ರಾಜ್ಯ

ಧಾರವಾಡದ ವಿದ್ಯಾಪೋಷಕ ಸಂಸ್ಥೆಯಿಂದ ಬಡ ಮಕ್ಕಳ ಶೈಕ್ಷಣಿಕ ಸಹಾಯಕ್ಕೆ ಅರ್ಜಿ

ಧಾರವಾಡ prajakiran.com : ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆ ಯುನರ್ಚರ್ ಮೆರಿಟ್‌ಯೋಜನೆಯಡಿಯಲ್ಲಿ ೨೦೨೦-೨೧ ನೇ ಶೈಕ್ಷಣಿಕ ಸಾಲಿಗಾಗಿ ವೃತ್ತಿಪರ(ಇಂಜನೀಯರಿಂಗ್/ಮೆಡಿಕಲ್) ಪದವಿ ಸೇರ ಬಯಸುವ ವಿದ್ಯಾರ್ಥಿಗಳಿಗೆಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈ ಷರತ್ತು ಅನ್ವಯ :

ಮಾರ್ಚ್ ೨೦೨೦ರಲ್ಲಿ ವಿದ್ಯಾರ್ಥಿಗಳು  ದ್ವಿತೀಯ ಪಿ.ಯು.ಸಿ.  ಪರೀಕ್ಷೆ ಬರೆದಿರಬೇಕು. ಹಾಗೂ ಶೇ ೮೦% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

 ದ್ವಿತೀಯ ಪಿ.ಯು.ಸಿ. ನಂತರ ಇಂಜನೀಯರಿಂಗ್, ಮೆಡಿಕಲ್ ವಿಭಾಗಗಳಿಗೆ ಪ್ರವೇಶ ಬಯಸುವವರುಅರ್ಜಿ ಹಾಕಲು ಅರ್ಹರಾಗಿದ್ದಾರೆ.

ಇಂಜಿನೀಯರಿಂಗ್ ಸೇರಬಯಸುವ ವಿದ್ಯಾರ್ಥಿಗಳು ಸಿ.ಇ.ಟಿ. ಪರೀಕ್ಷೆಯಲ್ಲಿ ೧೫೦೦೦ಕ್ಕಿಂತ ಕಡಿಮರ‍್ಯಾಂಕ್‌ನೊಂದಿಗೆ ಹಾಗೂ ಮೆಡಿಕಲ್ ಸೇರಬಯಸುವ ವಿದ್ಯಾರ್ಥಿಗಳು ೩೦೦೦ಕ್ಕಿಂತ ಕಡಿಮರ‍್ಯಾಂಕ್‌ನೊಂದಿಗೆಉತ್ತೀರ್ಣರಾಗಿರಬೇಕು.           

 ಕುಟುಂಬದ ಮಾಸಿಕ ವರಮಾನ ೧೫,೦೦೦/- ರೂಗಿಂತಕಡಿಮೆಇರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ವಿದ್ಯಾಪೋಷಕದಅರ್ಜಿಯುwww.vidyaposhak.ngo ಈ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ಅಗತ್ಯ ಮಾಹಿತಿಯನ್ನುತುಂಬಿ ದಾಖÀಲಾತಿಗಳನ್ನು ಅಪ್‌ಲೋಡ್ ಮಾಡಿಅರ್ಜಿಯನ್ನು ಸಲ್ಲಿಸಬೇಕು.

 ವಿಶೇಷ ಸೂಚನೆ :ಪೂರ್ಣ ಮಾಹಿತಿ, ಮಾರ್ಗಸೂಚಿಗಳು, ನಿಯಮಗಳು, ನಿಬಂಧನೆಗಳಿಗಾಗಿ ವಿದ್ಯಾಪೋಷಕಅಂತರ್ಜಾಲ www.vidyaposhak.ngo ನ್ನು ಸಂಪರ್ಕಿಸಬಹುದು.

 ಅಥವಾ

 ಈ ಕೆಳಗೆ ನಮೂದಿಸಿದ ಸಂಖ್ಯೆಗೆಕರೆಅಥವಾತಮ್ಮ ಹತ್ತಿರದಕಚೇರಿಗೆ ಭೇಟಿ ಮಾಡಬಹುದು. ವಿದ್ಯಾಪೋಷಕ, ಫೋನ : ೦೮೩೬-೨೭೪೭೩೫೭/೮೮೬೧೨೦೧೮೨೮ ಎಂದು ಪ್ರಕಟಣೆ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *