ಅಂತಾರಾಷ್ಟ್ರೀಯ

ಶರಣಾಗಿದ್ದ ಉಗ್ರನಿಂದ ಕಾನ್‌ಸ್ಟೆಬಲ್‌ ಮೇಲೆ ಗುಂಡಿನ ದಾಳಿ : ಭದ್ರತಾ ಪಡೆಯಿಂದ ಹತ್ಯೆ

ಜಮ್ಮು ಕಾಶ್ಮೀರ prajakiran. com :ಶರಣಾಗಿದ್ದ ಉಗ್ರನೊಬ್ಬ ಕಾನ್‌ಸ್ಟೆಬಲ್‌ ಮೇಲೆ ಗುಂಡು ಹಾರಿಸಿ, ನಂತರ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿ ವೇಳೆ ಹತನಾಗಿದ್ದಾನೆ.

ಭದ್ರತಾ ಪಡೆಗೆ ಶರಣಾಗಿದ್ದ ಮೊಹಮ್ಮದ್ ಅಮೀನ್ ಮಲಿಕ್ ಏಕಾಏಕಿ ಕಾನ್‌ಸ್ಟೆಬಲ್‌ ಅಮ್ಜಿದ್ ಖಾನ್ ಅವರ ರೈಫಲ್ ಕಸಿದು ಕೊಂಡು, ಅಮ್ಜಿದ್ ಅವರ ಮೇಲೆಯೇ ಗುಂಡು ಹಾರಿಸಿ, ಕ್ಯಾಂಪ್ ನಲ್ಲಿ ಬಚ್ಚಿಕೊಂಡಿದ್ದಾನೆ.

ನಂತರ ಇದ್ದಕ್ಕಿದ್ದಂತೆಯೇ ಮಲಿಕ್ ಭದ್ರತಾ ಪಡೆಯ ಮೇಲೆ ಗುಂಡಿ ದಾಳಿ ನಡೆಸಿದನು. ಭದ್ರತಾ ಪಡೆ ನಡೆಸಿದ ಪ್ರತಿ ದಾಳಿಯಲ್ಲಿ ಮಲಿಕ್ ಹತನಾಗಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಪುಲ್ಪಾಮ ಜಿಲ್ಲೆಯ ಟ್ರಾಲ್‌ ಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆಯ (ಎಸ್‌ಎಜಿ) ಕ್ಯಾಂಪ್‌ ನಲ್ಲಿ ಘಟನೆ ನಡೆದಿದೆ‌ ಎಂದು ತಿಳಿದುಬಂದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *