ರಾಜ್ಯ

ರಾಜ್ಯದೆಲ್ಲಡೆ 10 ತಿಂಗಳ‌ ನಂತರ ಶಾಲೆಗಳು ಆರಂಭ : ಹೂವು ನೀಡಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಣ ಸಚಿವ

ಬೆಂಗಳೂರು prajakiran.com : ಕರೋನಾದಿಂದ ಕಂಗೆಟ್ಟ ಕರುನಾಡಿನ ಜನತೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 10 ತಿಂಗಳ‌ ನಂತರ ರಾಜ್ಯದ ಎಲ್ಲಾ  ಕಡೆ ಶಾಲೆಗಳು ಹಿಂದಿನಂತೆ ಆರಂಭಗೊಂಡಿವೆ.  ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಮಕ್ಕಳಿಗೆ ಹೂವು ನೀಡಿ ಶಾಲೆಗೆ ಬರಮಾಡಿಕೊಂಡು ಸಂತಸ ಹಂಚಿಕೊಂಡರು. ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ,ಕೊವೀಡ್ 19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಟಿಪ್ಸ್ ನೀಡಿದರು. ಮಕ್ಕಳ ಜೊತೆಗೆ ಸಚಿವ […]

ರಾಜ್ಯ

ಹುಬ್ಬಳ್ಳಿ-ಧಾರವಾಡ ಪೊಲೀಸ್ ವಿಚಾರಣೆ ಬಳಿಕ ಯೂಸುಫ್ ಬಚ್ಕಾನ್ ಮೈಸೂರು ಜೈಲಿಗೆ ಹಸ್ತಾಂತರ

ಧಾರವಾಡ prajakiran.com : ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಭೂಗತ ಪಾತಕ ಲೋಕದ ನಂಟು ಹೊಂದಿರುವ ಸದ್ಯ ಬಿಲ್ಡರ್ ಸುಬ್ವರಾಜು ಕೊಲೆ ಪ್ರಕರಣದಲ್ಲಿ ಮೈಸೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯೂಸುಫ್ ಬಚ್ಕಾನ್ ನನ್ನು ಧಾರವಾಡ ಪೊಲೀಸರು ನಾಲ್ಕು ದಿನಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು. ಯೂಸುಫ್ ಬಚ್ಕಾನ್ ನನ್ನು ಮೈಸೂರು ಜೈಲಿನಿಂದ ಬಾಡಿ ವಾರಂಟ್ ಮೇಲೆ ತಂದಿದ್ದ ಧಾರವಾಡದ ಉಪನಗರ ಠಾಣೆ ಪೊಲೀಸರು ವಿಶೇಷ ಭದ್ರತೆ ಮಧ್ಯೆ […]

ರಾಜ್ಯ

ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ಇಂಟರ್ಸಿಟಿ ರೈಲು : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಶಿವಮೊಗ್ಗ prajakiran.com : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಬಸವಪುರ ಬಳಿ ರೈಲ್ವೆ ಟ್ರ್ಯಾಕ್ ಮಧ್ಯೆ ನಿನ್ನೆ ರಾತ್ರಿ ಬೆಂಗಳೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ಇಂಟರ್ಸಿಟಿ ರೈಲಿನ ಇಂಜಿನ್ ಗಾಲಿ ರೈಲ್ವೆ ಟ್ರ್ಯಾಕ್ ಬಿಟ್ಟು ಕೆಳಗೆ ಇಳಿದಿದೆ. ಅದರಿಂದಾಗಿ ರೈಲು ಅಲ್ಲಿಯೇ ನಿಂತಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದ್ದು, ಪ್ರಯಾಣಿಕರೆಲ್ಲರು ಸುರಕ್ಷಿತರಾಗಿದ್ದಾರೆ . ಹಳಿ ತಪ್ಪಿದ ರೈಲು ಇಂಜಿನಿನ ಮುಂದಿನ ಎರಡು ಚಕ್ರವು ಕೆಳಗೆ ಇಳಿದಿತ್ತು. ತಕ್ಷಣ ರೈಲು ಅವಘಡ ಅರಿತು ಚಾಲಕ ಅದನ್ನು […]

ರಾಜ್ಯ

ಧಾರವಾಡ ಜಿಲ್ಲೆಗೆ ಬ್ರಿಟನ್ ನಿಂದ ಮತ್ತೆ 10 ಜನ ಆಗಮನ

ಧಾರವಾಡ : ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ ಮತ್ತೆ 10 ಜನ ಆಗಮಿಸಿದ್ದು, ಅದರಲ್ಲಿ ಏಳು ಜನರನ್ನು ತಪಾಸಣೆ ಮಾಡಲಾಗಿದೆ. ಅವರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನುಳಿದ 3 ಜನರಿಗಾಗಿ ಶೋಧ ನಡೆದಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇನ್ನುಳಿದ ಮೂವರನ್ನು ಪತ್ತೆ ಮಾಡಿ ಅವರನ್ನೂ ತಪಾಸಣೆಗೊಳಪಡಿಸಲಾಗುವುದು. ಮೊನ್ನೆ ಬ್ರಿಟನ್ ನಿಂದ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಕಲಬುರ್ಗಿಯಲ್ಲಿದ್ದಾರೆ. ಅವರನ್ನು ಅಲ್ಲೇ ತಪಾಸಣೆಗೊಳಪಡಿಸಲು ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದರು. […]

ರಾಜ್ಯ

ಡಿ.31 ಹಾಗೂ ಜ.1ರಂದು ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಹುಬ್ಬಳ್ಳಿ prajakiran.com : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶ ಹಾಗೂ ಕೊರೊನಾ ಹರಡುವಿಕೆ ನಿಯಂತ್ರಣ ಉದ್ದೇಶದಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನಾಳೆ ಡಿ. 31 ರ ಬೆಳಿಗ್ಗೆ 11 ಗಂಟೆಯಿಂದ ನಾಳಿದ್ದು ಜ.01 ರ ರಾತ್ರಿ 12 ಗಂಟೆಯವರೆಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕೋವಿಡ್ 19 […]

ರಾಜ್ಯ

ಯೋಗೀಶಗೌಡ ಹತ್ಯೆ ಪ್ರಕರಣದ ಐವರು ಆರೋಪಿಗಳ ಜಾಮೀನು ಅರ್ಜಿ ವಜಾ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದ ಐವರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯನ್ನು ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ವಿಶೇಷ ಸಿಬಿಐ ನ್ಯಾಯಾಲಯ ವಜಾಗೊಳಿಸಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗಂಗಾಧರ ಸಿ.ಎಂ. ಅವರು ಈ ಮಹತ್ವದ ಆದೇಶ ಹೊರಡಿಸಿದರು. ಐವರು ಆರೋಪಿಗಳಾದ ಅಶ್ವಥ್ ಎಸ್, ನಜೀರ್ ಅಹ್ಮದ್, ಶಹಾನವಾಜ್ , ನೂತನ್ ಕೆ.ಎಸ್, ಹರ್ಷಿತ್ ಅವರ ಪರ ಇಬ್ಬರು […]

ರಾಜ್ಯ

ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪ ಸಭಾಪತಿ ಧರ್ಮೆಗೌಡ…..!

ಚಿಕ್ಕಮಗಳೂರು prajakiran.com: ವಿಧಾನ ಪರಿಷತ್ ಉಪ ಸಭಾಪತಿಯಾಗಿದ್ದ ಎಸ್. ಎಲ್. ಧರ್ಮೆಗೌಡ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಆರುಗಂಟೆಗೆ ಸಖರಾಯಪಟ್ಟಣದಿಂದ ಗುಣಸಾಗರಕ್ಕೆ ಕಾರಿನಲ್ಲಿ ಚಾಲಕನೊಂದಿಗೆ ಬಂದಿದ್ದ ಅವರು ರೈಲು ಹಳಿ ವಾಹನದಿಂದ ಇಳಿದು ಹೋಗಿದ್ದರು. ಆ ಬಳಿಕ ಕಡೂರು ವ್ಯಕ್ತಿ ಗೆ ಕರೆ ಮಾಡಿ ರೈಲಿನ ಸಮಯ ವಿಚಾರಿಸಿದ್ದರು. ಜನ ಶತಾಬ್ದಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದರು. ಈ ವೇಳೆ ಅವರು ಡೆತ್ ನೋಟ್ ಬರೆದಿದ್ದಾರೆ. ಜೆಡಿಎಸ್ ನಾಯಕ ಹಾಗೂ ಮೇಲ್ಮನೆ ಸದಸ್ಯರೊಬ್ಬರು ಆತ್ಮಹತ್ಯೆ ಹಾದಿ […]

ರಾಜ್ಯ

ಮಾಜಿ ಸಚಿವ ವಿನಯ್ ಕುಲಕರ್ಣಿ, ಸೋದರ ಮಾವ ಚಂದೂ ಮಾಮ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಧಾರವಾಡ prajakiran.com : ಧಾರವಾಡದ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಸೋದರ ಮಾವ ಚಂದೂ ಮಾಮ ನ್ಯಾಯಾಂಗ ಬಂಧನ ಅವಧಿ ಮತ್ತೆ‌‌ ವಿಸ್ತರಣೆಗೊಂಡಿದೆ. ಸೋಮವಾರ ಡಿ. 28ಕ್ಕೆ ಇಬ್ಬರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಮತ್ತೆ ಅವಧಿ ವಿಸ್ತರಿಸುವಂತೆ ಧಾರವಾಡದ ಮೂರನೇ ಅಧಿಕ ನ್ಯಾಯಾಲಯ ಹಾಗೂ ವಿಶೇಷ ಸಿಬಿಐ ನ್ಯಾಯಾಲಯದ ಎದುರು ಅವರ ಪರ ವಕೀಲರು ಮನವಿ […]

ರಾಜ್ಯ

ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪ ಬಿಜೆಪಿ ಮುಂದಿಲ್ಲ

ಹುಬ್ಬಳ್ಳಿ prajakiran.com : ಜೆಡಿಎಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ವಿಲೀನ ಮಾಡಿಕೊಳ್ಳುವ ಪ್ರಸ್ತಾಪ ಬಿಜೆಪಿ ಮುಂದಿಲ್ಲ. ವಿಷಯಾಧಾರಿತ ಹೊಂದಾಣಿಕೆಯೇ ಬೇರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯಾಬಲ ಇಲ್ಲ. ಹಾಗಾಗಿ ಅಲ್ಲಿ ವಿಷಯಾಧಾರಿತ ಹೊಂದಾಣಿಕೆ ಮಾಡಕೊಳ್ಳಲಾಗಿದೆ ಎಂದು ಹೇಳಿದರು. ಅದನ್ನು ಬಿಟ್ಟರೆ ಜೆಡಿಎಸ್‌ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದರು. ಸ್ವಂತ ಬಲದ ಮೇಲೆ ದೇಶಾದ್ಯಂತ ಪಕ್ಷವನ್ನು […]

ರಾಜ್ಯ

ಧಾರವಾಡದಲ್ಲಿ ಜಾಗಟೆ ಬಾರಿಸುವ ಮೂಲಕ ರೈತರ ಹೋರಾಟಕ್ಕೆ ಸಾಥ್

ಧಾರವಾಡ prajakiran.com : ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ರೈತರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕ್ಯಾರೆ ಎನ್ನದಿರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಕಿಡಿಕಾರಿದರು. ಅವರು ಭಾನುವಾರ ರಾತ್ರಿ ರೈತರ ಹೋರಾಟ ಬೆಂಬಲಿಸಿ ಧಾರವಾಡದ ಕಲಾಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ಜಾಗಟೆ ಬಾರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಗಳ […]