ಅಪರಾಧ

ಗದಗನಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ 26 ಮೊಬೈಲ್ ಹಸ್ತಾಂತರ

ಮಂಜುನಾಥಎಸ್.ರಾಠೋಡ

ಗದಗ prajakiran.com : ಮೊಬೈಲ್ ಒಮ್ಮೆ ಕಳೆದುಕೊಂಡರೆ ಮತ್ತೇ ಮೂಲ ಮಾಲೀಕರಿಗೆ ಸಿಗುವುದು ಬಲು ಅಪರೂಪ.

ಆದರೆ ಗದಗ ಜಿಲ್ಲೆಯ ಗಜೇಂದ್ರಗಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 26 ಮೋಬೈಲ್ ಗಳನ್ನು ಪೊಲೀಸರು ಮೂಲ ಮಾಲೀಕರಿಗೆ ಹಸ್ತಾಂತರಿಸಿ ಗಮನ ಸೆಳೆದಿದ್ದಾರೆ.

ಹೌದು ಇದು ಅಚ್ಚರಿಯಾದ್ರೂ ಸತ್ಯ. ಅಂದಾಜು ಕಿಮ್ಮತ್ತು ರೂ. 3,18,000/- ಮೌಲ್ಯದ ವಿವಿಧ ಕಂಪನಿಯ ಮೋಬೈಲ್ ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಎಸ್ಪಿ ಯತೀಶ. ಎನ್. ಒಪ್ಪಿಸಿದರು.

ಈ ವೇಳೆ ಪಿಎಸ್ಐ ಗುರುಶಾಂತ ದಾಶ್ಯಾಳ, ಸಿಬ್ಬಂದಿಗಳಾದ ಸುರೇಶ ಮಂತಾ, ಮಹೇಶ ಬಳ್ಳಾರಿ, ಚಂದ್ರು ಹಾದಿಮನಿ, ಮಂಜುನಾಥ ಲಮಾಣಿ, ನಿಂಗಪ್ಪ ಹಲಬಾಗಿಲ ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *