ಅಪರಾಧ

ಮನೆಯೊಳಗೆ ನುಗ್ಗಿದ ಲಾರಿ : ಚಾಲಕ ಸ್ಥಳದಲ್ಲೇ ಸಾವು

ಹಾಸನ prajakiran.com : ಬೋರವೆಲ್ ಸಪೋರ್ಟ್ ಲಾರಿಯೊಂದು ಮನೆಯೊಳಗೆ ನುಗ್ಗಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನದ ನುಗ್ಗೇಹಳ್ಳಿ ಸಮೀಪದ ಮುಳ್ಳಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ  ನಡೆದಿದೆ.

ತಮಿಳುನಾಡು ಮೂಲದ ರಾಜು ವೆಲ್ (42) ಎಂಬಾತನೇ ಮೃತ ಲಾರಿ ಚಾಲಕ ಎಂದು ತಿಳಿದುಬಂದಿದೆ. ಅಕ್ಕನಹಳ್ಳಿ ಕೂಡಿನಿಂದ ಹೊರಟಿದ್ದ ಲಾರಿ ಚಾಲಕ ವಾಹನವನ್ನು ಎಡಕ್ಕೆ ತಿರುಗಿಸುವ ಬದಲು ಮನೆಯೊಳಗೆ ನುಗಿದ್ದ. ಇದರಿಂದಾಗಿ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.



ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಗ್ರಾಮ ಪಂಚಾಯತಿ ಸದಸ್ಯೆ ರೂಪಾ ಚೇತನ್ ಅವರ ಮನೆಯೊಳಗೆ ಲಾರಿ ಪ್ರವೇಶಿಸಿದೆ. ಘಟನೆಯಲ್ಲಿ ಮನೆ ಮುಂಭಾಗದ ಛಾವಣಿ ಸಂಪೂರ್ಣ ಕುಸಿದಿದೆ.

ಘಟನಾ ಸ್ಥಳಕ್ಕೆ ನುಗ್ಗೆಹಳ್ಳಿ ಠಾಣೆ ಪೊಲೀಸರು  ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹವನ್ನು ಸ್ಥಳೀಯರ ನೆರವಿನೊಂದಿಗೆ ಹೊರ ತೆಗೆದರು. ಆನಂತರ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಗೆ ಶವ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *