ರಾಜ್ಯ

ಗದಗನಲ್ಲಿ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ : ಒಂದೇ ದಿನ ೨೦೭ ಕೇಸ್, ೧ ಲಕ್ಷ  ದಂಡ ವಸೂಲಿ

ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆದಂಡ ಪ್ರಯೋಗ

ಗದಗ prajakiran.com : ಹೆಲ್ಮೆಟ್ರಹಿತ ಸವಾರರಿಗೆ ಸೋಮವಾರ ನಗರದ ಗದಗ  ಪೊಲೀಸರು ಕಾರ್ಯಾಚರಣೆಗೆ ಇಳಿದು ದ್ವಿಚಕ್ರ ವಾಹನ ಸವಾರರಿಗೆಶಾಕ್ನೀಡಿದರು.

ನೂತನ ಮೋಟಾರು ವಾಹನ ಕಾಯಿದೆಯನ್ವಯ ಹೆಲ್ಮೆಟ್ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದರು.

ಬೆಳಗ್ಗೆಯಿಂದ ಹೆಲ್ಮೆಟ್ಇಲ್ಲದ ಸಂಚರಿಸುತ್ತಿದ್ದ ಬೈಕ್ಸವಾರರನ್ನು ತಡೆದು ದಂಡ ವಿಧಿಸುತ್ತಿದ್ದ ದೃಶ್ಯಗಳು ಅವಳಿ ನಗರದಲ್ಲಿಸಾಮಾನ್ಯವಾಗಿತ್ತು

 ಸೋಮವಾರ ಒಂದೇ ದಿನ ೨೦೭ ಕೇಸ್ ದಾಖಲಿಸಿ, ,೦೩,೫೦೦  ದಂಡ ವಸೂಲಿ ಮಾಡಿದ್ದಾರೆ.

ಬೆಟಗೇರಿ ಹೊರವಲಯ, ಭೀಷ್ಮ ಕೆರೆ ಪಕ್ಕ, ಕಿತ್ತೂರು ಚನ್ನಮ್ಮ ಉದ್ಯಾನ, ಸ್ಟೇಶನ್ರಸ್ತೆ ಸೇರಿದಂತೆ ಅವಳಿ ನಗರದ ಹಲವೆಡೆ ಕಾರ್ಯಚರಣೆಗೆ ಇಳಿದ ಪೊಲೀಸರು, ಹೆಲ್ಮೆಟ್‌, ವಾಹನ ಚಾಲನಾ ಪರವಾನಗಿ, ವಿಮೆ ಸಹಿತ ಅಗತ್ಯ ದಾಖಲೆ ಇಲ್ಲದ ವಾಹನ ಸವಾರರಿಗೆ ದಂಡ ವಿಧಿಸಿದರು.

ಜಿಲ್ಲೆಯಲ್ಲಿ ಜನೆವರಿಯಿಂದ ಅಪಘಾತ ನಿಯಂತ್ರಿಸುವ ದೆಸೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಮಾರ್ಚ್ ತಿಂಗಳ ಮಧ್ಯದವರೆಗೂ ಅಪಘಾತ ಪ್ರಕರಣಗಳು ಕಡಿಮೆಯಾಗಿತ್ತು.

ಹೆಲ್ಮೆಟ್ ಕಡ್ಡಾಯಗೊಳಿಸಿದ ನಂತರ ದ್ವಿಚಕ್ರ ವಾಹನ ಸವಾರರು ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದ ಪ್ರಮಾಣ ಕೂಡ ಗಣನೀಯವಾಗಿ ಇಳಿಕೆ ಆಗಿದೆ.

ಇದೀಗ ಲಾಕ್ಡೌನ್ ಸಡಿಲಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಅಪಘಾತ ಪ್ರಮಾಣ ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ರು ರಸ್ತೆಗೆ ಇಳಿದು, ಹೆಲ್ಮೆಟ್ ಹಾಕದವರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸುತ್ತಿದ್ದಾರೆ.

 ಪೊಲೀಸಲು ಏಕಾಏಕಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಿದ ವಿಷಯ ತಿಳಿಯುತ್ತಿದ್ದಂತೆ ಅನೇಕ ವಾಹನ ಸವಾರರು ದಾಖಲಾತಿ, ಹೆಲ್ಮೆಟ್ಇಟ್ಟುಕೊಂಡು ಸಂಚರಿಸಿದರು.

ಕೆಲವರು ಮನೆಯಲ್ಲಿದ್ದ ಹೆಲ್ಮೆಟ್ಇದ್ದಾಗ್ಯೂ ದಂಡ ಕೊಡಬೇಕಾಯಿತಲ್ಲಎಂದು ಹಳಹಳಿಸಿದರು. ಇನ್ನು ಕೆಲವರು ದಂಡ ಕಟ್ಟಿ, ಪೊಲೀಸರಿಗೆ ಹಿಡಿಶಾಪ ಹಾಕುತ್ತಾ ಮುನ್ನಡೆದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *