ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ 75 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.
ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 832ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಬುಧವಾರ 7 ಜನ ಸಾವನ್ನಪ್ಪಿದ್ದರೆ ಗುರುವಾರವೂ ಬರೋಬ್ಬರಿ 7 ಜನ ಸಾವನ್ನಪ್ಪಿದ್ದಾರೆ.
19 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಜು. 9 ರಂದು 13 ಜನರಿಗೆ ಕರೋನಾ ಹೇಗೆ ಹರಡಿದೆ ಎಂಬುದರ ಸಂಪರ್ಕ ಪತ್ತೆಯಾಗದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
(ಐಎಲ್ ಐ) ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಜು. 9ರಂದು 32 ಜನರಿಗೆ ಗಂಟಲು ದ್ರವ ತಪಾಸಣೆ ನಡೆಸಿದಾಗ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕರೋನಾ ಸೋಂಕಿತರ ಸಂಪರ್ಕದಿಂದ ಜು. 9ರಂದು 27 ಜನರಿಗೆ ಕರೋನಾ ಹರಡಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.
ಜಿಲ್ಲೆಯಲ್ಲಿ ಜು. 9ರಂದು 2 ಸಾರಿ ಕೇಸ್ ದೃಢಪಟ್ಟಿವೆ. ಅಂತರ್ ಜಿಲ್ಲಾ ಪ್ರಯಾಣದಿಂದ ಒಬ್ಬರಿಗೆ ಕರೋನಾ ಹರಡಿದೆ.
ಸಾವನ್ನಪ್ಪಿದವರ ವಿವರ : ಪಿ-18716 ಸೋಂಕಿತ 55 ವರ್ಷದ ವ್ಯಕ್ತಿ, ಪಿ-23232 ಸೋಂಕಿತ 88 ವರ್ಷದ ವೃದ್ದ, ಪಿ-25532 ಸೋಂಕಿತ 67 ವರ್ಷದ ವೃದ್ದ, ಪಿ-28410 ಸೋಂಕಿತ 78 ವರ್ಷದ ವೃದ್ದೆ, ಪಿ-30725 ಸೋಂಕಿತ 54 ವರ್ಷದ ವ್ಯಕ್ತಿ ಸಾರಿ ಕೇಸ್ ನಿಂದ ಸಾವನ್ನಪ್ಪಿದ್ದಾರೆ.
ಪಿ-30726 ಸೋಂಕಿತ 85 ವರ್ಷದ ವೃದ್ದ, ಪಿ-24839 ಸೋಂಕಿತ 65 ವರ್ಷದ ವೃದ್ದ ಐ ಎಲ್ ಐ ನಿಂದ ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 17ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.