ಅಪರಾಧ

ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ನಟಿ ಚಂದನಾ

ಬೆಂಗಳೂರು prajakiran.com : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಚಂದನಾ ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಮೇ 28ರಂದೇ ಈ ಆತ್ಮಹತ್ಯೆ ನಡೆದಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ.  ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್  ಪರಸ್ಪರ ಪ್ರೀತಿಸಿದ್ದರು. ಇಬ್ಬರು ಜೊತೆಗೆ ಓಡಾಡಿದ್ದರು.

ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಆನಂತರ ಗರ್ಭಪಾತ ಕೂಡ ಮಾಡಿಸಿದ್ದ.

ಆದರೆ ಮದುವೆಗೆ ಮಾತ್ರ ಕುಟುಂಬಸ್ಥರು ಒಪ್ಪಿಲ್ಲ ಎಂದು ಕಾಲಹರಣ ಮಾಡುತ್ತಲೇ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ದೂರಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ರೀತಿ ಮೋಸ ಮಾಡಿದ ದಿನೇಶ್ ಬಂಧಿಸಿ ಪೊಲೀಸರು ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ನಟಿ ಚಂದನಾ ಆತ್ಮಹತ್ಯೆ ಕುರಿತು ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *