ರಾಜ್ಯ

ಧಾರವಾಡದಲ್ಲಿ ಮತ್ತೇ ನಾಲ್ವರಿಗೆ ಕರೋನಾ ಸೋಂಕು ಪತ್ತೆ

ಧಾರವಾಡ : ಧಾರವಾಡದ ಜಿಲ್ಲೆಯಲ್ಲಿ  ಬುಧವಾರ ಮತ್ತೆ ನಾಲ್ಕು   ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 67 –  ಪಿ-  5969  ನೇ ಸೋಂಕಿತ 29 ವರ್ಷದ ಮಹಿಳೆ ಇವರು ಹುಬ್ಬಳ್ಳಿ ಭೈರಿದೇವರಕೊಪ್ಪ ಶಾಂತಿನಿಕೇತನ ಕಾಲನಿಯ ಸನಾ ಕಾಲೇಜು ಹಿಂಭಾಗದ ನಿವಾಸಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ.

DWD – 68 ಪಿ- 5970 ನೇ ಸೋಂಕಿತ 31 ವರ್ಷದ ಮಹಿಳೆ  ಇವರು ಧಾರವಾಡ ಯಾಲಕ್ಕಿ ಶೆಟ್ಟರ ಕಾಲನಿ ನಿವಾಸಿಯಾಗಿದ್ದಾರೆ.  ತೀವ್ರ ಜ್ವರ ,ಕೆಮ್ಮು,ನೆಗಡಿಯಿಂದ ಬಳಲುತ್ತಿದ್ದರು, ತಪಾಸಣೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ದೃಢಪಟ್ಟಿದೆ.



DWD 69- ಪಿ- 5971 ನೇ ಸೋಂಕಿತ 26 ವರ್ಷದ ಮಹಿಳೆ ಹುಬ್ಬಳ್ಳಿ ನೇಕಾರ ನಗರ ನಿವಾಸಿಯಾಗಿದ್ದಾರೆ. ಇವರಿಗೆ ಕರೋನಾ ಹೇಗೆ ಬಂತು ಎಂಬುದರ ಕುರಿತು ಆರೋಗ್ಯ ಇಲಾಖೆ ಪತ್ತೆ ಮಾಡಲಾಗುತ್ತಿದೆ.

DWD 70- ಪಿ- 5972 ನೇ ಸೋಂಕಿತ 40 ವರ್ಷದ ಪುರುಷ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿಯಾಗಿದ್ದು, ಇವರು ನವದೆಹಲಿಯಿಂದ ಧಾರವಾಡ ಜಿಲ್ಲೆಗೆ ಹಿಂದಿರುಗಿದ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. 

 ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  70 ಕ್ಕೆ ಏರಿಕೆಯಾಗಿದೆ. ಈಗಾಗಲೇ  45   ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ . ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.


PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *