ರಾಜ್ಯ

ಪೊಲೀಸರ ಮೇಲೆ ಕೈ ಮಾಡಿದವರ ಮೇಲೆ‌ ನಿರ್ದಾಕ್ಷಿಣ್ಯ ಕ್ರಮ

ಧಾರವಾಡ prajakiran.com : ಇರಾನಿ ಗ್ಯಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆ ಕೈ ಮಾಡಿದವರ ಮೇಲೆ‌ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು. ಧಾರವಾಡದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ನೀವು ಆ್ಯಕ್ಷನ್ ನೋಡ್ತಿರಾ. ಈ ಹಿಂದೆ ಕೂಡ ಅವರು ಹಲ್ಲೆ ಮಾಡಿದ್ದರು. ಕಾನೂನು ಕೈ ತೆಗೆದುಕೊಳ್ಳುವವರ ಸದೆ ಬಡೆಯುವ ಕೆಲಸ ಮಾಡುತ್ತೇವೆ ಎಂದರು. ಮರಾಠ ಸಮಾಜಕ್ಕೆ ಮೀಸಲಾತಿ ನೀಡದಿದ್ದಲ್ಲಿ ಚುನಾವಣೆ ಬಹಿಷ್ಕಾರ […]

ರಾಜ್ಯ

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ಲಾಬೂರಾಮ್ ಅಧಿಕಾರ ಸ್ವೀಕಾರ

ಹುಬ್ಬಳ್ಳಿ-ಧಾರವಾಡ prajakiran. com : ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಲಾಬೂರಾಮ್ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಪೊಲೀಸ್ ಆಯುಕ್ತ ಆರ್. ದಿಲೀಪ್ ಲಾಬೂರಾಮ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಹುಬ್ಬಳ್ಳಿ ಧಾರವಾಡ ಅವಳಿನಗರ ಕಮಿಷನರೇಟ್ ಕಚೇರಿ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅದ್ದೂರಿ ಸ್ವಾಗತ ಕೋರಿದರು. ಬಳಿಕ ನೂತನ ಪೋಲೀಸ್ ಆಯುಕ್ತ ಲಾಬೂರಾಮ್ ಅವರು ಮಾತನಾಡಿ, ಇದೇ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕ […]

ರಾಜ್ಯ

ಮಾನವೀಯತೆ ಮೆರೆದ ಧಾರವಾಡ ಗ್ರಾಮೀಣ ಪಿಎಸ್‌ಐ ಮಹೇಂದ್ರಕುಮಾರ

ಧಾರವಾಡ prajakiran.com  : ಪೊಲೀಸರೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ  ಧಾರವಾಡ ಗ್ರಾಮೀಣ ಪಿಎಸ್‌ಐ ಮಹೇಂದ್ರಕುಮಾರ ಮಾನವೀಯತೆ ಮೆರೆಯುವ ಮೂಲಕ ಸದಾ ತಮ್ಮಿಂದ ಆದಷ್ಟು ಸಮಾಜ ಸೇವೆ, ಸಹಾಯ ಹಸ್ತ ಚಾಚುತ್ತಲೇ ಇತರರಿಗೆ ವಿಭಿನ್ನವಾಗಿ ನಿಂತಿದ್ದಾರೆ. ಅಂತಹ ಮತ್ತೊಂದು ಸಮಾಜ ಸೇವೆಯ ಮೂಲಕ ಮತ್ತೆ ಪೊಲೀಸ್ ಇಲಾಖೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ. ಹೌದು ಅಪಘಾತದಲ್ಲಿ ಕಾಲು ಮುರಿದುಕೊಂಡು ದೂರದ ಮಧ್ಯಪ್ರದೇಶಕ್ಕೆ ಹೋಗಲಾರದೆ ಪರದಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಹಣಕಾಸಿನ ಸಹಾಯ ಹಾಗೂ ಪ್ರಯಾಣಕ್ಕೆ ಕಾರ್ ವ್ಯವಸ್ಥೆ ಮಾಡಿ ಸಹೃದಯತೆ ಮೆರೆದಿದ್ದಾರೆ . […]

ಅಪರಾಧ

ಧಾರವಾಡದಲ್ಲಿ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ…!

ಧಾರವಾಡ prajakiran.com : ಧಾರವಾಡದಲ್ಲಿ ಹಾಡಹಗಲೇ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬುಧವಾರ ಸಂಜೆ ಮೆಹಬೂಬ್ ನಗರದಲ್ಲಿ ನಡೆದಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರಕ್ಕಾಗಿ ಈ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ಧಾರವಾಡದ ಮೆಹಬೂಬ್ ನಗರ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಮೆಹಬೂಬ್ ನಗರದ ಆಟೋ ಡ್ರೈವರ್ ಮಾಬುಲಿ ಹಿರೇಕುಂಬಿ ಎಂಬಾತನೇ ಮಾರಣಾಂತಿಕವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈತನನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವನನ್ನು ಮಾಬೂಲಿ ತೋಸಿವಾಲೆ  ಎಂದು […]

ಜಿಲ್ಲೆ

ಧಾರವಾಡದಲ್ಲಿ ಸೆ.೨೫ ರಿಂದ ಮಾಸ್ಕ್ ಬಳಕೆ ಉಲ್ಲಂಘಿಸುವವರಿಗೆ ದಂಡ

ವಿಶೇಷ ಕಾರ್ಯಾಚರಣೆಗೆ ಧಾರವಾಡ ಜಿಲ್ಲಾಡಳಿತ ನಿರ್ಧಾರ ಇದುವರೆಗೆ ೩೦ ಲಕ್ಷ ರೂ. ದಂಡ ಆಕರ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಧಾರವಾಡ prajakiran.com : ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಮಾಸ್ಕ್ ಬಳಕೆ ಮಾಡದವರಿಂದ ಜಿಲ್ಲೆಯಲ್ಲಿ ಈಗಾಗಲೇ ೩೦ ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ದಂಡ ವಿಧಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸಲು  ನಾಳೆ ಸೆ.೨೫ ರಿಂದ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ […]

ರಾಜ್ಯ

ಗದಗನಲ್ಲಿ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ : ಒಂದೇ ದಿನ ೨೦೭ ಕೇಸ್, ೧ ಲಕ್ಷ  ದಂಡ ವಸೂಲಿ

ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ “ದಂಡ ಪ್ರಯೋಗ“ ಗದಗ prajakiran.com : ಹೆಲ್ಮೆಟ್‌ ರಹಿತ ಸವಾರರಿಗೆ ಸೋಮವಾರ ನಗರದ ಗದಗ  ಪೊಲೀಸರು ಕಾರ್ಯಾಚರಣೆಗೆ ಇಳಿದು ದ್ವಿಚಕ್ರ ವಾಹನ ಸವಾರರಿಗೆ “ಶಾಕ್” ನೀಡಿದರು. ನೂತನ ಮೋಟಾರು ವಾಹನ ಕಾಯಿದೆಯನ್ವಯ ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದರು. ಬೆಳಗ್ಗೆಯಿಂದ ಹೆಲ್ಮೆಟ್‌ ಇಲ್ಲದ ಸಂಚರಿಸುತ್ತಿದ್ದ ಬೈಕ್‌ ಸವಾರರನ್ನು ತಡೆದು ದಂಡ ವಿಧಿಸುತ್ತಿದ್ದ ದೃಶ್ಯಗಳು ಅವಳಿ ನಗರದಲ್ಲಿಸಾಮಾನ್ಯವಾಗಿತ್ತು  ಸೋಮವಾರ ಒಂದೇ ದಿನ ೨೦೭ ಕೇಸ್ ದಾಖಲಿಸಿ, ೧,೦೩,೫೦೦  ದಂಡ ವಸೂಲಿ […]

ಅಪರಾಧ

ಧಾರವಾಡದ ಇಬ್ಬರು ಕುಖ್ಯಾತ ಕಳ್ಳರ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಧಾರವಾಡದ ಇಬ್ಬರು ಕುಖ್ಯಾತ ಕಳ್ಳರನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಇಬ್ಬರು ಕುಖ್ಯಾತ ಕಳ್ಳರು ಧಾರವಾಡದ ಬಾಲಾಜಿ ಬಂಗಾರದ ಅಂಗಡಿ ಮೇಲ್ಛಾವಣಿ ಒಡೆದು ಅಂಗಡಿಗೆ ನುಗ್ಗಿ, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡ ಶಹರ ಪೊಲೀಸ್ ಠಾಣೆ ಪೊಲೀಸರು ಧಾರವಾಡ ಮದಾರಮಡ್ಡಿಯ ಜಾವೀದ್ ಶಾಮೀದ್ ಅಲಿ ಡಲಾಯತ್ ಹಾಗೂ ಆಜಾದ ನಗರದ ಪ್ರಜ್ವಲ್ ತಂದೆ ಲಕ್ಷ್ಮಣ ಮಾದರ ನನ್ನು […]

ರಾಜ್ಯ

ತುಂಗಭದ್ರಾ ನದಿ ಪ್ರವಾಹಕ್ಕೆ ಚಕ್ಕಡಿ ಸಮೇತ ಇಬ್ಬರು ನಾಪತ್ತೆ

ಹಾವೇರಿ prajakiran.com : ತುಂಗಭದ್ರಾ ನದಿ ಪ್ರವಾಹಕ್ಕೆ ಚಕ್ಕಡಿ ಸಮೇತ ಇಬ್ಬರು ನಾಪತ್ತೆಯಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಚಕ್ಕಡಿ ಸಮೇತ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ತುಂಗಭದ್ರಾ ನದಿ ಪ್ರವಾಹಕ್ಕೆ ಎರಡು ಎತ್ತುಗಳು ಸಮೇತ ಅವರಿಬ್ಬರು ಹರಿದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇವರಿಬ್ಬರು ಅರೆ ಮಲ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ. ಮಾಹಿತಿ ಅರಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾಣೆಬೆನ್ನೂರ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪೊಲೀಸರು […]

ಅಪರಾಧ

ಧಾರವಾಡದಲ್ಲಿ ಮನೆಗಳ್ಳನ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಮನೆಗೆ ಹಾಕಿದ್ದ ಕೀಲಿಯನ್ನು ಮುರಿದು ಮನೆಗಳ್ಳತನ ಮಾಡಿದ್ದ ಖದೀಮನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಜೋಶಿ ಗಲ್ಲಿ ನಿವಾಸಿ ಪ್ರಕಾಶ ತಂದೆ ರಾಮು ಇಂಗಳೆ ಅವರು ಸೆ. 7ರಂದು ಮನೆ ಮಂದಿಯೆಲ್ಲಾ ಕೀಲಿಹಾಕಿಕೊಂಡು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪಗೆ ಹೋಗಿದ್ದರು. ಈ ವೇಳೆ ಮನೆ ಕೀಲಿ ಮುರಿದು ಒಳನುಗ್ಗಿದ್ದ ಖದೀಮ ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಹಾಗೂ ನಗದು ದೋಚಿಕೊಂಡು ಹೋಗಿದ್ದ. ಆರೋಪಿ ಲಕ್ಷ್ಮಿಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರು (20) ಇತನನ್ನು ಬಂಧಿಸಿ […]

ಅಪರಾಧ

ಧಾರವಾಡದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ದೌರ್ಜನ್ಯ

ಧಾರವಾಡ prajakiran.com : ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಡಾವಣೆಯೊಂದರಲ್ಲಿ ಎಂಟು ವರ್ಷದ ಬಾಲಕಿ ಮೇಲೆ  ದೌರ್ಜನ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಮೊಬೈಲ್ ಕೊಟ್ಟ ಹಾಗೆ ಮಾಡಿ ಪುಸಲಾಯಿಸಿ, ಮನೆಗೆ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ್ದಾನೆ. ಅಲ್ಲದೆ, ಪೋಷಕರಿಗೆ ವಿಷಯ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದ ಎಂದು ಆಕೆಯ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿ ಶಂಕರ್ ವಿರುದ್ದ ಕಲಂ 342, 376, 506 ಐಪಿಸಿ ಹಾಗೂ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಧಾರವಾಡ […]