ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಗುರುವಾರ 2 ಸಾವು, 183 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ 183 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2668 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಗುರುವಾರವು  ಇಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ  80 ಕ್ಕೆ ಏರಿದಂತಾಗಿದೆ.  

ಗುರುವಾರ ಜಿಲ್ಲೆಯಲ್ಲಿ 76 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 921 ಜನರು ಬಿಡುಗಡೆಗೊಂಡತಾಗಿದೆ. ಇನ್ನೂ 1667 ಸಕ್ರಿಯ ಕರೋನಾ ಸೋಂಕಿತರು ಜಿಲ್ಲೆಯಲ್ಲಿದ್ದಾರೆ  ಎಂದು ವಿವರಿಸಿದೆ.

ಇದಲ್ಲದೆ, ಇನ್ನೂ  33  ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಲಾಗಿದೆ.

ಸಾವನ್ನಪ್ಪಿದ್ದವರ ವಿವರ :   ಹುಬ್ಬಳ್ಳಿಯ ಬುದ್ದ ವಿಹಾರದ ಕುಲಕರ್ಣಿ ಹಕ್ಕಳ ಚಾಲದ ನಿವಾಸಿ ಪಿ-58491 ಸೋಂಕಿತ 52 ವರ್ಷದ ಮಹಿಳೆ ನೆಗಡಿ ಕೆಮ್ಮುಜ್ವರದಿಂದ ಬಳಲುತ್ತಿದ್ದರು.

ಹಳೆ ಹುಬ್ಬಳ್ಳಿಯ ಸದರ ಸೋಪಾ ನಿವಾಸಿ ಪಿ-31815 ಸೋಂಕಿತ 53 ವರ್ಷದ ವ್ಯಕ್ತಿಗೆ ಸೋಂಕು ಹೇಗೆ ಹರಡಿದೆ ಎಂಬುದು ಪತ್ತೆಯಾಗಿಲ್ಲ. 

ಇವರಿಬ್ಬರು ಚಿಕಿತ್ಸೆ ಫಲಿಸದೆ ಜಿಲ್ಲೆಯ ವಿವಿಧ ನಿಯೋಜಿತ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ವಿವರಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *