ರಾಜ್ಯ

ಧಾರವಾಡ ಕೃಷಿ ವಿವಿ ಕುಲಪತಿ ಮಹಾದೇವ ಚಟ್ಟಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಿನ್ನಲೆ ಕೈ ಬಿಡಲು ಬಸವರಾಜ ಕೊರವರ ಆಗ್ರಹ

ಧಾರವಾಡ prajakiran.com : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಹಾದೇವ ಚಟ್ಟಿಯವರ ಮೇಲೆ 2014 ಜೂನ್ ೨೮ ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಸದ್ಯ ಈ ಪ್ರಕರಣ ಧಾರವಾಡ ಜಿಲ್ಲೆಯ ಪ್ರಿನ್ಸಿಪಲ್ ಸಿ. ಜೆ. ಜ್ಯೂನಿಯರ್ ಡಿವಿಜನ್ ನಲ್ಲಿ ರಿವಿಜನ್ ಪಿಟಿಶನ್ ರೂಪದಲ್ಲಿ ವಿಚಾರಣೆ ಹಂತದಲ್ಲಿ ಇದೆ. ಇದರಲ್ಲಿ ಇವರು ಮೂರನೇ ಆರೋಪಿ ಆಗಿದ್ದಾರೆ.

 ಇಂತಹವರು ದೇಶದ ಟಾಪ್ ಟೆನ್  ಕೃಷಿ ವಿವಿಗಳಲ್ಲಿ ಒಂದಾಗಿರುವ ಧಾರವಾಡ ಕೃಷಿ ವಿವಿ ಕುಲಪತಿಗಳಾಗಿ ಮುಂದುವರೆದಿರುವುದು ತಲೆ ತಗ್ಗಿಸುವಂತಹ ಸಂಗತಿ. 

ಹೀಗಾಗಿ ಇವರನ್ನು ತಕ್ಷಣ ರಾಜ್ಯದ ಮುಖ್ಯಮಂತ್ರಿಗಳು, ಕೃಷಿ ಸಚಿವರು ಹಾಗೂ ಅದರಲ್ಲೂ ವಿಶೇಷವಾಗಿ ರಾಜ್ಯಪಾಲರು ಅವರನ್ನು ಕೂಡಲೇ ಈ ಹುದ್ದೆಯಿಂದ ಕೆಳಗಿಸಬೇಕು ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಒತ್ತಾಯಿಸಿದ್ದಾರೆ.

ಈ ಕುರಿತು ಗುರುವಾರ ಧಾರವಾಡ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಇವರು ೧೯೮೯ ರಲ್ಲಿ ಎಸ್ಸಿಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ ಹುದ್ದೆಯನ್ನು ಪಡೆದಿದ್ದು, ಇದು ಎಸ್ಸಿ ಹಿಂಬಾಕಿ (ಬ್ಯಾಕ್ ಲಾಗ್ ) ಹುದ್ದೆಯಾಗಿರುತ್ತದೆ. ಇಂತಹ ಹಲವು ಅಪರಾಧಗಳ ಹಿನ್ನೆಲೆಯಲ್ಲಿ ಅಂದಿನ ಕುಲಪತಿ ಡಾ. ಜೆ.ವಿ. ಗೌಡರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ.

ನಿಗದಿತ ಕನಿಷ್ಠ  ಐದು ವರ್ಷದ ಅನುಭವ ಇಲ್ಲದೆ ಸಹ ಪ್ರಾಧ್ಯಪಕ ಹುದ್ದೆ ಪಡೆದಿದ್ದು ಅಪರಾಧ ಎಂದು ಅಂದು ರಾಜ್ಯಪಾಲರು ನೇಮಿಸಿದ್ದ ಕೆ. ಪಿ. ಸುರೇಂದ್ರನಾಥ ಹಾಗೂ ನ್ಯಾ. ಗಣೇಶ್ ರಾವ್ ಸಮಿತಿ ವರದಿಯ್ಲಲಿ ಸ್ಪಷ್ಟ್ಟವಾಗಿ ಹೇಳಿದ್ದಾರೆ ಎಂದು ದಾಖಲೆಗಳ ಸಮೇತ ವಿವರಿಸಿದರು.

ಇದಲ್ಲದೆ ಮಹದೇವ ಬಿ.ಚೆಟ್ಟಿಯವರು ಕುಲಸಚಿವರಾಗಿದ್ದಾಗ ೪೦೯ ಜನ ಹಂಗಾಮಿ ನೌಕರರನ್ನು ಸಕ್ರಮಗೋಳಿಸುವ ನೇಮಕಾತಿಯ ವೇಳೆ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಪೂರ್ವಾನ್ವಯವಾಗುವಂತೆ ಖಾಯಂ ಮಾಡಿ ಕಾಲ್ಪನಿಕ ವೇತನ ನಿಗದಿಪಡಿಸಿದ ಆರೋಪವಿದೆ.

 ಕರ್ನಾಟಕ ರಾಜ್ಯ ಲೆಕ್ಕ ಪತ್ರ ಪರಿಶೋಧಕರು ಆಕ್ಷೇಪಣೆ ಮಾಡಿ ಲೋಪದೋಷಗಳನ್ನು ಪಟ್ಟಿಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿಗಳು ೫.೮೫ ಕೋಟಿ ರೂಪಾಯಿ ನಷ್ಟ್ಟವನ್ನು ವಸುಲಾತಿ ಮಾಡಲು ೨೦೧೮ರ ಜೂ. ೭ ರಂದು ಸೂಚಿಸಿರುತ್ತಾರೆ.

ಆದರೆ ಇದುವರೆಗೆ ಅದು ಇನ್ನೂ ಪೂರ್ಣಪ್ರಮಾಣದಲ್ಲಿ ವಸೂಲಿ ಆಗಿಲ್ಲ ಎಂದು ಬಸವರಾಜ ಕೊರವರ ದೂರಿದರು. 

ಇವರು ಕೃಷಿ ವಿಶ್ವವಿದ್ಯಾಲಯದ ಧಾರವಾಡದಲ್ಲಿ ವಿಸ್ತರಣಾ ನಿರ್ದೇಶಕರಾಗಿದ್ದಾಗ, ತಾವೇ ಕುಲಪತಿ ಆಗಿ ಟೆಂಡರ್ ನೀಡುವ ಭರವಸೆ ಹುಟ್ಟಿಸಿ ಏರೋಫೊನಿಕ್ಸ ತಾಂತ್ರಿಕತೆಗೆ ಬೇಕಾಗುವ ಸೌಲಭ್ಯ ಕಲ್ಪಿಸಲು ಟೆಂಡರ್ ಪ್ರಕ್ರಿಯೆಯಲ್ಲಿ ಅನುಕೂಲ ಮಾಡುವುದಾಗಿ ಆಸೆ ಹುಟ್ಟಿಸಿ ಸ್ಕೈ ಫಾರ್ಮ ಕಂಪನಿಯಿಂದ ವಿದೇಶ ಪ್ರವಾಸದ ಖರ್ಚು ವೆಚ್ಚವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದುಕೊಂಡು ತಮ್ಮ ಹೆಂಡತಿಯೋಂದಿಗೆ ವಿಯೆಟ್ನಾಂ ಪ್ರವಾಸ ಮಾಡಿಬಂದಿರುತ್ತಾರೆ.

ಅಲ್ಲದೇ ಇವರು ೨೦೦೬ ರಲ್ಲಿ ಉಚಿತವಾಗಿ ಎರಡು ಕೋಟಿ ರೂಪಾಯಿ ಮೌಲ್ಯದ ವ್ಯಾಕ್ಯೂಮ್ ಪ್ಯಾಕೆಜಿಂಗ್ ಯಂತ್ರವನ್ನು ಸರ್ಕಾರದ ಅನುಮತಿಯಿಲ್ಲದೆ ಪಡೆದು ಅದನ್ನು ಯಾವುದೇ ದಾಸ್ತಾನು ರಿಜಿಸ್ಟರಿನಲ್ಲಿ ಇಂದಿಗೂ ದಾಖಲಿಸಲಿಲ್ಲ. ಕರ್ನಾಟಕ ಸರ್ಕಾರದ ಯೋಜನೆಯಲ್ಲಿ ಖರೀದಿ ಮಾಡಿರುವುದಾಗಿ ಲೆಕ್ಕ ತೋರಿಸುವ ಹುನ್ನಾರ ನಡೆದಿದೆ ಎಂದು ಆಪಾದಿಸಿದರು.  

ನಾಲ್ಕು ವರ್ಷ ಮೂರು ತಿಂಗಳ ಸುಳ್ಳು ಅನುಭವ ಪ್ರಮಾಣಪತ್ರದ ದಾಖಲೆ ನೀಡಿ ಪ್ರಾಧ್ಯಾಪಕ ಹುದ್ದೆ ಪಡೆದಿದ್ದಾರೆ. ನಬಾರ್ಡ್‌ನಲ್ಲಿ ಎರಡು ವರ್ಷ ಹತ್ತು ದಿವಸ ಸಂಬಳ ರಹಿತ ರಜೆಯ ಮೇಲಿದ್ರೂ ಅನುಭವ ಪತ್ರ ಹಚ್ಚಿದ್ದಾರೆ. 

ಪಿಹೆಚ್‌ಡಿ ವ್ಯಾಸಂಗ ಮಾಡುವಾಗ ಸಂಶೋಧನಾ ಪೇಲೋಶಿಫ್ ಪಡೆಯುವಾಗಲೆ ಇನ್ನೊಂದು ವೇತನ ಪಡೆದ ಎರಡು ವರ್ಷಗಳ ಸಂಶೋಧನಾ ಸಹಾಯಕ ಅಂತ ಖೊಟ್ಟಿ ಅನುಭವ ಪತ್ರ ಹಾಗೂ ಮೂರು ತಿಂಗಳ ಪೊಸ್ಟ್ ಡಾಕ್ಟರೆಟ್ ಖೊಟ್ಟಿ ಪ್ರಮಾಣ ಪತ್ರ ಕೂಡ ಹಚ್ಚಿದ್ದಾರೆ. ಇದು ಕೂಡ ತನಿಖೆ ನಡೆಸಲು ಒತ್ತಾಯಿಸುತ್ತೇವೆ. 

ವಿವಿಧ ಆರೋಪ ಎದುರಿಸುತ್ತಿರುವ ಡಾ. ಮಹದೇವ ಚೆಟ್ಟಿ ಐಡಿಪಿ ( ಇನಸ್ಟಿಟ್ಯೂಟ್ ಡೆವಲಪ್‌ಮೆಂಟ್)  ಹಾಗೂ ರಾಪ್ತಾ  ಪ್ರೊಜೆಕ್ಟನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅದನ್ನು ಶೀಘ್ರವೇ ದಾಖಲೆ ಸಮೇತ ಬಯಲಿಗೆ ತರಲಿದ್ದೇವೆ. ಅಲ್ಲದೆ ಈ ಬಗ್ಗೆ ರಾಜ್ಯಪಾಲರಿಗೆ ಸಂಪೂರ್ಣ ಲಿಖಿತ ದೂರು ನೀಡಲಾಗಿದೆ.

ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಅವರನ್ನು ತಕ್ಷಣವೇ ಈ ಹುದ್ದೆಯಿಂದ ಕೆಳಗಿಳಿಸಬೇಕು, ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇವರನ್ನು ಮೊದಲು ಕುಲಪತಿ ಹುದ್ದೆಯಿಂದ ಕೆಳಗಿಳಿಸಿ, ಯೋಗ್ಯವಾದ ವ್ಯಕ್ತಿಯನ್ನು ನೇಮಿಸಬೇಕು ಎಂದು ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಹೆಚ್. ಕೊರವರ ಆಗ್ರಹಿಸಿದರು.

ಈ ಬಗ್ಗೆ ಧಾರವಾಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಇದ್ದರೂ ಕೂಡ ಈ ಬಗ್ಗೆ ಅವರು ಅಧಿವೇಶನದಲ್ಲಿ ಕೂಡ ಚಕಾರವೆತ್ತದೆ ಮೌನವಹಿಸಿರುವುದು ನೋವಿನ ಸಂಗತಿಯಾಗಿದೆ.

 ಅಷ್ಟೇ ಅಲ್ಲದೆ, ಇಡೀ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಕೃಷಿ ವಿಶ್ವವಿದ್ಯಾಲಯವನ್ನು ಭ್ರಷ್ಟರಿಂದ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಹೆಚ್. ಕೊರವರ  ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ  ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ ದೇವರಾಜ ನಾಯಕ ಗಂಗೆ, ಸಚಿನ್ ಕಡಾರೆ, ಲಾಲ್ ಸಾಬ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *