ರಾಜ್ಯ

ಧಾರವಾಡದಲ್ಲಿ ಮೂರು ಸರ್ಕಾರಿ ಕಚೇರಿ ಸೀಲ್ ಡೌನ್ : ನೌಕರರಿಗೆ ಕರೋನಾ ಆತಂಕ

ಧಾರವಾಡ prajakiran.com :  ಧಾರವಾಡದಲ್ಲಿ ಸರ್ಕಾರಿ ಕಚೇರಿಗೆಳಿಗೆ ಕರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಇದರಿಂದಾಗಿ ನೌಕರರು ಎಲ್ಲಿ ತಮಗೆ ಹರಡುತ್ತೋ ಎಂಬ ಆತಂಕದಲ್ಲಿಯೇ ದೈನಂದಿನ ಕೆಲಸ ಕಾರ್ಯನಿರ್ವಹಿಸುವಂತಾಗಿದೆ.

ಈಗಾಗಲೇ ಧಾರವಾಡ ಜಿಪಂ ಸ್ಯಾನಿಟೈಸರ್ ಮಾಡಿ ಕೆಲಸ ನಿರ್ವಹಿಸುತ್ತಿದ್ದರೆ, ಶನಿವಾರ ಧಾರವಾಡ ಶಹರ ಪೊಲೀಸ್ ಠಾಣೆ, ಧಾರವಾಡದ ಸಿಡಿಪಿಒ ಮತ್ತು ತಹಸೀಲ್ದಾರ ಕಚೇರಿ ಸೀಲ್ ಡೌನ್ ಮಾಡಲಾಗಿದೆ.



ಧಾರವಾಡದ ಸಿಡಿಪಿಒ ಅವರಿಗೆ ಪಾಸಿಟಿವ್ ಬಂದಿದ್ದರೆ ಕಚೇರಿ ಬಾಗಿಲು ಬಂದ್ ಮಾಡಿ ನೋಟಿಸ್ ಅಂಟಿಸಲಾಗಿದೆ.

ಮಹಿಳಾ ಮುಖ್ಯ ಪೇದೆಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆ ಸೀಲ್‌‌ಡೌನ್ ಮಾಡಿ ಬೇರೆ ಕಡೆ ಸ್ಥಳಾಂತರ ಮಾಡಲಾಗಿದ್ದರೆ, ತಹಸೀಲ್ದಾರ ಕಚೇರಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಪಾಸಿಟಿವ್ ಬಂದಿದ್ದರಿಂದ ತಹಸೀಲ್ದಾರ ಕಚೇರಿ ಬಂದ್

ಮಾಡಿ ಸಿಬ್ಬಂದಿಯನ್ನು ಹೊರಗಿಟ್ಟು ಸ್ಯಾನಿಟೈಜೇಷನ್ ಮಾಡಲಾಗಿದೆ. ಆ ಮೂಲಕ ಧಾರವಾಡ ಜಿಲ್ಲೆಯನ್ನ‌ ಬಿಟ್ಟು ಬಿಡದ ಕಾಡುತ್ತಿರುವ ಕರೊನಾ ಮಹಾಮಾರಿ,



ಎರಡು ಕಚೇರಿಗಳಲ್ಲಿ ತಲಾ ಒಬ್ಬ ಸಿಬ್ಬಂದಿಗಳಿಗೆ ಸೊಂಕು ದೃಢವಾಗಿದ್ದರೆ, ಧಾರವಾಡದ ತಹಸೀಲ್ ಕಚೇರಿಗೆ ಬಂದಿದ್ದ ಒಬ್ಬ ಏಜೆಂಟ್ ನಿಗೆ ಕರೋನಾ ವಕ್ಕರಿಸಿರುವುದು ಗೊತ್ತಾಗಿದೆ.  ಈ ಹಿನ್ನಲೆಯಲ್ಲಿ ಮೂರು ಸರಕಾರಿ ಕಚೇರಿಗಳನ್ನ ಸೀಲ್ ಡೌನ್ ಮಾಡಲಾಗಿದೆ.

ಇದರಿಂದಾಗಿ ಆ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಧಾರವಾಡ ಶಹರ ಪೊಲೀಸರಲ್ಲಿ‌ ಆತಂಕ ಮನೆಮಾಡಿದೆ.



ಈಗಾಗಲೇ ಧಾರವಾಡ ಜಿಲ್ಲೆಯ 465 ಜನರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಈ ಪೈಕಿ 216  ಜನ ಇದುವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 241 ಪ್ರಕರಣಗಳು ಸಕ್ರಿಯವಾಗಿದ್ದರೆ ಎಂಟು ಜನ ಮೃತಪಟ್ಟಿದ್ದಾರೆ.

ಹೀಗಾಗಿ ಜಿಲ್ಲೆಯ ಜನತೆ ಆತಂಕದಿಂದಲೇ ದಿನ ಕಳೆಯುವ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಕರೋನಾ ಆವರಿಸಿರುವುದು ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದೆ.

 
 




 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *