ರಾಜ್ಯ

ತಬ್ಲೀಗ್, ಅಜ್ಮೀರ್ ನಂತರ ಬೆಳಗಾವಿಗೆ ಜಾರ್ಖಂಡ್ ಕಂಟಕ

ಬೆಳಗಾವಿ prajakiran.com : ಮತ್ತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಂಗಳವಾರ 13 ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆ ಮೂಲಕ ಬೆಳಗಾವಿ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 135 ಕ್ಕೇರಿದೆ.

ಗಡಿ ಜಿಲ್ಲೆಗೆ ಹೊರ ರಾಜ್ಯದ ನಂಜು ಬಿಟ್ಟುಬಿಡದೆ ಕಾಡುತ್ತಿದೆ. ತಬ್ಲೀಗ್, ಅಜ್ಮೀರ್, ಮುಂಬೈ ಬಳಿಕ ಈಗ ಜಾರ್ಖಂಡ್ ನಂಜು ಆವರಿಸಿದೆ.

ಜಾರ್ಖಂಡನಿಂದ ಬೆಳಗಾವಿಗೆ ಬಂದಿದ್ದ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರನ್ನು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ  ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್ ಇಡಲಾಗಿತ್ತು.

ಈ ಪೈಕಿ 17 ವರ್ಷದ ಒಬ್ಬ ಬಾಲಕಿ ಸೇರಿ 7 ಮಹಿಳೆಯರು, 6 ಪುರುಷರಲ್ಲಿ  ಸೋಂಕು ಕಾಣಿಸಿಕೊಂಡಿದೆ.

ಇದೀಗ ಜಾರ್ಖಂಡ್ ನಂಜಿಗೆ ಬೆಳಗಾವಿ ಜಿಲ್ಲೆಯ ಜನತೆ ನಲುಗಿದ್ದಾರೆ. ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಆವರಿಸುತ್ತಿರುವುದು ಸ್ಥಳೀಯರಿಗೆ ಆತಂಕ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಸವದಿ-7 ,ಬೆಳವಕ್ಕಿ-1,ನಂದಗಾವ-3 ,ಜುಂಜರವಾಡ-1ಹುಕ್ಕೇರಿ-1 ಗ್ರಾಮದವರಿಗೆ ಸೊಂಕು ಕಂಡು ಬಂದಿದೆ.

ಸೋಂಕಿತರನ್ನ ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಐಸೋಲೇಷನ್ ವಾರ್ಡನಲ್ಲಿ ದಾಖಲು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *