ರಾಜ್ಯ

ರಾಜ್ಯದಲ್ಲಿ ಮಂಗಳವಾರ ಕರೋನಾಕ್ಕೆ 87 ಸಾವು, 2496 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಮಂಗಳವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 87 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 2496 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 44077 ಕ್ಕೆ ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ1142 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  17390 ಜನ ಗುಣಮುಖರಾಗಿದ್ದು, 25839  ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 540 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಮಂಗಳವಾರ 87 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 842ಕ್ಕೆ ಏರಿಕೆಯಾದಂತಾಗಿದೆ.

ಮಂಗಳವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೇ 1315   ಜನ ಸೋಂಕಿತರಿದ್ದರೆ ಇಂದು ಬರೋಬ್ಬರಿ 1267  ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

 ಇನ್ನೂಳಿದಂತೆ  ಮೈಸೂರು 125, ಕಲಬುರಗಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರಕನ್ನಡ ಹಾಗೂ ಬೆಳಗಾವಿ 64, ವಿಜಯಪುರ 52, ತುಮಕೂರು 47, ಬೀದರ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂಗಳುರು ಗ್ರಾಮಾಂತರ 14, ಚಿಕ್ಕಬಳ್ಳಾಪುರ 13, ಕೋಲಾರ 11, ಶಿವಮೊಗ್ಗ, ಕೊಡಗು, ಚಿತ್ರದುರ್ಗ ತಲಾ 10, ಗದಗ 9, ಚಾಮರಾಜನಗರ 8, ಹಾಸನ 4, ಚಿಕ್ಕಮಗಳೂರು 3, ಯಾದಗಿರಿ 2, ರಾಮನಗರ 1 ಹೀಗೆ ಒಟ್ಟು 29 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ  ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಮಂಗಳವಾರವೂ ಮುಂದುವರೆದಿದ್ದುರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ567 ಜನ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ಮೈಸೂರು ತಲಾ 4, ಬಳ್ಳಾರಿ 5,  ವಿಜಯಪುರ ಹಾಗೂ ಚಿಕ್ಕಮಗಳೂರು ತಲಾ 3, ಚಾಮರಾಜನಗರ, ರಾಯಚೂರು ತಲಾ 2, ಕಲಬುರಗಿ, ಧಾರವಾಡ,ದಾವಣಗೆರೆ ಹಾಗೂ ಹಾಸನ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *