prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಂತಾರಾಷ್ಟ್ರೀಯ

ಪ್ರಧಾನಿ ಮೋದಿ ಗುಣಗಾನ ಮಾಡಿದ ಸಿಎಂ ಬಿಎಸ್ ವೈ 

ಬೆಂಗಳೂರು prajakiran.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಮುಕ್ತಿ ಹಾಕಲು ಅನೇಕ ಕಾರ್ಯಕ್ರಮ ನೀಡಿದ್ದಾರೆ.  ಜಾಗತೀಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇಶದ ಏಕತೆಗಾಗಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ 370 ರದ್ದು, ಒಂದು ದೇಶ ಒಂದು ರೇಶನ್ ಕಾರ್ಡ್, ರಾಮಮಂದಿರ ತೀರ್ಪು, ತ್ರಿವಳಿ ತಲಾಖ್ ರದ್ದು ಸೇರಿ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಎರಡನೇ ಅವಧಿಯ ಮೊದಲ ಒಂದು […]

ರಾಜ್ಯ

ರಾಜ್ಯದಲ್ಲಿ ಒಂದೇ ದಿನ 299 ಕರೋನಾ ಪತ್ತೆ : ರಾಯಚೂರು 83, ಯಾದಗಿರಿ 44, ಬೀದರನಲ್ಲಿ 33 ಸೋಂಕು

ಬೆಂಗಳೂರು prajakiran.com : ಭಾನುವಾರ ರಾಜ್ಯದಲ್ಲಿ ಒಂದೇ ದಿನ 299 ಕರೋನಾ ಪತ್ತೆಯಾಗಿದ್ದು, ಆ ಮೂಲಕ ಕರುನಾಡಿನ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಇವತ್ತು ರಾಯಚೂರು ಹಾಗೂ ಬೀದರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 51ಕ್ಕೆ ಏರಿದೆ. ರಾಯಚೂರಿನ 50 ವರ್ಷದ ವ್ಯಕ್ತಿ ಮಹಾರಾಷ್ಟ್ರದಿಂದ ಮರಳಿ ಬಂದಿದ್ದ. ಇವರಿಗೆ ಸಾರಿ (ಉಸಿರಾಟದ ತೊಂದರೆ) ಸಂಕಷ್ಟ ಎದುರಾಗಿತ್ತು. ಅದೇ ರೀತಿ ಬೀದರನ 75 […]

ಅಪರಾಧ

ಪೊಲೀಸ್ ಠಾಣೆ ಎದುರೇ ಎರಡು ಗುಂಪುಗಳ ಹೊಡೆದಾಟ …!

ಬಳ್ಳಾರಿ prajakiran.com : ಪೊಲೀಸ್ ಠಾಣೆಯ ಎದುರೇ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ   ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ. ಭಾನುವಾರ ಎರಡು ಗುಂಪುಗಳು ಪರಸ್ಪರ ದೂರು ಪ್ರತಿ ದೂರು ನೀಡಲು ಬಂದಿದ್ದವು. ಈ ವೇಳೆ  ಅವಾಚ್ಯ ಶಬ್ದಗಳ ನಿಂದನೆ ಮಾಡಿಕೊಂಡಅವರು ಕೈ ಕೈ ಮಿಲಾಯಿಸಿದ್ದಾರೆ. ಇದರಿಂದಾಗಿ  ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಪೊಲೀಸ್ ಠಾಣೆಯ ಬಾಗಿಲು ಜಖಂಗೊಂಡಿದೆ. ಇದರಿಂದ ಕೆಂಡಾಮಂಡಲಗೊಂಡ ಪೊಲೀಸರು ಕೊನೆಗೆ ರೊಚ್ಚಿಗೆದ್ದ ಎರಡು […]

ರಾಜ್ಯ

ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಸುರಿದ ಮಳೆ : ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಒಬ್ಬನಿಗೆ ಗಾಯ

ಧಾರವಾಡ/ಬೆಳಗಾವಿ prajakiran.com : ಭಾನುವಾರ ಸಂಜೆ ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಎರಡು ಜಿಲ್ಲೆಗಳಲ್ಲಿ ಜನಜೀವನ ಕೆಲ ಕಾಲಅಸ್ತವ್ಯಸ್ತಗೊಂಡಿತು. ಕುಂದಾನಗರಿ ಬೆಳಗಾವಿ ಹಾಗೂ ಧಾರವಾಡದಲ್ಲಿ ಕೆಲಮನೆಗಳಿಗೆ ನೀರು ನುಗ್ಗಿದೆ. ಮಳೆ ಆರ್ಭಟಕ್ಕೆ ತಗ್ಗು ಪ್ರದೇಶದ ಜನರು ತತ್ತರಗೊಂಡಿದ್ದಾರೆ. ಬೆಳಗಾವಿಯ ಶಾಹು‌ನಗರದ ಕೆಲ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಜನತೆ ಪರದಾಡಬೇಕಾಯಿತು. ಅಲ್ಲದೆ, ಮಳೆ ನೀರು ನುಗ್ಗಿದ್ದರಿಂದ ಅದನ್ನು ಹೊರ ಹಾಕಲು ಹರ ಸಾಹಸ ಮಾಡಿದರು. ಇನ್ನೂ ಬೆಳಗಾವಿಯ ವಡಗಾವಿಯಲ್ಲಿ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಇದರಿಂದ ಒಬ್ಬರಿಗೆ […]

ರಾಜ್ಯ

ರಾಜ್ಯಾದ್ಯಂತ ಜೂನ್ 8ರಿಂದ ದೇವಸ್ಥಾನ ಬಾಗಿಲು ಓಪನ್

ಬೆಂಗಳೂರು prajakiran.com : ರಾಜ್ಯಾದ್ಯಂತ ಜೂನ್ 8ರಿಂದ ಎಲ್ಲಾ ದೇವಸ್ಥಾನಗಳ ಬಾಗಿಲು ಓಪನ್  ಆಗಲಿವೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರಕಾರದ ಆದೇಶದಂತೆ ಈ ನಿರ್ಧಾರಕ್ಕೆ ಬರಲಾಗಿದ್ದು, ದೇವರನ್ನು ಮುಟ್ಟಿ ಪೂಜೆ ಮಾಡಲು ದೇಗುಲದ ಒಳಗೆ ಅರ್ಚಕರು ಮಾತ್ರ ಪ್ರವೇಶ ಮಾಡಲಿದ್ದಾರೆ ಎಂದು ಹೇಳಿದರು. ಈ ಹಿಂದೆ ಜೂನ್ ಒಂದನೇ ತಾರೀಖಿನಿಂದ ಬಾಗಿಲು ತೆರೆಯಲಾಗುವುದು ಎಂದು ಅವರು […]

ರಾಜ್ಯ

ಕುಂದಗೋಳ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರ ಕಡೆಗಣನೆಗೆ ಬುಗಿಲೆದ್ದ ಆಕ್ರೋಶ

ಹುಬ್ಬಳ್ಳಿ prajakiran.com : ಮಾಜಿ ಸಚಿವ ಸಿ.ಎಸ್ ಶಿವಳ್ಳಿ ಅವರ ನಿಧನದ ನಂತರ ಕುಂದಗೋಳ ಕಾಂಗ್ರೆಸ್ ನಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ  ಬುಗಿಲೆದಿದೆ. ಈ ಬಗ್ಗೆ ಅನೇಕ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಅವರ ಕೆಲವು ಅಭಿಪ್ರಾಯಗಳು ಈ ರೀತಿ ಇವೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸನಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ.  ಲೂಟಿಕೋರರಿಗೆ ಮಾತ್ರ ಜಾಗ. ಶಿವಳ್ಳಿ ನಂತರ ಅನಾಥವಾದ ಕುಂದಗೋಳ ತಾಲೂಕಿನ ಪ್ರಾಮಾಣಿಕ ಕಾಂಗ್ರೇಸ್ ಕಾರ್ಯಕರ್ತರು. ಶಿವಳ್ಳಿಯವರು ಯಾವ ಅನ್ಯಾಯವನ್ನು ವಿರೋದಿಸುತ್ತಿದ್ದರೋ ಅದು […]

ರಾಜ್ಯ

ಸಿಎಂ ಬಿ ಎಸ್ ವೈ ಪುತ್ರ ವಿಜಯೇಂದ್ರ ಉತ್ತರಾಧಿಕಾರಿಯಾಗಲು ಅಪಸ್ವರ….!

ಬೆಂಗಳೂರು prajakiran.com : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಉತ್ತರಾಧಿಕಾರಿಯಾಗಲು ಬಿಜೆಪಿಯ ಹಲವು ಶಾಸಕರು ಅಪಸ್ವರ ಎತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಪರಅನೇಕರು ಒಲುವು ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿ ನಿರತರಾಗಿರುವ ಬಂಡೆದ್ದ ರೆಬಲ್ ಶಾಸಕರು ಮತ್ತೋಮ್ಮೇ ಶೀಘ್ರದಲ್ಲಿಯೇ ಸಭೆ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸಿಎಂ ಯಡಿಯೂರಪ್ಪ ಬದಲಾವಣೆ ಕೂಗು ಬಲಗೊಳ್ಳಲು ಅವರ ಪುತ್ರ ವಿಜಯೇಂದ್ರ ಅವರೇ ಮುಖ್ಯ ಕಾರಣ ಎಂಬ ಮಾತು […]

ರಾಜ್ಯ

ಮುಂಬೈದಿಂದ ಹುಬ್ಬಳ್ಳಿಗೆ ಬಂದ ಕೋವಿಡ್ ಪಾಸಿಟಿವ್ ವ್ಯಕ್ತಿ ಕಿಮ್ಸ್ ಗೆ ದಾಖಲು

ಧಾರವಾಡ prajakiran.com : ಮೇ 28 ಗುರುವಾರದಂದು ಕೋವಿಡ್ 19 ದೃಢಪಟ್ಟಿರುವ ಧಾರವಾಡ ಜಿಲ್ಲೆಯ  ಪಿ – 2710 ಸೋಂಕಿತ ವ್ಯಕ್ತಿಯ ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಪಿ-2710 ನೇ ಸೋಂಕಿತ 65 ವರ್ಷದ ಪುರುಷ ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ. ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು.  ಮೇ 25 ರಂದು ಸೋಮವಾರ ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು.  ಮೇ 26 ರಂದು […]

ರಾಜ್ಯ

ಪಿ ಎಸ್ ಐ ಹುದ್ದೆ ನೇರ ನೇಮಕಾತಿ ಅರ್ಜಿ ಸ್ವೀಕಾರ ಸ್ಥಗಿತ

ಬೆಂಗಳೂರು prajakiran.com : ಪೊಲೀಸ್  ಇಲಾಖೆಯಲ್ಲಿ ಖಾಲಿ ಇರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ( ಸಿವಿಲ್ ) -431 ಮತ್ತು ಪೊಲೀಸ್  ಸಬ್  ಇನ್ಸ್‌ಪೆಕ್ಟರ್ ( ಸಿವಿಲ್, ಕಲ್ಯಾಣ ಕರ್ನಾಟಕ ) -125 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 01/06/2020 ರಿಂದ 30 / 06 / 2020 ರವರೆಗೆ ಅರ್ಹ ಅಭ್ಯರ್ಥಿಗಳ ಅರ್ಜಿ ಸ್ವೀಕಾರಕ್ಕೆತಡೆ ಬಿದ್ದಿದೆ. ಈ ಹಿಂದೆ ಈ ಕುರಿತು ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಸರ್ಕಾರದ ಪತ್ರ ಸಂಖ್ಯೆ […]

ರಾಜ್ಯ

ಧಾರವಾಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದ ಮಂಗ ಸೆರೆ

ಧಾರವಾಡ prajakiran.com : ಕಳೆದ ಹದಿನೈದು ದಿನಗಳಿಂದ ಧಾರವಾಡದ‌ ಮುರುಘಾಮಠ, ಹೆಬ್ಬಳ್ಳಿ ಅಗಸಿ ಹಾಗೂ ಮದಿಹಾಳದ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದ ಮಂಗವನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಮದವೇರಿದ ಮಂಗನ ಹಾವಳಿಗೆ ಧಾರವಾಡದ ವಿವಿಧ ಬಡಾವಣೆಗಳ ಜನರಲ್ಲಿ ಆತಂಕ ಹೆಚ್ಚಿಸಿತ್ತು. ಇನ್ನೂ ಸಿಕ್ಕ ಸಿಕ್ಕವರಿಗೆ  ಕಚ್ಚಿದ್ದರಿಂದ ಸಾರ್ವಜನಿಕರಿಗೆ ಭಾರೀ ಆತಂಕ ಎದುರಾಗಿತ್ತು.  ಹೀಗಾಗಿ ಭಯ ಹುಟ್ಟಿಸಿದ ಮಂಗನನ್ನು ಸೆರೆ ಹಿಡಿಯವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಮೊರೆ ಹೋಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಮಂಗಕ್ಕೆ ಬಲೆ ಹಾಕಿ ಕೊನೆಗೂ […]