ರಾಜ್ಯ

ಧಾರವಾಡದ ಕೆಲಗೇರಿ ಕೆರೆಯಲ್ಲಿ ನೂರಾರು ಪಿಓಪಿ ಗಣೇಶ ವಿಸರ್ಜನೆ….!

ಧಾರವಾಡ prajakiran.com : ಧಾರವಾಡದ ಕೆಲಗೇರಿ ಕೆರೆಯಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ ನಿಷೇಧವಿದ್ದರೂ ಬುಧವಾರ ಒಂದೇ ದಿನ ನೂರಾರು ಸಂಖ್ಯೆಯ ಗಣಪತಿ ವಿಗ್ರಹಗಳು ವಿಸರ್ಜನೆಗೊಂಡಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪಿಓಪಿ ಹಾಗೂ ಮಣ್ಣಿನ ಗಣಪತಿಗಳಾದಿಯಾಗಿ, ಕೆರೆ ಆ ವಾರದಲ್ಲಿ ನಿರ್ಮಲ್ಯ ಮತ್ತು ಸುಟ್ಟ ಪಟಾಕಿ, ಬಾಣ, ಬಿರುಬುಗಳ ರಾಶಿಯೇ ಬಿದ್ದಿದೆ. ಬಿಯರ್ ಬಾಟಲಿಗಳಿಗೂ ದಂಡೆಯ ಮೇಲೆ ಕೊರತೆ ಇಲ್ಲ. ಇದಕ್ಕೆ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂಬ ಮರುಕು ಉಂಟಾಗಿದೆ. ಈ ಬಾರಿ ಜಿಲ್ಲಾಡಳಿತ ಮತ್ತು ಮಾಲಿನ್ಯ […]

ಜಿಲ್ಲೆ

ಧಾರವಾಡದ ಮಾಳಮಡ್ಡಿಯಲ್ಲಿ ಗಣೇಶ ವಿಸರ್ಜನೆಗೆ ಕೃತಕ ಬಾವಿ

ಧಾರವಾಡ prajakiran.com : ಧಾರವಾಡದ ಮಾಳಮಡ್ಡಿಯ ವೀರ ಸಾವರ್ಕರ ಗೆಳೆಯರ ಬಳಗದ ವತಿಯಿಂದ ೬ ನೇ ವರ್ಷದ ಗಣೇಶೋತ್ಸವ ಹಾಗೂ ವಿಗ್ರಹದ ವಿಸರ್ಜನೆ ಹಿನ್ನಲೆಯಲ್ಲಿ ವನವಾಸಿ ಶ್ರೀ ರಾಮ ಮಂದಿರದ ಸಭಾ ಭವನದ ಆವರಣದಲ್ಲಿ ಕೃತಕ ಬಾವಿ ನಿರ್ಮಿಸಲಾಗಿದೆ. ಆರು ಸಾವಿರರೂಪಾಯಿ ವೆಚ್ಚದಲ್ಲಿಇಂಜಿನಿಯರ್‌ ರವೀಂದ್ರ ದೇಶಪಾಂಡೆ ಹಾಗೂ ಸಿಬ್ಬಂದಿ ಸುಭಾಷ್‌ ಈ ಕೃತಕ ಬಾವಿ ನಿರ್ಮಿಸಿದ್ದಾರೆ. ಸಾವಿರ ಲೀಟರ್ ಸಾಮರ್ಥ್ಯದ ಸಿಂಟೆಕ್ ಟ್ಯಾಂಕ್ ಕತ್ತರಿಸಿ ಬಾವಿ ಮಾದರಿಯಲ್ಲಿ ಅಳಡಿಸಲಾಗಿದೆ. ಐದು ದಿನಗಳ ಕಾಲ ಈ ಕೃತಕ ಬಾವಿಯಲ್ಲಿ […]

ರಾಜ್ಯ

ದೇಸಿ ಹಸುಗಳ ಸಗಣಿ ಬಳಸಿ ‘ಗೋಮಯ ಗಣೇಶ’

ಬೆಂಗಳೂರು prajakiran.com : ರಾಷ್ಟ್ರೀಯ ಕಾಮಧೇನು ಆಯೋಗದ ಉಪಕ್ರಮವಾಗಿ ದೇಸಿ ಹಸುಗಳ ಸಗಣಿ ಬಳಸಿ ‘ಗೋಮಯ ಗಣೇಶ’ನನ್ನು ತಯಾರಿಸಲಾಗಿದೆ. ಈ ಗಣೇಶನ ವೈಶಿಷ್ಟತೆಯೆಂದರೆ ಚತುರ್ಥಿ ಪೂಜೆಯ ನಂತರ ಗಿಡಗಳಿಗೆ ಗೊಬ್ಬರವಾಗಿಯೂ ವಿಸರ್ಜಿಸಬಹುದಾದ ಈ ಪರಿಸರ-ಸ್ನೇಹಿ ವಿಗ್ರಹ, ಸಂಪ್ರದಾಯಕ್ಕೆ ಅನುಗುಣವಾಗಿದ್ದು, ರೈತರ ಆದಾಯವನ್ನೂ ಹೆಚ್ಚಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಜಾಗೃತಿ ಟ್ರಸ್ಟ್ ಗೋಮಯ ಗಣೇಶ ವಿತರಣೆ ನಡೆಸುತ್ತಿದೆ ಎಂದು ಅವರು ವಿವರಿಸಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಮಾರುಕಟ್ಟೆಗೆ ಬಂದ ಈ ಗಣೇಶ ವಿಶಿಷ್ಟವಾಗಿದೆ ಎಂದರೆ […]

ರಾಜ್ಯ

ಗಣಪತಿ ಸಮೇತ ಜೈಲಿಗೆ ಹಾಕಿ ಎಂದ ಪ್ರಮೋದ ಮುತಾಲಿಕ್

ಧಾರವಾಡ prajakiran.com :  ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡದಿದ್ದರೆ ಗಣಪತಿ ಸಮೇತ ನಮ್ಮನ್ನು ಜೈಲಿಗೆ ಹಾಕಲಿ, ನಾನು ಅದಕ್ಕಾಗಿ ಜೈಲಿಗೆ ಹೋಗಲು ಸಿದ್ದ ಎಂದು ಶ್ರೀರಾಮಸೇನೆ ರಾಷ್ಟ್ರೀಯಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಸಿದರು. ಅವರು ಸೋಮವಾರ ಧಾರವಾಡದಲ್ಲಿ ಶ್ರೀ ರಾಮ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗಣಪತಿ ಮೂರ್ತಿ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಧಾರವಾಡದ ಡಿಸಿ ಕಚೇರಿ‌ ಮುಂದೆ ಪ್ರತಿಭಟನೆ ವೇಳೆ ಗಣಪತಿ ಮೂರ್ತಿ ತಯಾರಿಸಿದ ಪ್ರಮೋದ್ […]

ರಾಜ್ಯ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸುವಂತಿಲ್ಲ….!

ಗಣೇಶೋತ್ಸವ ಆಚರಣೆ ಮಾರ್ಗಸೂಚಿಗಳು ಪ್ರಕಟ ಧಾರವಾಡ prajakiran.com : ಕೋವಿಡ್ -19 ಸೋಂಕು ನಿಯಂತ್ರಿಸಲು ಈ ಬಾರಿ ಆಗಸ್ಟ್ 22 ರಂದು ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶೋತ್ಸವ ಆಚರಿಸಲು ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರ ನಿರ್ದೇಶನ ಹೊರಡಿಸಿದೆ. ಅದರ ಅನುಸಾರವಾಗಿ ಧಾರವಾಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳನ್ನು  ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ,ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಿಸಿದ್ದಾರೆ. ಹಬ್ಬವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನಗಳ ಒಳಗೆ ಅಥವಾ ಮನೆಗಳಲ್ಲಿ ಆಚರಿಸುವುದು. ಗಣೇಶ ಚತುರ್ಥಿ […]