prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ವಿಚಾರಣೆ ನಡೆಸಿದ ಸಿಬಿಐ

 ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆಯವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ವಿಚಾರಣೆ ನಡೆಸಿದರು. ಅಲ್ಲದೆ, ಈ ಹಿಂದೆ ಕನ್ನಡ ಪರ ಸಂಘಟನೆ ಜೊತೆಗೆ ಗುರುತಿಸಿಕೊಂಡಿದ್ದ ಸದ್ಯ ಮಾಜಿ ಸಚಿವರ ಆಪ್ತನಾಗಿರುವ ಕಾಂಗ್ರೆಸ್ ಮುಖಂಡ ಆನಂದ ಕಲಾಲ್ ನನ್ನು ಕೂಡ ಸಿಬಿಐ ಅಧಿಕಾರಿಗಳು ಡ್ರಿಲಿಂಗ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ ಗೌಡ […]

ರಾಜ್ಯ

ಸೋಮವಾರ ಒಂದೇ ದಿನ ಮತ್ತೇ 187 ಹೊಸ ಕೇಸ್ ಪತ್ತೆ : ಬೆಂಗಳೂರಿನಲ್ಲಿ ಒಂದು ಬಲಿ

ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೋಮವಾರ ಒಂದೇ ದಿನ ಮತ್ತೇ 187  ಹೊಸ ಕೇಸ್ ಪತ್ತೆಯಾಗಿವೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 28 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 90 ವರ್ಷದ ವೃದ್ದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.  ಆ ಮೂಲಕ ರಾಜ್ಯದ ಸಾವಿನ ಸಂಖ್ಯೆ 52ಕ್ಕೆ ಏರಿದ್ದು, ಬೆಂಗಳೂರಿನಲ್ಲಿಯೇ ಈವರೆಗೆ 12 ಜನ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.   ಉಡುಪಿ ಜಿಲ್ಲೆಯೊಂದರಲ್ಲಿಯೇ ಇವತ್ತು 73 ಜನರಿಗೆ ಕರೋನಾ ಸೋಂಕು ವಕ್ಕರಿಸಿದ್ದು, ಅವರೆಲ್ಲರೂ […]

ಅಪರಾಧ

ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ನಟಿ ಚಂದನಾ

ಬೆಂಗಳೂರು prajakiran.com : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಚಂದನಾ ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇ 28ರಂದೇ ಈ ಆತ್ಮಹತ್ಯೆ ನಡೆದಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ.  ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್  ಪರಸ್ಪರ ಪ್ರೀತಿಸಿದ್ದರು. ಇಬ್ಬರು ಜೊತೆಗೆ ಓಡಾಡಿದ್ದರು. ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ […]

ರಾಜ್ಯ

ಬಿಜೆಪಿಯಲ್ಲಿ ಯಾವ ಗದ್ದಲವೂ ಇಲ್ಲ, ಗೊಂದಲವೂ ಇಲ್ಲ ಎಂದ ಕೋರೆ

ಬೆಳಗಾವಿ prajakiran.com : ಯಾವುದೇ ಚುನಾವಣೆ ನಡೆದರೂ ದೊಡ್ಡ ಪಕ್ಷದಲ್ಲಿ ಟಿಕೆಟ್‍ಗಾಗಿ ಆಕಾಂಕ್ಷಿಗಳಿರುವುದು ಸಹಜ. ಟಿಕೆಟ್ ಕೇಳುವುದು ತಪ್ಪಲ್ಲ, ಅಷ್ಟಕ್ಕೂ ಇನ್ನೂ ರಾಜ್ಯ ಸಭೆ ಚುನಾವಣೆಗೆ ನೋಟಿಫಿಕೇಶನ್ ಕೂಡ ಜಾರಿಗೊಂಡಿಲ್ಲ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದರು. ಅವರು ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಹೇಳಿಕೆ ನೀಡಿದರು. ಟಿಕೆಟ್ ವಿಷಯದಲ್ಲಿ ಪಕ್ಷ ಮುಕ್ತವಾಗಿ ನಿರ್ಣಯ ಕೈಗೊಳ್ಳುತ್ತದೆ. ಉಮೇಶ ಕತ್ತಿ ಅವರು ಶಾಸಕ ಮಿತ್ರರನ್ನು ಊಟಕ್ಕೆ ಕರೆದಿದ್ದರು. ಅದು ಪಕ್ಷದಲ್ಲಿ ಭಿನ್ನಮತ ಅಲ್ಲ ಎಂದು […]

ರಾಜ್ಯ

ಕೊನೆಗೂ ಎಚ್ಚೆತ್ತ ಧಾರವಾಡ ಎಪಿಎಂಸಿ : 20ಕ್ಕೂ ಹೆಚ್ಚು ಮಾವಿನ ಹಣ್ಣಿನ ದಲಾಲಿಗಳಿಗೆ ನೋಟಿಸ್

ಧಾರವಾಡ prajakiran.com : ರೈತರ ಬಳಿ ಶೇ 10 ರಷ್ಟು ಕಮಿಷನ್ ವಸೂಲಿಯ ಮೂಲಕ ಹಗಲು ದರೋಡೆಗೆ ಇಳಿದಿದ್ದ  20ಕ್ಕೂ ಹೆಚ್ಚು ಮಾವಿನ ಹಣ್ಣಿನ ದಲಾಲಿಗಳಿಗೆ ಧಾರವಾಡ ಎಪಿಎಂಸಿ ಕಾರ್ಯದರ್ಶಿ ಕೊನೆಗೂ ನೋಟಿಸ್  ಜಾರಿ ಮಾಡಿದ್ದಾರೆ. ನೋಟಿಸ್ ನೀಡಿದವರ ವಿವರ ಹೀಗಿದೆ : ದಾವಲ್ ಸಾಬ ಎ ಭಾಗವಾನ್ (ಡಿಎಬಿ), ನೂರ್ ಅಹ್ಮದ್   ಮುಸ್ತಫಾ, ಮೋಯಿನ್ ಫ್ರುಟ್ ಟ್ರೇಡರ್ಸ್ ,  ಎಂ ಎ ಎಂ ಫ್ರುಟ್ಸ್, ಜಮಾದಾರ ಫ್ರುಟ್ಸ್ , ಆಸ್ಪಕ್ ಮೀರಜಕರ್,  ಮೌಲಾಲಿ ದಾಸ್ತಿಕೊಪ್ಪ, ನೂರ್ […]

ರಾಜ್ಯ

ಜೂನ್ 7ರ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪರವಾನಿಗೆ ನೀಡದ ಬಿಜೆಪಿ ಸರಕಾರ

ಬೆಂಗಳೂರು prajakiran.com : ಜೂನ್ 7ರಂದು ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಪರವಾನಿಗೆ ನೀಡದ ಹಿನ್ನಲೆಯಲ್ಲಿ ದಿನಾಂಕ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜೂನ್ 7ರ ಅಧಿಕಾರ ಸ್ವೀಕಾರ ಮೊಟಕು ಮಾಡಲಾಗಿದ್ದು, ಅವರು ಪರವಾನಿಗೆ ನೀಡಿದನಂತರವೇ ಅಧಿಕಾರ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಉದ್ದೇಶ ಪೂರ್ವಕವಾಗಿ ಅವರು ಕಾಂಗ್ರೆಸ್ ಕಾರ್ಯಕ್ರಮಕ್ಕೆ […]

ಅಂತಾರಾಷ್ಟ್ರೀಯ

ಪ್ರಧಾನಿ ಮೋದಿ ಗುಣಗಾನ ಮಾಡಿದ ಸಿಎಂ ಬಿಎಸ್ ವೈ 

ಬೆಂಗಳೂರು prajakiran.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಮುಕ್ತಿ ಹಾಕಲು ಅನೇಕ ಕಾರ್ಯಕ್ರಮ ನೀಡಿದ್ದಾರೆ.  ಜಾಗತೀಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇಶದ ಏಕತೆಗಾಗಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ 370 ರದ್ದು, ಒಂದು ದೇಶ ಒಂದು ರೇಶನ್ ಕಾರ್ಡ್, ರಾಮಮಂದಿರ ತೀರ್ಪು, ತ್ರಿವಳಿ ತಲಾಖ್ ರದ್ದು ಸೇರಿ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಎರಡನೇ ಅವಧಿಯ ಮೊದಲ ಒಂದು […]

ರಾಜ್ಯ

ರಾಜ್ಯದಲ್ಲಿ ಒಂದೇ ದಿನ 299 ಕರೋನಾ ಪತ್ತೆ : ರಾಯಚೂರು 83, ಯಾದಗಿರಿ 44, ಬೀದರನಲ್ಲಿ 33 ಸೋಂಕು

ಬೆಂಗಳೂರು prajakiran.com : ಭಾನುವಾರ ರಾಜ್ಯದಲ್ಲಿ ಒಂದೇ ದಿನ 299 ಕರೋನಾ ಪತ್ತೆಯಾಗಿದ್ದು, ಆ ಮೂಲಕ ಕರುನಾಡಿನ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಇವತ್ತು ರಾಯಚೂರು ಹಾಗೂ ಬೀದರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 51ಕ್ಕೆ ಏರಿದೆ. ರಾಯಚೂರಿನ 50 ವರ್ಷದ ವ್ಯಕ್ತಿ ಮಹಾರಾಷ್ಟ್ರದಿಂದ ಮರಳಿ ಬಂದಿದ್ದ. ಇವರಿಗೆ ಸಾರಿ (ಉಸಿರಾಟದ ತೊಂದರೆ) ಸಂಕಷ್ಟ ಎದುರಾಗಿತ್ತು. ಅದೇ ರೀತಿ ಬೀದರನ 75 […]

ಅಪರಾಧ

ಪೊಲೀಸ್ ಠಾಣೆ ಎದುರೇ ಎರಡು ಗುಂಪುಗಳ ಹೊಡೆದಾಟ …!

ಬಳ್ಳಾರಿ prajakiran.com : ಪೊಲೀಸ್ ಠಾಣೆಯ ಎದುರೇ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ   ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ. ಭಾನುವಾರ ಎರಡು ಗುಂಪುಗಳು ಪರಸ್ಪರ ದೂರು ಪ್ರತಿ ದೂರು ನೀಡಲು ಬಂದಿದ್ದವು. ಈ ವೇಳೆ  ಅವಾಚ್ಯ ಶಬ್ದಗಳ ನಿಂದನೆ ಮಾಡಿಕೊಂಡಅವರು ಕೈ ಕೈ ಮಿಲಾಯಿಸಿದ್ದಾರೆ. ಇದರಿಂದಾಗಿ  ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಪೊಲೀಸ್ ಠಾಣೆಯ ಬಾಗಿಲು ಜಖಂಗೊಂಡಿದೆ. ಇದರಿಂದ ಕೆಂಡಾಮಂಡಲಗೊಂಡ ಪೊಲೀಸರು ಕೊನೆಗೆ ರೊಚ್ಚಿಗೆದ್ದ ಎರಡು […]

ರಾಜ್ಯ

ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಸುರಿದ ಮಳೆ : ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಒಬ್ಬನಿಗೆ ಗಾಯ

ಧಾರವಾಡ/ಬೆಳಗಾವಿ prajakiran.com : ಭಾನುವಾರ ಸಂಜೆ ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಎರಡು ಜಿಲ್ಲೆಗಳಲ್ಲಿ ಜನಜೀವನ ಕೆಲ ಕಾಲಅಸ್ತವ್ಯಸ್ತಗೊಂಡಿತು. ಕುಂದಾನಗರಿ ಬೆಳಗಾವಿ ಹಾಗೂ ಧಾರವಾಡದಲ್ಲಿ ಕೆಲಮನೆಗಳಿಗೆ ನೀರು ನುಗ್ಗಿದೆ. ಮಳೆ ಆರ್ಭಟಕ್ಕೆ ತಗ್ಗು ಪ್ರದೇಶದ ಜನರು ತತ್ತರಗೊಂಡಿದ್ದಾರೆ. ಬೆಳಗಾವಿಯ ಶಾಹು‌ನಗರದ ಕೆಲ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಜನತೆ ಪರದಾಡಬೇಕಾಯಿತು. ಅಲ್ಲದೆ, ಮಳೆ ನೀರು ನುಗ್ಗಿದ್ದರಿಂದ ಅದನ್ನು ಹೊರ ಹಾಕಲು ಹರ ಸಾಹಸ ಮಾಡಿದರು. ಇನ್ನೂ ಬೆಳಗಾವಿಯ ವಡಗಾವಿಯಲ್ಲಿ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಇದರಿಂದ ಒಬ್ಬರಿಗೆ […]