ರಾಜ್ಯ

ಧಾರವಾಡ ಮಾದರಿ ನೀತಿ ಸಂಹಿತೆ ಉಲ್ಲಂಘನೆ : ಲಕ್ಷಾಂತರ ರೂಪಾಯಿ ನಗದು, ಮದ್ಯ, ಸರಕು ಸಾಮಗ್ರಿ ವಶ

ಧಾರವಾಡ ಪ್ರಜಾಕಿರಣ .ಕಾಮ್ : ಧಾರವಾಡ ಜಿಲ್ಲೆಯ ವಿವಿಧ ಕಡೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಅಪಾರ ಪ್ರಮಾಣದ ನಗದು, ಸೀರೆ, ಮದ್ಯ ಹಾಗೂ ಸರಕು ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.

*ನಗದು ವಶ*: ಮಾ.29 ರವರಗೆ 80,32,072 ರೂ ಮೊತ್ತದ ನಗದು ಹಾಗೂ ಮಾ.29 ರಿಂದ ಏಪ್ರಿಲ್12 ರವರೆಗೆ 18,92,780 ರೂ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ

*ಮದ್ಯ*: ಮಾ.29 ರವರೆಗೆ 5,33,358 ರೂ ಮೊತ್ತದ 1061.75 ಲೀ ಮದ್ಯ ಹಾಗೂ ಮಾ.29 ರಿಂದ ಏ.12 ರವರೆಗೆ 4,90,371 ರೂ ಮೊತ್ತದ 1214.825 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ

*ಮಾದಕವಸ್ತು*- ಮಾ29ರವರೆಗೆ 78,100 ರೂ ಮೊತ್ತದ 4.49 ಕೆ.ಜಿ.ಹಾಗೂ ಮಾ.29 ರಿಂದ ಏ.12 ರವರೆಗೆ 6,18,000 ಮೊತ್ತದ 2.370 ಕೆ.ಜಿ ಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

*ಉಚಿತ ಕೊಡುಗೆಗಳು*- ಮಾ.29ರವರೆಗೆ 1,00,000 ರೂ ಹಾಗೂ ಮಾ.29 ರಿಂದ ಏ.12 ರವರೆಗೆ 21,15,581 ಮೊತ್ತದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ

*ಸೀರೆಗಳು*- ಮಾ.29ರವರೆಗೆ 25,12,400 ರೂ ಮೊತ್ತದ 12562 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ

*ಹಾಲು*- ಮಾ.29 ರವರೆಗೆ 7,23,425 ಮೊತ್ತದ 4185 ಕೆ.ಜಿ ಹಾಲಿನ ಕಂಟೇನರ್‍ ವಶಪಡಿಸಿಕೊಳ್ಳಲಾಗಿದೆ

*ಅಕ್ಕಿ*-ಮಾ.29 ರವರೆಗೆ 615,000 ರೂ.ಮೊತ್ತದ 190 ಕ್ವಿಂಟಲ್‍ನಷ್ಟು ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ

*ಅತ್ಯಮೂಲ್ಯ ಲೋಹಗಳು*- ಮಾ.29 ರಿಂದ ಏ.12 ರವರಗೆ 44,70,490 ರೂ ಮೊತ್ತದ ಅತ್ಯಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ

*ಆಯುಧಗಳ ವಿವರ*: ಜಿಲ್ಲೆಯಲ್ಲಿ ಒಟ್ಟು- 1880 ಪರವಾನಿಗೆ ಪಡೆದ ಆಯುಧಗಳಿದ್ದು ಅವುಗಳನ್ನು ಸ್ಕ್ರೀನಿಂಗ್ ಕಮಿಟಿ ಪರಿಶೀಲನೆಗೆ ಒಳಪಟ್ಟು, ಠೇವಣಿ ಮಾಡಲು ಆದೇಶಿಸಲಾಗಿದೆ.

*ವಿವಿಧ ತಂಡಗಳ ವಿವರ*: ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ,

ಎಸ್.ಎಸ್.ಟಿ. ಚೆಕ್ ಪೋಸ್ಟ್-24 ತಂಡಗಳು-72, ಎಫ್.ಎಸ್.ಟಿ.-21 ತಂಡಗಳು, ವಿ.ಎಸ್.ಟಿ.-21, ವಿ.ವಿ.ಟಿ.–21, ಲೆಕ್ಕಪತ್ರ ಪರಿಶೋಧನೆ ತಂಡಗಳು–7, ಮಾದರಿ ನೀತಿ ಸಂಹಿತೆ ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳು-7, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ತಕ್ಷಣ ಕ್ರಮವಹಿಸಲು ಸಿ-ವಿಜಿಲ್ ತಂತ್ರಾಂಶವನ್ನು ನಿರ್ವಹಿಸಲಾಗುತ್ತಿದೆ.

ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ, ವಿವಿಧ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ವಾಹನ ಪರವಾನಿಗೆ ಇತ್ಯಾದಿಗಳಿಗಾಗಿ ಸುವಿಧ (SUVIDHA) ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳು ಪರವಾನಿಗೆ ನೀಡುವ ಕುರಿತು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

*ಮತಯಂತ್ರಗಳ ವಿವರ*: ಜಿಲ್ಲೆಯಲ್ಲಿ ಒಟ್ಟು ಸಿ.ಯು- 2310, ಬಿ.ಯು.-3295 ಮತ್ತು ವಿ.ವಿ.ಪ್ಯಾಟ್-2497 ವಿದ್ಯುನ್ಮಾನ ಮತಯಂತ್ರಗಳು ಹಂಚಿಕೆಯಾಗಿವೆ.

ವಿದ್ಯುನ್ಮಾನ ಮತಯಂತ್ರಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.18 ರವರೆಗೆ ಒಟ್ಟು 738 ಮತಗಟ್ಟೆ ಲೊಕೇಷನ್‍ಗಳಲ್ಲಿ, 63 ತಂಡದವರಿಂದ ಹಾಗೂ 141 ಸೆಕ್ಟರ್ ಅಧಿಕಾರಿಗಳಿಂದ ಅಂದಾಜು 5,14,326 ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ರ್ಯಾಂಡಮೈಜೇಷನ್ ಕಾರ್ಯ ಕೈಗೊಳ್ಳಲಾಗಿದ್ದು, ಏ.5 ರಂದು 125% ಬಿ.ಯು. & ಸಿ.ಯು ಹಾಗೂ 135% ವಿ.ವಿ.ಪ್ಯಾಟ್‍ಗಳನ್ನು 7 ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಒದಗಿಸಲಾಗಿರುತ್ತದೆ.

ಮತದಾನಕ್ಕೆ ಪಿ.ಆರ್.ಒ–2036, ಎ.ಪಿ.ಆರ್.ಒ- 2036 ಹಾಗೂ ಪಿ.ಓ.-4072 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿದೆ.

ಏ.16 ರಂದು ವಿಧಾನಸಭಾ ಮತಕ್ಷೇತ್ರವಾರು ಮೊದಲ ಹಂತದ ತರಬೇತಿಯನ್ನು ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *