ರಾಜ್ಯ

ಹಾಸನ ಜಿಲ್ಲೆಯಲ್ಲಿ ಮತ್ತೇ 13 ಹೊಸ  ಪ್ರಕರಣ : ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆ

ಹಾಸನ prajakiran.com : ಹಾಸನ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 13 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯ  ಕರೋನಾ ಸೋಂಕಿತರ ಸಂಖ್ಯೆ  112 ಕ್ಕೆ ಏರಿಕೆಯಾಗಿದೆ .

ಇಂದು ವರದಿಯಾದ ಎಲ್ಲಾ ‌ಪಾಸಿಟಿವ್ ಪ್ರಕರಣಗಳಿಗೆ ಮಹಾರಾಷ್ಟ್ರ ದಿಂದ  ಆಗಮಿಸಿದ‌ ಹಿನ್ನಲೆ ಇದೆ. ಎಲ್ಲರೂ ಚನ್ನರಾಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ .

 ಸೋಂಕು ಪತ್ತೆಯಾದ ಎಲ್ಲರನ್ನೂ ನಗರದ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ದಾಖಲಾಗಿರುವ ಎಲ್ಲರೂ ಆರೋಗ್ಯಯುತವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ‌ ಎಂದು ವಿವರಿಸಿದ್ದಾರೆ.

ಹಾಸನ ಜಿಲ್ಲೆಯ ಕರೋನಾ ಸೋಂಕಿತರ ತಾಲ್ಲೂಕುವಾರು ವಿವರ ಇಂತಿದೆ. ಚನ್ನರಾಯಪಟ್ಟಣ: 80, ಹೊಳೆನರಸೀಪುರ: 16, ಆಲೂರು: 3, ಹಾಸನ:  9, ಅರಕಲಗೂಡು: 3 ಅರಸೀಕೆರೆ:1 ಪ್ರಕರಣ ದಾಖಲಾಗಿವೆ.

ಭಾನುವಾರ ಅಲ್ಪ ವಿಶ್ರಾಂತಿಯಲ್ಲಿದ್ದ ಕರೋನಾ ಮಂಗಳವಾರ 13 ಪ್ರಕರಣಗಳೊಂದಿಗೆ ಪುನಃ ತನ್ನ ಆರ್ಭಟ ಮುಂದುವರಿಸಿರುವುದು ಜಿಲ್ಲೆಯ ಜನತೆಗೆ ನಡುಕವುಂಟು ಮಾಡಿದೆ.   

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *