ರಾಜ್ಯ

ಧಾರವಾಡದ ವೀರೇಂದ್ರ ಡ್ರೆಸ್ ಮೇಲೆ ಪೊಲೀಸ್ ದಾಳಿ : ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಕೋವಿಡ್ ನಿಯಮಾವಳಿ ಉಲ್ಲಂಘನೆ
ಪ್ರಕರಣ ದಾಖಲು

ಧಾರವಾಡ prajakiran.com :
ಹೊರಗಡೆಯಿಂದ ಗೇಟ್ ಹಾಕಿ ಒಳಗಡೆ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಆರೋಪದ ಮೇಲೆ ಧಾರವಾಡದ ವೀರೇಂದ್ರ ಡ್ರೆಸ್ ಮೇಲೆ ಪೊಲೀಸ್ ದಾಳಿ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಸಾಮಾನ್ಯರ ಚರ್ಚೆಗೆ ಗ್ರಾಸವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳಾದ ಕಿರಾಣಿ ವ್ಯಾಪಾರ
ಸಹ ಬಂದ್ ಮಾಡಲಾಗಿದೆ.

ಅಂತಹದರಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿ ಬಟ್ಟೆಗಳನ್ನು ಮಾರಾಟ ಮಾಡಲು ಮುಂದಾಗಿದ್ದರು.

ಅಚ್ಚರಿಯ ಸಂಗತಿಯೆಂದರೆ ಹೊರಗಡೆ ಗೇಟ್ ಮುಚ್ಚಿ ಒಳಗಡೆ ಗ್ರಾಹಕರನ್ನು ಸೇರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಧಾರವಾಡ ಸಹರ ಠಾಣೆಯ ಪೊಲೀಸರ ದಾಳಿ ನಡೆಸಿದ್ದಾರೆ.

ಗೇಟ್ ಗೆ ಹಾಕಿದ್ದ ಕೀಲಿಯನ್ನು ತೆಗೆಸಿ
ಪೊಲೀಸರು ಒಳ ನುಗ್ಗಿದ್ದಾರೆ.

ಆಗ ಪೊಲೀಸರು ಬರೋ ಮಾಹಿತಿ ತಿಳಿದು ವೀರೇಂದ್ರ ಡ್ರೆಸ್ ಮಾಲೀಕ
ಗ್ರಾಹಕರನ್ನು ಅಡಗಿಸಿಟ್ಟಿದ್ದು ಬಯಲಿಗೆ ಬಂದಿದೆ.

ಈ ವೇಳೆ ಅಂಗಡಿಯಲ್ಲಿ ಬರೋಬ್ಬರಿ
ಹತ್ತಕ್ಕೂ ಹೆಚ್ಚು ‌ಸಿಬ್ಬಂದಿಯಿಂದ ಕಾರ್ಯ ನಿರ್ವಹಣೆ ನಡೆಸಿರುವುದು ಗೊತ್ತಾಗಿದೆ.

ಅಲ್ಲದೆ ಹತ್ತಕ್ಕೂ ಹೆಚ್ಚು ಗ್ರಾಹಕರು ಷೋ ರೂಮ್‌ನಲ್ಲಿ ಪತ್ತೆಯಾಗಿದ್ದಾರೆ.

ಇದರಿಂದಾಗಿ ಕೆರಳಿದ ಪೊಲೀಸರು ವಿರೇಂದ್ರ ಡ್ರೆಸ್ ಲ್ಯಾಂಡ್‌ ಮಾಲೀಕನಿಗೆ
ತರಾಟೆಗೆ ತೆಗೆದುಕೊಂಡರು.

ಜೊತೆಗೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಕರೋನಾ ಕಠಿಣ ಲಾಕ್ ಡೌನ್ ಹಾಗೂ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಬಟ್ಟೆ ವ್ಯಾಪಾರ ನಡೆಸಿದ್ದಕ್ಕೆ ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಕಿರಣ ಹಾವಣಗಿ ಎಂಬುವವರಿಗೆ ಸೇರಿದ ವೀರೇಂದ್ರ ಡ್ರೆಸ್ ಲ್ಯಾಂಡ್ ಅಂಗಡಿ ಮಾಲೀಕನ ವಿರುದ್ದ ಪ್ರಕರಣ ದಾಖಲು ಮಾಡಿ ಸರಿಯಾಗಿ ಬಿಸಿ ತಾಕಿಸಿದ್ದಾರೆ ಎಂದು ಗೊತ್ತಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *