪುರಸ್ಕೃತರು: ಪ್ರಮೋದ ಕೆ. ವರದಿಗಾರರು, ಪ್ರಜಾವಾಣಿ, ಹುಬ್ಬಳ್ಳಿ ವರದಿ ವಿಷಯ: ಕುಸ್ತಿ ಹಬ್ಬ ಹೇಳಿ ಹೋದ ಕಥೆ…

೫. ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಅತ್ಯುತ್ತಮ ಲೇಖನ ಪ್ರಶಸ್ತಿ ಪುರಸ್ಕೃತರು: ನಾಗರಾಜ ಹೆಗಡೆ ಮತ್ತಿಗಾರ, ಹಿರಿಯ ಉಪಸಂಪಾದಕರು, ವಿಜಯವಾಣಿ, ಹುಬ್ಬಳ್ಳಿ ವರದಿ ವಿಷಯ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೇ ಸೂಕ್ತ ಪರಿಹಾರ!

೬. ಶ್ರೀ ಎಂ.ಡಿ.ಗೊಗೇರಿ ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿ ಪುರಸ್ಕೃತರು; ಗುರು ಭಾಂಡಗೆ, ಛಾಯಾಗ್ರಾಹಕರು, ವಿಜಯವಾಣಿ, ಹುಬ್ಬಳ್ಳಿ ವಿಷಯ: ಮಣ ಭಾರ – ಕೂಲಿಕಾರನ ಬವಣೆ ಸೂಚಿಸುವ ಚಿತ್ರ.

೭. ಡಾ. ಬಿ.ಎಫ್ ದಂಡಿನ್ ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿ ಪುರಸ್ಕೃತರು :ಮಂಜುನಾಥ ಎಸ್. ಹೂಗಾರ, ಪುಟ ವಿನ್ಯಾಸಕ, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ ವಿಷಯ: ಕರೊನಾ ಕಾರ್ಗತ್ತಲಿನಲ್ಲೂ ಬಡವರಿಗೆ ಬೆಳಕಾದ ದಿನಕರ

೮.  ಶ್ರೀ ವಸಂತ ಹೊರಟ್ಟಿ (ಆಕ್ಸ್‌ಫರ್ಡ್ ಕಾಲೇಜ್) ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ  ಪುರಸ್ಕೃತರು; ಹರ್ಷ ಕುಲಕರ್ಣಿ (ವರದಿಗಾರರು), ವಿನಾಯಕ ಪೂಜಾರಿ (ಕ್ಯಾಮರಾಮನ್), ದಿಗ್ವಿಜಯ ನ್ಯೂಸ್, ಹುಬ್ಬಳ್ಳಿ ವಿಷಯ: ವಾಣಿಜ್ಯ ನಗರಿ ಹುಬ್ಬಳ್ಳಿ ರಸ್ತೆಗಳ ಗೋಳು 

೯.  ದಿ.ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ  ಪುರಸ್ಕೃತರು; ನವೀನ ಪರದೇಶಿ (ವರದಿಗಾರರು), ನಾರಾಯಣಗೌಡ (ಕ್ಯಾಮರಾಮನ್), ಪಬ್ಲಿಕ್ ಟಿವಿ, ಹುಬ್ಬಳ್ಳಿ ವಿಷಯ: ವಯೋವೃದ್ಧರ ಆಶಾಕಿರಣ ಹಗಲು ತಂಗುದಾಣ

ಪ್ರಶಸ್ತಿಯು ತಲಾ ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಅಲ್ಲದೆ ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಪ್ರಶಸ್ತಿಯು (ವರದಿಗಾರ ಹಾಗೂ ಕ್ಯಾಮೆರಾಮನ್ ಇಬ್ಬರಿಗೂ ಸೇರಿ ೧೦ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಪ್ರಶಸ್ತಿ ಆಯ್ಕೆ ಸಮಿತಿಯು ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಬಿಜಾಪೂರ ಅಧ್ಯಕ್ಷತೆಯಲ್ಲಿ ಜಗದೀಶ ಬುರ್ಲಬಡ್ಡಿ, ತನುಜಾ ನಾಯ್ಕ, ಕೃಷ್ಣಾ ದಿವಾಕರ, ಮಧುಕರ ಭಟ್ಟ, ಮೆಹಬೂಬ ಮುನವಳ್ಳಿ, ಪ್ರಕಾಶ ನೂಲ್ವಿ ಹಾಗೂ ಮಂಜುನಾಥ ಜರತಾರಘರ ಅವರನ್ನೊಳಗೊಂಡಿತ್ತು.

ತಿಂಗಳಾಂತ್ಯಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ  ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *