ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಲಾಕ್‌ಡೌನ್ ನಲ್ಲಿ ಏನಿರುತ್ತೆ, ಏನಿರಲ್ಲ ಗೋತ್ತಾ…?

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕಳೆದ ೨ ವಾರಗಳಂದೀಚಿಗೆ ಕೋವಿಡ್-೧೯ ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದೆ.

ಈ ವಿಷಯವನ್ನು ತಜ್ಞರು ವಿವರವಾಗಿ ಪರಿಶೀಲಿಸಿ, ಕೋವಿಡ್-೧೯ ಸೋಂಕಿನ ಹರಡುವಿಕೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಹತೋಟಿಗೆ ತರಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ ಎಂಬ ಸಲಹೆಯನ್ನು ನೀಡಿರುತ್ತಾರೆ.

ಈ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ, ೨೦೦೫ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಧಾರವಾಡ ಜಿಲ್ಲೆಯಲ್ಲಿ ಜುಲೈ ೧೫ ರ ಬೆಳಿಗ್ಗೆ ೧೦ ಗಂಟೆಯಿಂದ  ಜುಲೈ ೨೪ ರ ರಾತ್ರಿ ೮ ಗಂಟೆಯವರೆಗೆ ೧೦ ದಿನಗಳ ಅವಧಿಯವರೆಗೆ ಲಾಕ್‌ಡೌನ್‌ನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

 ಈ ಆದೇಶದ ಅನುಬಂಧದಲ್ಲಿ ನೀಡಲಾಗಿರುವ ಲಾಕ್‌ಡೌನ್‌ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಹುಬ್ಬಳ್ಳಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಧಾರವಾಡ ಹಾಗೂ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹುಬ್ಬಳ್ಳಿ, ಜಿಲ್ಲೆಯ ಎಲ್ಲ ತಹಶೀಲ್ದಾರರುಗಳಿಗೆ ಸೂಚಿಸಲಾಗಿದೆ.

ಧಾರವಾಡ ಜಿಲ್ಲೆಯ ಲಾಕ್‌ಡೌನ್‌ಗಾಗಿ ಮಾರ್ಗಸೂಚಿಗಳು :

(ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಧಾರವಾಡ ಹಾಗೂ ಧಾರವಾಡ ಜಿಲ್ಲೆ ಒಳಗೊಂಡಂತೆ)

೨೪ ನೇ ಜುಲೈ ೨೦೨೦ರ ರಾತ್ರಿ ೦೮.೦೦ ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.

         ವಿನಾಯಿತಿಗಳು (ಕಂಟೈನ್‌ಮೆಂಟ್ ವಲಯ ಹೊರಗೆ)

         ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕಾರಾಗೃಹಗಳು.

         ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯ ಸೇವೆಗಳನ್ನು ನಿರ್ವಹಿಸುವಂತೆ ಎಲ್ಲಾ ಕಚೇರಿಗಳು.

         ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಅಧೀನ ಕಚೇರಿಗಳು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಅಧೀನ ಕಚೇರಿಗಳು,

         ಉಳಿದ ಕಚೇರಿಗಳು ಶೇ.೫೦ ರಷ್ಟು ಸಿಬ್ಬಂದಿಯೊAದಿಗೆ ಕಾರ್ಯ ನಿರ್ವಹಿಸುವುದು.

         ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬAಧಿಸಿದAತೆ ಕಚೇರಿಗಳು- ಮಾನ್ಯ ಉಚ್ಛ ನ್ಯಾಯಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯ ನಿರ್ವಹಿಸತಕ್ಕದ್ದು.

         ಕೋವಿಡ್-೧೯ಗೆ ಸಂಬAಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ವಾಹನ, ಸರ್ಕಾರವು ಅಧಿಸೂಚಿಸಿದಂತೆ ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಸರ್ಕಾರಿ ಕಛೇರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಐಡಿ ಕಾರ್ಡ ಹೊಂದಿರಬೇಕು.

         ಜಿಲ್ಲಾ ಖಜಾನೆ ಹಾಗೂ ಅಧೀನ ತಾಲೂಕು ಖಜಾನೆಗಳು.

         ರಕ್ಷಣೆ, ರಕ್ಷಣೆ ಪಿ.ಎಸ್.ಯುಗಳು, ಕೇಂದ್ರ ಸಶಸ್ತç, ಪೊಲೀಸ್ ಪಡೆ ಹಾಗೂ ದೂರ ಸಂಪರ್ಕ.

         ಅಗತ್ಯ ಸೇವೆಗಳನ್ನು ನಿರ್ವಹಿಸುವಂತ ಕಚೇರಿಗಳು.

         ಖಜಾನೆ

         ಸಾರ್ವಜನಿಕ ಉಪಯುಕ್ತತೆಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಅಂಚೆ ಕಚೇರಿಗಳು, ವಿಪತ್ತು ನಿರ್ವಹಣೆ ಹಾಗೂ ಮುನ್ಸೂಚನಾ ಏಜೆನ್ಸಿಗಳು (ಪೆಟ್ರೋಲ್, ಸಿ.ಎನ್.ಜಿ., ಎಲ್.ಪಿ.ಜಿ., ಪಿ.ಎನ್.ಜಿ., ಒಳಗೊಂಡಂತೆ)

         ರಾಷ್ಟ್ರೀಯ ಮಾಹಿತಿ ಕೇಂದ್ರಗಳು.

         ವಿಮಾನ ನಿಲ್ದಾಣಗಳಲ್ಲಿ/ ಜಿ.ಎಸ್.ಟಿ.ಎನ್., ಎಂ.ಸಿ.ಎ.-೨೧ ರಿಜಿಸ್ಟಿç, ಕನಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುವುದು.

         ಬ್ಯಾಂಕ್‌ಗಳು, ಭಾರತೀಯ ರಿಸರ್ವ ಬ್ಯಾಂಕ್ ಮತ್ತು ಆರ್‌ಬಿಐ ನಿಯಂತ್ರಿಕ ಹಣಕಾಸು ಮಾರುಕಟ್ಟೆ, ಎನ್‌ಪಿಸಿಐ ಮತ್ತು ಸಿಸಿಐಎಲ್ ನಂತಹ ಘಟಕಗಳು, ಪಾವತಿ ವ್ಯವಸ್ಥೆಯ ಪ್ರವರ್ತಕರು ಮತ್ತು ಸ್ವತಂತ್ರ ಪ್ರಾಥಮಿಕ ವ್ಯಾಪಾರಿಗಳು/ ಡೀಲರುಗಳು/ ವಿತರಕರು ಕನಿಷ್ಠ ಸಂಖ್ಯೆಯ ಸಿಬ್ಬಂದಿಯೊAದಿಗೆ ಕಾರ್ಯ ನಿರ್ವಹಿಸುವುದು.

         ಎಲ್ಲಾ ಆರೋಗ್ಯ ಸೇವೆಗಳು (ಆಯುಷ್ ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳು) ಕಾರ್ಯ ನಿರ್ವಹಿಸುವುದು : (ಕಂಟೈನ್‌ಮೆಂಟ್ ವಲಯದ ಹೊರಗೆ)

         ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ಲ್ಯಾಬ್‌ಗಳು, ಸಂಗ್ರಹಣಾ ಕೇಂದ್ರಗಳು, ಮೆಡಿಸಿನ್ ಸೌಲಭ್ಯಗಳು, ಡಿಸ್ಟೆನ್ಸರಿಗಳು, ಫಾರ್ಮಸಿಗಳು, ಕೆಮಿಸ್ಟ್ ಜನ ಔಷಧಿ ಕೇಂದ್ರಗಳು, ಗೃಹ ಆರೈಕೆದಾರರು ಮತ್ತು ವೈದ್ಯಕೀಯ ಉಪಕರಣಗಳ ಅಂಗಡಿಗಳು ಸೇರಿದಂತೆ ಎಲ್ಲಾ ಔಷಧ ಅಂಗಡಿಗಳು.

         ಎಲ್ಲಾ ಫಾರ್ಮಸಿಟಿಕಲ್ ಹಾಗೂ ರಿಸರ್ಚ ಲ್ಯಾಬ್‌ಗಳು.

         ಔಷಧಿಗಳು, ಔಷಧೀಯ ವೈದ್ಯಕೀಯ ಸಾಧನಗಳು, ಮೆಡಿಕಲ್ ಆಕ್ಸಿಜನ್ ಅವುಗಳ ಪ್ಯಾಕಿಂಗ್ ಸಾಮಗ್ರಿ, ಕಚ್ಚಾ ಸಾಮಗ್ರಿ ಹಾಗೂ ಮಧ್ಯವರ್ತಿಗಳು ಎಲ್ಲಾ ತಯಾರಿಕಾ ಘಟಕಗಳು.

         ವೈದ್ಯಕೀಯ/ ಆರೋಗ್ಯ ಮೂಲ ಸೌಕರ್ಯಕ್ಕೆ ಸಂಬAಧಿಸಿದ ಎಲ್ಲಾ ನಿರ್ಮಾಣಗಳು.

         ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ಶೂಶ್ರೂಷಕರು, ವಿಜ್ಞಾನಿಗಳು, ಲ್ಯಾಬ್ ಟೆಕ್ನಿಷಿಯನ್ಸ್ಗಳು, ಮಿಡ್-ವೈವ್ಸ್ ಹಾಗೂ ಇತರೆ ಆಸ್ಪತ್ರೆ ಪೂರಕ ಸೇವೆಗಳು.

         ಕೃಷಿ ಹಾಗೂ ಕೃಷಿಗೆ ಸಂಬAಧಿಸಿದAತ ಚಟುವಟಿಕೆಗಳು (ಕಂಟೈನ್‌ಮೆAಟ್ ವಲಯದ ಹೊರಗೆ)

         ಎಲ್ಲಾ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದು (ನಿರ್ಬಂಧಿತ ವಲಯ ಹೊರತುಪಡಿಸಿ)

         ರೈತರು ಹಾಗೂ ಕೃಷಿ ಕಾರ್ಮಿಕರು ತಮ್ಮ ಕೃಷಿ ಜಮೀನಿನಲ್ಲಿ ಕಾರ್ಯ ನಿರ್ವಹಿಸುವುದು.

         ಕನಿಷ್ಟ ಬೆಂಬಲ ಬೆಲೆ ಪ್ರವರ್ತಕರು ಸೇರಿದಂತೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ತೊಡಗಿರುವ ಏಜೆನ್ಸಿಗಳು.

         ಎಲ್ಲಾ ಮಂಡಿಗಳು, ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಗಳು, ಇ-ಮಾರುಕಟ್ಟೆ, ತರಕಾರಿ ಹಾಗೂ ನೇರ ಮಾರುಕಟ್ಟೆ ಅಥವಾ ನೇರವಾಗಿ ರೈತರಿಂದ/ ರೈತರ ಸಮೂಹದಿಂದ ಖರೀದಿಸುವ ಉದ್ಯಮಗಳು, ಎಪ್.ಡಿ.ಓಗಳು ಸಹಕಾರ ಸಂಘ ಇತ್ಯಾದಿಗಳು.

         ಕೃಷಿ ಯಂತ್ರೋಪಕರಣಗಳು, ಅವುಗಳ ಬಿಡಿ ಭಾಗಗಳು (ಅವುಗಳ ಪೂರೈಕೆ ಸರಣಿ ಒಳಗೊಂಡAತೆ) ಮತ್ತು ಅವುಗಳ ದುರಸ್ಥಿಗೆ ಸಂಬAಧಿಸಿದAತಹ ಮಳಿಗೆಗಳು ತೆರೆದಿರುತ್ತವೆ.

         ಕೃಷಿ ಯಂತ್ರಕ್ಕೆ ಸಂಬAಧಿಸಿದ “ಕಸ್ಟಮ್ ಹೈರಿಂಗ್ ಸೆಂರ‍್ಸ್”.

         ರಸಗೊಬ್ಬರ ಕೀಟನಾಶಕ ಹಾಗೂ ಬೀಜಗಳ ತಯಾರಿಕೆ ವಿತರಣೆ ಹಾಗೂ ಚಿಲ್ಲರೆ ಮಾರಾಟಗಾರರು.

         ಸಂಯೋಜಿತ ಕೋಯ್ಲು ಹಾಗೂ ಇತರೆ ಕೃಷಿ (ತೋಟಗಾರಿಕೆ ಸಲಕರಣೆಗಳಂತಹ ಕೋಯ್ಲು ಹಾಗೂ ಬಿತ್ತನೆ ಯಂತ್ರಗಳ ಸಾಗಣೆ)

         ಮೀನುಗಾರಿಕೆ- ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವುದು.

         ಮೀನುಗಾರಿಕೆ ಚಟುವಟಿಕೆ (ಒಳನಾಡು/ ಮೀನು ಕೃಷಿ ಉದ್ಯಮ ಫೀಡಿಂಗ್, ನಿರ್ವಹಣೆ, ಕೋಯ್ಲು, ಸಂಸ್ಕರಣೆ, ಪ್ಯಾಕಿಂಗ್, ಶೈತ್ಯಾಗಾರ, ಮಾರಾಟ ಹಾಗೂ ಮಾರುಕಟ್ಟೆ)

         ಮೊಟ್ಟೆ ಕೇಂದ್ರಗಳು, ಫೀಡ್ ಪ್ಲಾಂಟ್‌ಗಳು, ಕಮರ್ಷಿಯಲ್ ಅಕ್ವೆö್ಯರಾ.

         ಮೀನು/ ಸಿಗಡಿ ಹಾಗು ಮೀನು ಉತ್ಪನ್ನಗಳು, ಮೀನಿನ ಮೊಟ್ಟೆ/ ಫೀಡ್ ಮತ್ತು ಕಾರ್ಮಿಕರ ಎಲ್ಲಾ ಚಟುವಟಿಕೆಗಳು.

         ಪಶುಸಂಗೋಪನಾ ಇಲಾಖೆಯು ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವುದು.

         ಕ್ಷೀರ ಸಂಸ್ಕರಣ ಕೇಂದ್ರಗಳಿAದ ಸಾರಿಗೆ ಮತ್ತು ಪೂರೈಕೆಯನ್ನು ಒಳಗೊಂಡAತೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿತರಣೆ ಮತ್ತು ಮಾರಾಟ.

         ಕೋಳಿ ಸಾಗಾಣಿಕಾ ಕೇಂದ್ರಗಳು ಮತ್ತು ಮೊಟ್ಟೆ ಉತ್ಪಾದನಾ ಹಾಗೂ ಜಾನುವಾರು ಸಾಗಾಣಿಕೆ ಕಾರ್ಯ ಚಟುವಟಿಕೆ ಸೇರಿದಂತೆ ಪಶುಸಂಗೋಪನಾ ಫಾರ್ಮಗಳ ಕಾರ್ಯಾಚರಣೆ.

         ಜೋಳ ಮತ್ತು ಸೋಯಾದಂತ ಕಚ್ಚಾ ಸಾಮಗ್ರಿಗಳ ಪೂರೈಕೆಯು ಸೇರಿದಂತೆ ಪಶು ಆಹಾರ ಉತ್ಪಾದನಾ ಮತ್ತು ಆಹಾರ ಘಟಕಗಳು, ಪ್ರಾಣಿ ಆಹಾರದ ಅಂಗಡಿಗಳು.

         ಸಾಮಾಜಿಕೆ ವಲಯ : ಕಂಟೈನ್‌ಮೆAಟ್ ವಲಯ ಹೊರತುಪಡಿಸಿ ಈ ಕೆಳಕಂಡ ಕಾರ್ಯ ಚಟುವಟೆಕೆಗಳು ಕಾರ್ಯನಿರ್ವಹಿಸುವುದು.

         ಹುಬ್ಬಳ್ಳಿ ಧಾರವಾಡ ಒನ್ ಸೇವಾ ಕೇಂದ್ರಗಳು

         ಮಕ್ಕಳು/ ಅಂಗವಿಕಲರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರು/ ಅನಾಥರು/ಮಹಿಳೆಯರು/ ವಿಧವೆಯರು ಮುಂತಾದವರ ಆರೈಕೆ ಸಂಸ್ಥೆಗಳ ಕಾರ್ಯನಿರ್ವಹಣೆ.

         ಪಾಲನಾ ಗೃಹಗಳು, ಆರೈಕೆ ಕೇಂದ್ರಗಳು ಮತ್ತು ಮಕ್ಕಳ ಸುರಕ್ಷತಾ ಸ್ಥಳಗಳು.

         ಸಾಮಾಜಿಕ ಭದ್ರತಾ ಪಿಂಚಣಿಗಳ ವಿತರಣೆ ಉದಾ: ವೃದ್ದರು/ ವಿಧವೆಯರು/ ಸ್ವಾತಂತ್ರ ಯೋಧರ ಪಿಂಚಣಿಗಳು, ಇಪಿಎಫ್‌ಒ ಒದಗಿಸುವ ಪಿಂಚಣಿಗಳು ಮತ್ತು ಭವಿಷ್ಯನಿಧಿ ಸೇವೆಗಳು.

         ಅಂಗನವಾಡಿಗಳ ಕಾರ್ಯನಿರ್ವಹಣೆಗೆ- ಮಕ್ಕಳು, ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಮುಂತಾದ ಫಲಾನುಭವಿಗಳ ಮನೆ ಬಾಗಿಲಿಗೆ ಆಹಾರ ಮತ್ತು ಪೌಷ್ಟಿಕ ಸಾಮಗ್ರಿಗಳನ್ನು ೧೫ ದಿನಗಳಿಗೊಮ್ಮೆ ವಿತರಿಸುವುದು. ಆದರೆ, ಫಲಾನುಭವಿಗಳು ಅಂಗನವಾಡಿಗಳಿಗೆ ಭೇಟಿ ನೀಡಬಾರದು.

         ಕೋವಿಡ್-೧೯ ನಿರ್ವಹಣೆಗಾಗಿ ಇರುವ ರಾಷ್ಟಿçÃಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಎಂಎನ್‌ಆರ್‌ಇಜಿಎ ಕಾಮಗಾರಿಗಳನ್ನು ನಿರ್ವಹಿಸುವುದು.

         ಎಲ್ಲಾ ಬಗೆಯ ಸರಕು ಸಾಗಣಿಗಳ ಅನಿರ್ಬಂಧಿತ ಚಲನೆ (ಕಂಟೈನ್‌ಮೆAಟ್ ವಲಯ ಹೊರತುಪಡಿಸಿ)

         ಟ್ರಕ್‌ಗಳ ಮೂಲಕ (ಖಾಲಿ ಟ್ರಕ್‌ಗಳು) / ಸರಕು ವಾಹಗಳು ಸೇರಿದಂತೆ ರೈಲು ಮತ್ತು ವಿಮಾನದ ಮೂಲಕ ಎಲ್ಲಾ ಬಗೆಯ ಸರಕುಗಳ ಸಾಗಾಟ.

         ಧಾರವಾಡ ಜಿಲ್ಲೆಯಾದ್ಯಂತ ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

         ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು ಲಾಕ್‌ಡೌನ್ ಅವಧಿಯಲ್ಲಿನ ಸಂಚಾರವನ್ನು ಮುಂದುವರೆಸಿದೆ. ವಿಮಾನ ಮತ್ತು ರೈಲು ಟಿಕೆಟ್‌ಗಳನ್ನು ವಿಮಾನ ಮತ್ತು ರೈಲುಗಳಲ್ಲಿ ಓಡಾಡುವ ಪ್ರಯಾಣಿಕರ ಪಾಸುಗಳೆಂದು ಪರಿಗಣಿಸಲಾಗುವುದು. ಅಲ್ಲದೇ, ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಿದೆ.

         ಅಂತರ ರಾಜ್ಯ, ಅಂತರ ಜಿಲ್ಲಾ ಮತ್ತು ಜಿಲ್ಲೆಯೊಳಗಿನ ಎಲ್ಲಾ ಪ್ರಯಾಣಿಕ ಸಾರಿಗೆ ಸೇವೆಗಳನ್ನು ರಸ್ತೆ ಸಾರಿಗೆ ನಿಗಮಗಳ ಮತ್ತು ಖಾಸಗಿ ಸಾರಿಗೆ ಕಾರ್ಯಾಚರಣೆಗಳು ಧಾರವಾಡ ಜಿಲ್ಲೆಯಲ್ಲಿ ಪ್ರಯಾಣಿಕರನ್ನ ನಿಲುಗಡೆ ಮಾಡುವದನ್ನ ಹಾಗೂ ಪ್ರಯಾಣಿಕರನ್ನು ಕರೆದೊಯ್ಯಲು ನಿಷೇಧಿಸಿದೆ.

         ತುರ್ತು ಪರಿಸ್ಥಿತಿಗಾಗಿ ಬಾಡಿಗೆ ತೆಗೆದುಕೊಂಡವುಗಳನ್ನು ಹೊರತುಪಡಿಸಿ, ಟ್ಯಾಕ್ಸಿಗಳು (ಆಟೋ ರಿಕ್ಷಾಗಳು ಸೇರಿದಂತೆ) ಮತ್ತು ಕ್ಯಾಬ್ ಚಾಲನಾ ಸಂಸ್ಥೆಗಳು.

         ಶಾಲೆಗಳು, ಕಾಲೇಜುಗಳು, ಶಿಕ್ಷಣ/ತರಬೇತಿ/ಕೋಚಿಂಗ್/ಸ್ಟಡಿ ಸೆಂಟರ್ ಮುಂತಾದ ಸಂಸ್ಥೆಗಳು ಮುಚ್ಚುವುದು. ಆನ್‌ಲೈನ್/ದೂರ ಶಿಕ್ಷಣ ಕಲಿಕೆಗೆ ಅವಕಾಶವನ್ನು ಮುಂದುವರೆಸಿ ಅವುಗಳನ್ನು ಪ್ರೋತ್ಸಾಹಿಸಬೇಕು. ಆದರೆ, ಈಗಾಗಲೇ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್-೧೯ ನಿರ್ವಹಣೆಗಾಗಿ ಇರುವ ರಾಷ್ಟಿçÃಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ ನೀಡುವುದು.

         ಆರೋಗ್ಯ/ ಪೊಲೀಸ್/ ಸರ್ಕಾರಿ ಸೇವಾ ಸಿಬ್ಬಂದಿ/ ಆರೋಗ್ಯ ಕಾರ್ಯಕರ್ತರು/ ಪ್ರವಾಸಿಗರು ಸೇರಿದಂತೆ ಉದ್ದೇಶಿಸಿದ ಮತ್ತು ಕ್ವಾರಂಟೈನ್ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೋಟಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರೆ ಆತಿಥ್ಯ ಸೇವೆಗಳ ನಿರ್ಬಂಧ. ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳನ್ನು ಆಹಾರ ತಯಾರಿಕೆಗೆ/ ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿಸಿದೆ.

         ಎಲ್ಲಾ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್‌ಗಳು, ಜಿಮ್ನಾಷಿಯಮ್‌ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗ ಮಂದಿರಗಳು, ಬಾರ್ ಹಾಗೂ ಆಡಿಟೋರಿಯಮ್‌ಗಳು, ಸಭಾ ಭವನಗಳು ಮತ್ತು ಅದೇ ಬಗೆಯ ಇತರೆ ಸ್ಥಳಗಳು.

         ಎಲ್ಲಾ ಸಾಮಾಜಿಕ/ ರಾಜಕೀಯ/ ಕ್ರೀಡಾ/ ಮನರಂಜನಾ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಸಮಾರಂಭಗಳು/ ಇತರೆ ಸಭೆಗಳು ಹಾಗೂ ಬೃಹತ್ ಜನಸ್ತೋಮಗಳು.

         ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಬೇಕು, ಧಾರ್ಮಿಕ ಸಭೆಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

         ಜನರ ಚಲನೆ :

         ತುರ್ತು ಸಂದರ್ಭಗಳಲ್ಲಿ ಅಥವಾ ಈ ಮಾರ್ಗಸೂಚಿಗಳಲ್ಲಿ ಅನುಮತಿಸಿದ ಸಂದರ್ಭಗಳಲ್ಲಿ ಮಾತ್ರ ಜಿಲ್ಲೆಯೊಳಗೆ ಮತ್ತು ಜಿಲ್ಲೆಯ ಹೊರಗೆ ಪ್ರಯಾಣಿಕ ವಾಹನಗಳು ಚಲಿಸುವುದು. ಈ ಚಲನೆಗೆ ಸೇವಾಸಿಂಧು ಪೋರ್ಟಲ್/suಠಿಠಿoಡಿಣಜhಚಿಡಿತಿಚಿಜ.iಟಿ ಮೂಲಕ ಅರ್ಹ ಪರವಾನಗಿ ಪಡೆದಿರಬೇಕು.

         ತುರ್ತು ಸಂದರ್ಭಗಳಲ್ಲಿ ಮಾತ್ರ ಅಥವಾ ಈ ಮಾರ್ಗಸೂಚಿಯಲ್ಲಿ ಅನುಮತಿಸಿದ ಚಟುವಟಿಕೆಗಳಿಗೆ ಧಾರವಾಡ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನಗಳ ಮತ್ತು ಬಸ್‌ಗಳ ಪ್ರಯಾಣ.

         ಧಾರವಾಡ ಜಿಲ್ಲೆಯಿಂದ ನಿರ್ಗಮನ ಮತ್ತು ಆಗಮನಕ್ಕೆ ತುರ್ತು ಸಂದರ್ಭಗಳಲ್ಲಿ ಅರ್ಹ ಪರವಾನಗಿ ಪಡೆದ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿದ ಚಾಲ್ತಿಯಲ್ಲಿರುವ ಮಾದರಿ ವಿಧಾನಗಳು/ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿನೊಂದಿಗೆ.

         ಮಾರ್ಗಸೂಚಿಗಳಲ್ಲಿ ಅನುಮತಿಸಿದ ಕಾರ್ಯ ಚಟುವಟಿಕೆಗಳಿಗಾಗಿ ಕೆಲಸದ ಸ್ಥಳಕ್ಕೆ ಹೋಗಿ ಬರಲು ಅವರ ಕಛೇರಿ/ ಸಂಸ್ಥೆಯಿAದ ನೀಡಿದ ಅರ್ಹ ಗುರುತಿನ ಚೀಟಿಯೊಂದಿಗೆ ಸಿಬ್ಬಂದಿಯ ಪ್ರಯಾಣ.

         ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನೇ ಪ್ರಯಾಣದ ಪರವಾನಗಿಯಾಗಿ ಬಳಸಿಕೊಳ್ಳಬಹುದು ಮತ್ತು ಅವರಿಗೆ ಲಭ್ಯವಿರುವ ಟ್ಯಾಕ್ಸಿ/ ಆಟೋ ರಿಕ್ಷಾ ಒಳಗೊಂಡAಥೆ ಸಾರಿಗೆ ವಿಧಾನವನ್ನು ಬಳಸಿಕೊಳ್ಳಬಹುದು. ಮೌಲ್ಯಮಾಪನ ಚಟುವಟಿಕೆಗೆ ಅನಿರ್ಭಂದಿತವಾಗಿ ಮುಂದುವರೆಯುವದು.

  • ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಮುಚ್ಚತಕ್ಕದ್ದು.

ವಿನಾಯಿತಿಗಳು (ಕಂಟೈನ್‌ಮೆAಟ್ ವಲಯದ ಹೊರಗೆ)

         ಬೆಳಿಗ್ಗೆ ೦೫.೦೦ ಗಂಟೆಯಿAದ ಅಪರಾಹ್ನ ೧೨.೦೦ ಗಂಟೆಯವರೆಗೆ ಪಡಿತರ ಅಂಗಡಿಗಳು (ಪಿ.ಡಿ.ಎಸ್), ದಿನಸಿ ಅಂಗಡಿಗಳು ಸೇರಿದಂತೆ ಬೇಕರಿ, ಆಹಾರ, ದವಸ ಧಾನ್ಯಗಳು, ಹಣ್ಣುಗಳು ಹಾಗೂ ತರಕಾರಿ, ಹೈನು ಮತ್ತು ಕ್ಷೀರ ಕೇಂದ್ರಗಳು, ಮಾಂಸ ಮತ್ತು ಮೀನು, ಪ್ರಾಣಿಯ ಆಹಾರ ಅಂಗಡಿಗಳು, ಜನರು ಮನೆಯಿಂದ ಹೊರಗೆ ಬರುವುದನ್ನು ಕಡಿಮೆ ಮಾಡಲು ಅತ್ಯವಶ್ಯಕ ವಸ್ತುಗಳನ್ನು ಮನೆಗಳಿಗೆ ತಗಲುಪಿಸುವ ವ್ಯವಸ್ಥೆಗೆ ಪ್ರೋತ್ಸಾಹ ನೀಡಬೇಕು. ಈ ಎಲ್ಲಾ ಕಾರ್ಯಗಳನ್ನು ಕೋವಿಡ್-೧೯ ನಿರ್ವಹಣೆಗಾಗಿ ಇರುವ ರಾಷ್ಟಿçÃಯ ನಿರ್ದೇಶನಗಳಿಗನುಸಾರವಾಗಿ ಮಾಡಬೇಕು. ಹಾಗೂ ಕುಟುಂಬದಲ್ಲಿ ಕೇವಲ ಒಬ್ಬರಿಗೆ ಮಾತ್ರ ಖರೀದಿಮಾಡಲು ಹೊರಗೆ ಬರಲು ಅವಕಾಶವಿದೆ.

         ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬAಧಿತ ಕೈಗಾರಿಕೆಗಳು.

         ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎ.ಟಿ.ಎಂ.

         ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ.

         ದೂರ ಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅತ್ಯವಶ್ಯಕ ಸೇವಾ ನೀಡಿಕೆ ಮತ್ತು ನಿರ್ವಹಣಾ ಸೇವೆಗಳು ಕನಿಷ್ಟ ಸಿಬ್ಬಂದಿಗಳೊAದಿಗೆ ಅತ್ಯವಶ್ಯಕ ಸೇವೆಗಳನ್ನು ನಿರ್ವಹಿಸುವುದು. ಇವೆಲ್ಲವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ನಿರ್ವಹಿಸಲು ಉತ್ತೇಜಿಸುವುದು.

         ಇ-ಕಾಮರ್ಸ ಮುಖಾಂತರ ಆಹಾರ, ಔಷಧಿಗಳು, ಔಷಧ ವಸ್ತುಗಳು, ವೈದ್ಯಕೀಯ ಸಲಕರಣೆಗಳಂತ ಅಗತ್ಯ ವಸ್ತುಗಳ ಸರಬರಾಜು.

         ಹೊಟೇಲ್‌ಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗುವದಕ್ಕೆ ಅವಕಾಶವಿದೆ.

         ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು.

         ಭಾರತೀಯ ಭದ್ರತೆಗಳು, ವಿನಿಮಯ ಮಂಡಳಿಯ ಬಂಡವಾಳ ಹಾಗೂ ಋಣ ಮಾರುಕಟ್ಟೆ ಸೇವೆಗಳು.

         ಶೀತಲಿಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು.

         ಖಾಸಗಿ ಭದ್ರತಾ ಸೇವೆಗಳು, ಸಾಧ್ಯವಾದರೆ ಇತರೆ ಎಲ್ಲಾ ಸಂಸ್ಥೆಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸಬೇಕು.

         ಇ-ಕಾಮರ್ಸ ಮುಖಾಂತರ ಸರಕು ಸರಬರಾಜು.

         ಉಳಿದ ಸಂಸ್ಥೆಗಳು ಅಗತ್ಯವಿರುವಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಉತ್ತೇಜಿಸುವುದು.

         ಈ ಕೆಳಗೆ ಪಟ್ಟಿ ಮಾಡಿದ ಕೈಗಾರಿಕೆಗಳು / ಕೈಗಾರಿಕಾ ಸಂಸ್ಥೆಗಳು (ಸರ್ಕಾರಿ ಮತ್ತು ಖಾಸಗಿ ಎರಡು) ಕಾರ್ಯನಿರ್ವಹಿಸಲು ಅವಕಾಶವಿರತಕ್ಕದ್ದು (ಕಂಟೈನ್‌ಮೆAಟ್ ವಲಯದ ಹೊರಗೆ)

         ಕೈಗಾರಿಕಾ ಘಟಕಗಳು ಬೆ:೯-೦೦ ಗಂಟೆಯಿAದ ಸಾ:೬-೦೦ ಗಂಟೆಯವರೆಗೆ ಒಂದು ಶಿಪ್ಟಿನಲ್ಲಿ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ( ಕಾರ್ಮಿಕರು ಕೈಗಾರಿಕೆಗಳಿಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಮುನ್ನ ಥರ್ಮಲ್ ಸ್ಕಿçÃನಿಂಗ್, ಪಲ್ಸ್ ಆಕ್ಸಿಮೀಟರ್ ಮತ್ತು ಸ್ಯಾನಿಟೈಜರ್‌ಗಳನ್ನು ಬಳಸುವದು ಕಡ್ಡಾಯವಾಗಿದ್ದು, ಕಾರ್ಯನಿರ್ವಹಿಸುವ ಎಲ್ಲರು ಗ್ಲೌಸ್, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು)

         ವಿವಿಧ ಸರ್ಕಾರಿ ಇಲಾಖೆಗಳಿಂದ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಕೈಗೊಳ್ಳಬಹುದು.

         ನಿರಂತರ ಕಾರ್ಯ ಪ್ರಕ್ರೀಯೆ ಮತ್ತು ಅದರ ಪೂರೈಕೆಗೆ ಅಗತ್ಯವಿರುವ ಉತ್ಪಾದನಾ ಘಟಕಗಳು

         ಆಹಾರ ಸಂಸ್ಕರಣಾ ಕೈಗಾರಿಕೆಗಳು, ಔಷಧಗಳು, ಔಷಧವಸ್ತುಗಳು, ವೈದ್ಯಕೀಯ, ವೈದ್ಯಕೀಯ ಉಪಕರಣಗಳು ಅವುಗಳ ಕಚ್ಚಾ ಹಾಗೂ ಅವಶ್ಯಕ ಪದಾರ್ಥಗಳನ್ನು ಒಳಗೊಂಡAತೆ ಅತ್ಯವಶ್ಯಕ ವಸ್ತುಗಳ ಉತ್ಪಾದನೆ.

         ಪ್ಯಾಕಿಂಗ್ ಸಾಮಗ್ರಿಗಳ ಉತ್ಪಾದನೆ

         ಕೋವಿಡ್-೧೯ ನಿರ್ವಹಣೆಗಾಗಿ ಇರುವ ರಾಷ್ಟಿçÃಯ ನಿರ್ದೇಶನಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ವಿಶೇಷ ಆರ್ಥಿಕ ವಲಯಗಳು (SಇZ) ಮತ್ತು ರಫ್ತು ಆಧಾರಿತ ಘಟಗಳು (ಇಔU) ಕೈಗಾರಿಕಾ ಟೌನ್‌ಗಳಲ್ಲಿ ನಿಯಂತ್ರಣಾವಕಾಶ ಹೊಂದಿರುವ ಉತ್ಪಾದನಾ ಮತ್ತು ಇತರ ಔದ್ಯಮಿಕ ಸಂಸ್ಥೆ

         ಕೋವಿಡ್-೧೯ ನಿರ್ವಹಣೆಗಾಗಿ ಇರುವ ರಾಷ್ಟಿçÃಯ ನಿರ್ದೇಶನಗಳ ಪಾಲನೆಗೆ ಒಳಪಟ್ಟು ಕಂಟೈನ್‌ಮೆAಟ್ ವಲಯದ ಹೊರಗೆ ಕಾರ್ಯಾಚರಣೆ ಮಾಡಲು ಈ ಕೆಳಗೆ ಪಟ್ಟಿ ಮಾಡಿದ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಬೇಕು.

         ಧಾರವಾಡ ಜಿಲ್ಲೆ ವ್ಯಾಪ್ತಿಯೊಳಗೆ ಹೊರಗಿನಿಂದ ಕಾರ್ಮಿಕರನ್ನು ಕರೆತರದೆ ಸ್ಥಳೀಯವಾಗಿಯೇ ಇರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿ ಮುಂದುವರಿಕೆ (ಮೂಲ ಸ್ಥಳದಲ್ಲಿಯೇ ನಿರ್ಮಾಣ)

         ಕಂಟೈನ್‌ಮೆAಟ್ ವಲಯಗಳು :

         ಕಂಟೈನ್‌ಮೆAಟ್ ವಲಯಗಳಲ್ಲಿ ಅತ್ಯಗತ್ಯ ಕಾರ್ಯಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡತಕ್ಕದ್ದು, ವೈದ್ಯಕೀಯ ತುರ್ತು ಸೇವೆಗಳ ಮತ್ತು ಅತ್ಯಗತ್ತ ಸರಕು ಮತ್ತು ಸೇವೆಗಳ ಪೂರೈಕೆಯ ಹೊರತು ಈ ವಲಯಗಳಲ್ಲಿ ಮತ್ತು ವಲಯಗಳ ಹೊರಗೆ ವ್ಯಕ್ತಿಗಳ ಚಲನೆಗೆ ಕಟ್ಟುನಿಟ್ಟಿನ ಪರಿಧಿಯನ್ನು ನಿಗದಿಪಡಿಸತಕ್ಕದ್ದು.

         ಕಂಟೈನ್‌ಮೆAಟ್ ವಲಯಗಳಲ್ಲಿ, ತೀವ್ರವಾದ ಸಂಪರ್ಕ ಪತ್ತೆ, ಕ್ವಾರಂಟೈನ್ ನಿಗಾವಣೆ, ಮನೆ-ಮನೆ ನಿಗಾವಣೆ, ಮನೆಯಲ್ಲಿಯೇ ಇರತಕ್ಕದ್ದಕ್ಕೆ ನಿಗಾವಣೆ ಮತ್ತು ಅಗತ್ಯವಾದಂತಹ ಇತರೆ ಕ್ಲಿನಿಕಲ್ ಮಧ್ಯಸ್ಥಿಕೆ ನಿಗಾವಣೆ.

         ಕೋವಿಡ್-೧೯ ನಿರ್ವಹಣೆ ರಾಷ್ಟಿçÃಯ ನಿರ್ದೇಶನಗಳು: ಕೋವಿಡ್-೧೯ ನಿರ್ವಹಣೆಯ ರಾಷ್ಟಿçÃಯ ನಿರ್ದೇಶನಗಳನ್ನು ಅನುಬಂಧ-೧ರಲ್ಲಿ ನಿರ್ದಿಷ್ಟಪಡಿಸಿರುವಂತೆ ರಾಜ್ಯಾದ್ಯಂತ ಮುಂದುವರೆಸತಕ್ಕದ್ದು.

         ದುರ್ಬಲ ವ್ಯಕ್ತಿಗಳ ರಕ್ಷಣೆ : ೬೫ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು ೧೦ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರಲು ಸಲಹೆ ನೀಡಲಾಗಿದೆ.

         ಆರೋಗ್ಯ ಸೇತು ಆ್ಯಪ್ ಬಳಕೆ :

         ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೆ ಗುರುತಿಸಲು ಆರೋಗ್ಯ ಸೇತು ಅನುವು ಮಾಡಿಕೊಡುತ್ತದೆ ಮತ್ತು ಇದು ವ್ಯಕ್ತಿಗಳ ಹಾಗೂ ಸಮುದಾಯಕ್ಕೆ ರಕ್ಷ ಕವಚವಾಗಿ ಕಾರ್ಯ ನಿರ್ವಹಿಸುತ್ತದೆ.

         ಉದ್ಯೋಗದಾತರು, ಕಛೇರಿಗಳು ಮತ್ತು ಕರ್ತವ್ಯ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಉತ್ತಮ ಪ್ರಯತ್ನದ ಆಧಾರದ ಮೇಲೆ ಆರೋಗ್ಯ ಸೇತುವನ್ನು ಎಲ್ಲಾ ಉದ್ಯೋಗಿಗಲು ಹೊಂದುವAತಹ ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

  • ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು:

         ವಿಪತ್ತು ನಿರ್ವಹಣಾ ಕಾಯ್ದೆ, ೨೦೦೫ರಡಿಯಲ್ಲಿ ಹೊರಡಿಸಲಾದ ಈ ಮಾರ್ಗಸೂಚಿಗಳನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ ಹಾಗೂ ಜಿಲ್ಲೆಯ ಎಲ್ಲ ತಹಶೀಲದಾರಗಳು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸತಕ್ಕದ್ದಲ್ಲ ಹಾಗೂ ಮೇಲಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿತಕ್ಕದ್ದು.

  • ದಂಡನೀಯ ಉಪಬಂಧಗಳು :

            ಕೋವಿಡ್-೧೯ ನಿರ್ವಹಣೆಯ ಲಾಕ್‌ಡೌನ್ ಕ್ರಮಗಳ ಬಗ್ಗೆ ರಾಷ್ಟಿçÃಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಕಾಯ್ದೆ, ೨೦೦೫ರ ಸೆಕ್ಷನ್ ೫೧ರಿಂದ ೬೦ರ ಉಪಬಂಧಗಳು, ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೮೮ರ ಅಡಿಯಲ್ಲಿ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಬಹುದು, ಈ ದಂಡನೀಯ ಉಪಬಂಧಗಳ ಆಂಗ್ಲ ಭಾಷೆಯಲ್ಲಿನ ಉದೃತ ಭಾಗವನ್ನು ಅನುಬಂಧ-೨ರಲ್ಲಿ ಇರಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಜುಲೈ ೧೫ ರಿಂದ ೨೪ ರ ವರೆಗೆ ನಿಷೇಧಾಜ್ಞೆ ಜಾರಿ

 ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್ -೨೦೧೯ ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಿ.ಆರ್.ಪಿ.ಸಿ ೧೯೭೩ ರ ಕಲಂ ೧೪೪ ರ ಮೇರೆಗೆ, ದಿ : ೧೫-೦೭-೨೦೨೦ ರಂದು ಬೆ : ೧೦-೦೦ ಗಂಟೆಯಿAದ ದಿನಾಂಕ : ೨೪-೭-೨೦೨೦ ರಾ : ೦೮-೦೦ ಗಂಟೆಯವರೆಗೆ ಧಾರವಾಡ ಜಿಲ್ಲೆಯಾದ್ಯಂತ ಸಂತೆ , ಜಾತ್ರೆ , ಮೆರವಣಿಗೆ ಸಮಾವೇಶ , ಸಮ್ಮೇಳನ , ಕ್ರೀಡಾ ಕೂಟ , ಮದುವೆ , ಮುಂಜಿ ಹಾಗೂ ಇತರ ಯಾವುದೇ ಧಾರ್ಮಿಕ ಸಮಾರಂಭಗಳನ್ನು ಪ್ರತಿಬಂಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿಷೇಧಾಜ್ಞೆ  ಹೊರಡಿಸಿದ್ದಾರೆ.

ಧಾರವಾಡ ಜಿಲ್ಲೆಯಾದ್ಯಂತ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಸಂತೆ, ಜಾತ್ರೆ ಅಥವಾ ಸಮಾವೇಶ, ಮದುವೆ, ಮುಂಜಿ ಹಾಗೂ ಇತರ ಯಾವುದೇ ಸಮಾರಂಭಗಳನ್ನು ಜರುಗಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. 

ಜಿಲ್ಲೆಯಾದ್ಯಂತ ಯಾವುದೇ ಧಾರ್ಮಿಕ ಉತ್ಸವ, ಉರುಸು, ಪ್ರಾರ್ಥನೆ, ಜಾತ್ರೆ, ಮೆರವಣಿಗೆ, ಮುಂತಾದವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

   ಯಾವುದೇ ಕ್ರೀಡಾ ಕೂಟ,  ಪ್ರವಾಸ ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ, ಸಾರ್ವಜನಿಕ ಸಭೆ, ಸಮಾರಂಭಗಳು ಮುಂತಾದವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಧರ್ಮಗಳ ಪ್ರಾರ್ಥನಾ ಒಗ್ಗೂಡುವಿಕೆ ಮತ್ತು ಹಬ್ಬಗಳ ಒಗ್ಗೂಡುವಿಕೆಯನ್ನು ನಿಷೇಧಿಸಿದೆ.

ದಿ: ೧೪-೦೭-೨೦೨೦ ಮಧ್ಯರಾತ್ರಿ ೧೨ ಗಂಟೆಯಿಂದ ದಿ: ೨೪-೦೭-೨೦೨೦ರ ಮಧ್ಯರಾತ್ರಿ ೧೨-೦೦ ಗಂಟೆಯವರೆಗೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ಹಾಗೂ ಮದ್ಯ ಸಾಗಾಣಿಕೆ ನಿಷೇಧಿಸಿದೆ.

 ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ೧೮೬೦ ಕಲಂ ೧೮೮ ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 

 

 

 

 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *