ರಾಜ್ಯ

ಜು. 27ರಿಂದ ಧಾರವಾಡ ಎಪಿಎಂಸಿ ಮಾರುಕಟ್ಟೆ ಅನಿರ್ದಿಷ್ಟ ಅವಧಿಗೆ ಬಂದ್

ಧಾರವಾಡ prajakiran.com :  ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿ ಖಂಡಿಸಿ ಜು. 27ರಿಂದ ಧಾರವಾಡ ಎಪಿಎಂಸಿ ಮಾರುಕಟ್ಟೆ ಅನಿರ್ದಿಷ್ಟ ಅವಧಿಗೆ ಬಂದ್  ಮಾಡಲು ನಿರ್ಧರಿಸಲಾಗಿದೆ ಎಂದು ಧಾರವಾಡ ದಲಾಲ್ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ.

ಅವರು ಗುರುವಾರ ಧಾರವಾಡ ದಲಾಲ್ ವರ್ತಕರ ಸಂಘದ ಸರ್ವ ಸದಸ್ಯರ ಸಭೆ ಕರೆದು ಈ ತೀರ್ಮಾನ ಕೈಗೊಳ್ಳಲಾಗಿದೆ.

ಜು. 27ರಿಂದ ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸುವರೆಗೆ ಬಂದ್ ಮಾಡಲಾಗುವುದು. ರೈತ ಬಾಂಧವರು ಎಪಿಎಂಸಿಗೆ ಈ ವೇಳೆ ಯಾವುದೇ ಆಹಾರಧಾನ್ಯ, ಕಾಳುಕಡಿ ತರಬಾರದು.

ಒಂದು ವೇಳೆ ತಂದರೆ ಸರಕಾರವೇ ವ್ಯವಸ್ಥೆ ಮಾಡಬೇಕು. ಅಲ್ಲದೆ, ಅವರೇ ಅದನ್ನು ಖರೀದಿಸಬೇಕಾಗುತ್ತದೆಎಂದರು.

ಒಂದು ರೂಪಾಯಿ ಮಾಡಿದ್ದಾರೆ. ಆದರೆ ಎಪಿಎಂಸಿ ಹೊರಗಡೆ ಖರೀದಿ ಮಾಡುವವರಿಗೆ ಈ ಸೆಸ್ ಅನ್ವಯವಾಗಲ್ಲ. ನಮಗೆ ಮಾತ್ರ ಅನ್ವಯಿಸುವುದು ಸರಿಯಲ್ಲ. ಇದು ವ್ಯಾಪಾರಸ್ಥರಲ್ಲಿ ತಾರತಮ್ಯ ಮಾಡಿದ ಹಾಗೆ ಆಗುತ್ತದೆ. ಇದು ಸರಿಯಲ್ಲ.  

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುವ ಹಾಗೆ ಒಂದು ದೇಶ ಒಂದು ತೆರಿಗೆ ಕಾಯ್ದೆ ಜಾರಿಗೆ ಬರಲಿ. ಪ್ರಧಾನಮಂತ್ರಿಯವರು ಈಗಾಗಲೇ ಸುಗ್ರೀವಾಜ್ಞೆ ಮೂಲಕ ರೈತರಿಗೆ ಸೆಸ್ ಇಲ್ಲ ಎಂದು ಹೇಳಿದ್ದಾರೆ.

ಅದರಂತೆ ರಾಜ್ಯ ಸರಕಾರ ರೈತರಿಗೆ ಹೊರೆಯಾಗುವ ಸೆಸ್ ತೆಗೆಯಲಿ. ಎಲ್ಲರಿಗೂ ಏಕರೂಪ ಕಾಯ್ದೆ ಜಾರಿಯಾಗುವಂತೆ ನೋಡಿಕೊಳ್ಳಬೇಕು.

ಅದು ಬಿಟ್ಟು ಎಪಿಎಂಸಿ ಒಳಗಡೆ ಒಂದು ಕಾಯ್ದೆ ಹೊರಗಗಡೆ ಒಂದು ಕಾಯ್ದೆ ಇರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.

 ಹೊರಗಡೆ ರೈತರಿಂದ ಕಾಳು ಕಡಿ ಖರೀದಿಸುವ ವರ್ತಕರನ್ನು ಕೂಡ ಎಪಿಎಂಸಿ ಕಾಯ್ದೆ ವ್ಯಾಪ್ತಿಗೆ ತರಬೇಕು. ಇಲ್ಲದಿದ್ದರೆ ಇದರಿಂದ ರೈತರಿಗೆ ನಷ್ಟವಾಗುತ್ತದೆ. ರೈತರಿಗೆ ಅನ್ಯಾಯವೆಸಗುವುದು ಸರಿಯಲ್ಲ.

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ ಯಡಿಯೂರಪ್ಪ ಹಾಗೂ ಎಪಿಎಂಸಿ ಸಚಿವರಾದ ಎಸ್.ಟಿ. ಸೋಮಶೇಖರ ಅವರು ಈ ಕಡೆ ಗಮನ ಹರಿಸಬೇಕುಎಂದು ಆಗ್ರಹಿಸಿದರು.  

ರಾಜ್ಯದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ರಾಜ್ಯದ ಎಲ್ಲ ವರ್ತಕರಿಗೆ ಏಕರೂಪ ಕಾಯ್ದೆ ಜಾರಿಗೆ ಮಾಡಬೇಕು. ರೈತರಿಗೆ ತಂಟೆ ತಕರಾರು ಬಂದರೆ ಯಾರು ಹೊಣೆ. ಅವರಿಗೆ ಸಮಸ್ಯೆಯಾದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಸೆಸ್ ನಿಂದ ರೈತರೇ ನಾಶ ಆಗ್ತಾರೆ. ರೈತರಿಗೆ ಅನ್ಯಾಯವಾಗಬಾರದುಅಂದರೆ ಹಸಿರು ಶಾಲು  ಹೊದಿಸಿಕೊಂಡ ಯಡಿಯೂರಪ್ಪ ಅವರು ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದು ಶಿವಶಂಕರ ಹಂಪಣ್ಣವರ ಹೇಳಿದರು.

ಈ ಸಭೆಯಲ್ಲಿ ಗೌರವ ಕಾರ್ಯದರ್ಶಿ ಬಸವರಾಜ ತೆಗ್ಗಿ, ಉಪಾಧ್ಯಕ್ಷ ವಿಶ್ವನಾಥ ಯಂಡಿಗೇರಿ, ಸದಸ್ಯರಾದ ಬಸವರಾಜ ಸುರೇಬಾನ್, ಹಿರಿಯರಾದ ಟಿ.ಕೆ. ಪವಾರ, ಎಸ್ ವೈ ಸಂಕೋಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *