ಜಿಲ್ಲೆ

ಧಾರವಾಡದ ಮಾಳಮಡ್ಡಿಯಲ್ಲಿ ಗಣೇಶ ವಿಸರ್ಜನೆಗೆ ಕೃತಕ ಬಾವಿ

ಧಾರವಾಡ prajakiran.com : ಧಾರವಾಡದ ಮಾಳಮಡ್ಡಿಯ ವೀರ ಸಾವರ್ಕರ ಗೆಳೆಯರ ಬಳಗದ ವತಿಯಿಂದ ೬ ನೇ ವರ್ಷದ ಗಣೇಶೋತ್ಸವ ಹಾಗೂ ವಿಗ್ರಹದ ವಿಸರ್ಜನೆ ಹಿನ್ನಲೆಯಲ್ಲಿ ವನವಾಸಿ ಶ್ರೀ ರಾಮ ಮಂದಿರದ ಸಭಾ ಭವನದ ಆವರಣದಲ್ಲಿ ಕೃತಕ ಬಾವಿ ನಿರ್ಮಿಸಲಾಗಿದೆ.

ಆರು ಸಾವಿರರೂಪಾಯಿ ವೆಚ್ಚದಲ್ಲಿಇಂಜಿನಿಯರ್‌ ರವೀಂದ್ರ ದೇಶಪಾಂಡೆ ಹಾಗೂ ಸಿಬ್ಬಂದಿ ಸುಭಾಷ್‌ ಈ ಕೃತಕ ಬಾವಿ ನಿರ್ಮಿಸಿದ್ದಾರೆ.

ಸಾವಿರ ಲೀಟರ್ ಸಾಮರ್ಥ್ಯದ ಸಿಂಟೆಕ್ ಟ್ಯಾಂಕ್ ಕತ್ತರಿಸಿ ಬಾವಿ ಮಾದರಿಯಲ್ಲಿ ಅಳಡಿಸಲಾಗಿದೆ. ಐದು ದಿನಗಳ ಕಾಲ ಈ ಕೃತಕ ಬಾವಿಯಲ್ಲಿ ಸಾರ್ವಜನಿಕರು ಗಣೇಶ ವಿಗ್ರಹಗಳನ್ನು ವಿಸರ್ಜಿಸಬಹುದು.

ಈ  ಕೃತಕ ಬಾವಿಯಲ್ಲಿಯೇ ಮಾಳಮಡ್ಡಿಯ ವೀರ ಸಾವರ್ಕರ ಗೆಳೆಯರ ಬಳಗದ ೬ ನೇ ವರ್ಷದ ವಿಗ್ರಹದ ವಿಸರ್ಜನೆ ನಡೆಯಿತು.

ಪರಿಷ್ಕೃತ ನಿಯಮಾವಳಿಗಳಡಿ ಗಣೇಶ ಹಬ್ಬವನ್ನು ನೆರವೇರಿಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ, ವನವಾಸಿ ಶ್ರೀ ರಾಮ ಮಂದಿರದ ಆವರಣದಲ್ಲಿ ಮಂಟಪ ಹಾಗೂ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.

ಗಣೇಶೋತ್ಸವ ವನ್ನು ಕೋವಿಡ್ -೧೯ ಹಿನ್ನಲೆಯಲ್ಲಿ, ಮೂರು ದಿನದ ಬದಲಿಗೆ ಈ ಬಾರಿಒಂದೇ ದಿನಕ್ಕೆ ಸೀಮಿತಗೊಳಿಸಿ ವೀರ ಸಾವರ್ಕರ ಗೆಳೆಯರ ಬಳಗ, ಪ್ರಾಣ ಪ್ರತಿಷ್ಟಾಪನೆ ಹಾಗೂ ಗಣಹೋಮ ನೆರವೇರಿಸಿ, ಕೋವಿಡ್ ವಾರಿಯರ್‌ಗಳಾದ ಪೊಲೀಸ್ ಸಿಬ್ಬಂದಿಯಿಂದ ವಿಗ್ರಹದ ವಿಸರ್ಜನೆ ಕೈಗೊಳ್ಳಲಾಯಿತು.

ವಿದ್ಯಾಗಿರಿ ಪೊಲೀಸ್‌ಠಾಣೆಯ ಸಬ್‌ಇನ್ಸಪೆಕ್ಟರ್‌ಎಸ್.ಟಿ.ದಾಸರೆಡ್ಡಿ ಹಾಗೂ ಸಿಬ್ಬಂದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ ಅವರು ಮಹಾಮಂಗಳಾರತಿ ನೆರವೇರಿಸಿದರು.

ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ ಭಕ್ತಾದಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವೀರ ಸಾವರ್ಕರ್‌ಗೆಳೆಯರ ಬಳಗದ ಪ್ರಭಾಕರ ದೇಶಪಾಂಡೆ, ವಿಷ್ಣುಹುಕ್ಕೇರಿ, ಮಲ್ಲಿಕಾರ್ಜುನ ಚಟ್ಟನ್ನವರ, ಭಾಸುರಾನಂದ ಕುಲಕರ್ಣಿ, ಗುರುದತ್ತ ದೇಶಪಾಂಡೆ, ರಘೋತ್ತಮ, ಆದರ್ಶ, ವಿನಾಯಕ ಜೋಶಿ, ಮಾಳಮಡ್ಡಿ ಹಾಗೂ ವನವಾಸಿ ಶ್ರೀ ರಾಮ ಮಂದಿರದ ವಿಶ್ವಸ್ಥರು ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *