prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಜಿಲ್ಲೆ

ಧಾರವಾಡದಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಬಂಗಾರ ಅಂಗಡಿ ಮಾಲೀಕರು..!

ಧಾರವಾಡ prajakiran.com : ಸ್ಥಳೀಯ ಶಹರ ಠಾಣೆಯ ಪೊಲೀಸರೂ ಸೇರಿದಂತೆ ವಿವಿಧ ಠಾಣೆಯಿಂದ ಬರುವ ಪೊಲೀಸರು, ಕಳ್ಳತನ ಮಾಡಿರೋ ಬಂಗಾರವನ್ನ ಖರೀದಿಸಿದ್ದಾರೆಂದು ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ ಧಾರವಾಡದ ನಗರದ ಬಹುತೇಕ ಬಂಗಾರ ಅಂಗಡಿ ವ್ಯಾಪಾರಸ್ಥರು ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಆರೋಪಿಗಳ ಸಮೇತ ಬಂದ ಹಾಗೇ ತೋರಿಸಿ, ನಮ್ಮಲ್ಲೇ ಇರುವ ಅಂಗಡಿಗಳಿಂದ 100 ಗ್ರಾಂ, 200 ಗ್ರಾಂ ಬಂಗಾರ ಕೊಡು ಎಂದು ಪೀಡಿಸುತ್ತಾರೆ. ಕಳ್ಳರ ಮಾತುಗಳನ್ನ ಕೇಳಿ ನಮಗೆ ಕಿರಿಕಿರಿ ಕೊಡುತ್ತಿದ್ದಾರೆಂದು ದೂರಿದ ವ್ಯಾಪಾರಸ್ಥರು, ತಮ್ಮ […]

ಅಂತಾರಾಷ್ಟ್ರೀಯ

ಶಿವಗಂಗೆಯ ಬೆಟ್ಟದ ತುತ್ತತುದಿಯಲ್ಲಿ ತೀರ್ಥೋದ್ಬವ……!

ಬೆಂಗಳೂರು prajakiran.com : ಶಿವ-ಗಂಗೆ ನೆಲೆಸಿರುವ ತಪೋಭೂಮಿ, ದಕ್ಷಿಣಯಾನ ಕಳೆದು ಉತ್ತರಾಯಣ ಪ್ರಾರಂಭದ ದಿನ ಸಂಕ್ರಮಣ, ಈ ವಿಶೇಷ ದಿನದಂದು ಬೆಟ್ಟದ ತುತ್ತತುದಿಯ ಬಂಡೆಯಲ್ಲಿ ಬೊಗಸೆ ನೀರು ಪ್ರತ್ಯಕ್ಷವಾಗಿ ಜನರಲ್ಲಿ ಕೊವಿಡ್ ೧೯ ಮಧ್ಯೆಯೂ ವಿಸ್ಮಯದ ರೀತಿಯಲ್ಲಿ ಪವಾಡವನ್ನ ಮೂಡಿಸಿದೆ.  ಒಂದೆಡೆ ಚಾರಣಿಗರಿಗೆ ಸವಾಲಿನಂತೆ ಅಲಂಕಾರಗೊಂಡಿರುವ ಬೆಟ್ಟ, ವಿದ್ಯುತ್ ದೀಪಗಳ ಸಾಲು. ಭೂಮಿಯಿಂದ ಸರಿಸುಮಾರು ೧೬೦೦ ಅಡಿಗಿಂತ ಎತ್ತರದ ದಕ್ಷಿಣ ಕಾಶಿ ಎಂದೆ ಪ್ರಸಿದ್ಧವಾಗಿರುವ ಪುಣ್ಯಕ್ಷೇತ್ರ ಶಿವಗಂಗೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಈ ಶಿವಗಂಗೆ […]

ರಾಜ್ಯ

ಸಚಿವ ಸಂಪುಟದಲ್ಲಿ ಒಬ್ಬ ದಲ್ಲಾಳಿ, ಭ್ರಷ್ಟಾಚಾರಿಯನ್ನ ಸಚಿವರನ್ನಾಗಿ ಮಾಡಲಾಗಿದೆ ಎಂದ ವಿಶ್ವನಾಥ

ರಾಯಚೂರು prajakiran.com : ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬ ದಲ್ಲಾಳಿ, ಭ್ರಷ್ಟಾಚಾರಿಯನ್ನ ಸಚಿವರನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಗರದಲ್ಲಿ ಖಾಸಗಿ ಹೋಟೆಲ್​​​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಈ ಸಮಯದಲ್ಲಿ ಹಲವು ಒತ್ತಾಯಗಳು ಬರುವುದು ಸಹಜ. ಆದ್ರೆ ಭ್ರಷ್ಟರನ್ನ ಸಚಿವರನ್ನಾಗಿ ಮಾಡುವ ಒತ್ತಾಯ ಸಾಮಾನ್ಯವಾಗಿ ಉದ್ಭವಿಸುವುದಿಲ್ಲ ಎಂದು ಕುಟುಕಿದರು. ಭ್ರಷ್ಟನನ್ನ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ […]

ಕ್ರೀಡೆ

ಕುಂಟಾಬಿಲ್ಲೆ, ಚಿನ್ನಿದಾಂಡು, ಲಗೋರಿ, ಗೋಲಿ, ಟೈರ್ ಓಟ ಆಡಿ ಕುಣಿದು ಕುಪ್ಪಳಿಸಿದ ಮಕ್ಕಳು,ಮಹಿಳೆಯರು

ಅನಾವರಣಗೊಂಡ ಹತ್ತು ಹಲವು ದೇಸಿ ಕ್ರೀಡೆಗಳು  ಧಾರವಾಡ prajakiran.com : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಜನಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿಅಂಗವಾಗಿ ವಿವಿಧ ದೇಸಿ ಕ್ರೀಡಾಕೂಟಗಳು ಸೋಮವಾರ  ನಡೆದವು. ನೂರಾರು ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು ಹೀಗೆ ಎಲ್ಲರು ತಮ್ಮ ವಯಸ್ಸಿನ ಭೇದಭಾವ ಮರೆತು ಮಕ್ಕಳಾಗಿ ಕ್ರೀಡಾಸ್ಪೂರ್ತಿ ಮೆರೆದರು. ಅದರಲ್ಲೂ ವಿಶೇಷವಾಗಿ ಆಧುನಿಕ ಯುಗದ ಜಂಜಾಟದ ಬದುಕಿನಲ್ಲಿ ಮರೆತು ಹೋಗಿರುವ ಹತ್ತು ಹಲವು ದೇಸಿ ಕ್ರೀಡಾಕೂಟಗಳಿಗೆ ಇಲ್ಲಿ ಭಾರೀ ಮಹತ್ವ ನೀಡಲಾಗಿತ್ತು. […]

ರಾಜ್ಯ

ಧಾರವಾಡದಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿಗಳಿಂದ ಕೋವಿಸೀಲ್ಡ್ ಲಸಿಕೆಗೆ ಸ್ವಾಗತ

ಧಾರವಾಡ prajakiran.com : ಕೋವಿಡ್-೧೯ ನಿಯಂತ್ರಣಕ್ಕಾಗಿ ಜಿಲ್ಲೆಗೆ ಬುಧವಾರ ಆಗಮಿಸಿದ ಕೋವಿಸೀಲ್ಡ್ ಲಸಿಕೆಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಉಪ ವಿಭಾಗಾಧಿಕಾರಿ ಡಾ. ಗೋಪಾಲ ಕೃಷ್ಣ ಬಿ. ಅವರು ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಧಾರವಾಡ ಜಿಲ್ಲೆಗೆ ೧೧ ಸಾವಿರ ಕೊವೀಡ್-೧೯ ರ ಕೋವಿಸೀಲ್ಡ್ ಲಸಿಕೆಯು ಬೆಳಗಾವಿ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಆಗಮಿಸಿದ್ದು, ರಾಜ್ಯ ಸರ್ಕಾರದಿಂದ ಹೊಸದಾಗಿ ನೀಡಿರುವ […]

ಅಂತಾರಾಷ್ಟ್ರೀಯ

ತೀವ್ರಗೊಂಡ ದೆಹಲಿ ರೈತರ ಹೋರಾಟ : ರಕ್ತದಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆದ ಅನ್ನದಾತರು

ನವದೆಹಲಿ prajakiran.com : ನಿನ್ನೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರೈತರ ಹೋರಾಟ ಹೊಸ ಆಯಾಮ ಪಡೆದುಕೊಳ್ಳುತ್ತಿದೆ.  ರೈತ ವಿರೋಧಿ ಮೂರು ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವುದಕ್ಕೆ ಪಟ್ಟು ಹಿಡಿದಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬುಧವಾರ ಬೆಳಗ್ಗೆಯಿಂದಲೇ ರೈತರ ರಕ್ತವನ್ನು ಸಂಗ್ರಹಿಸಿ ಆ ರಕ್ತ ಬಳಸಿ ಸಹಿ ಸಂಗ್ರಹಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸಚಿವರಿಗೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ 21 ಪ್ರಶ್ನೆಗಳಿರುವ ಪತ್ರಗಳನ್ನು ಬರೆಯುತ್ತಿದ್ದಾರೆ.  `ನಿಮ್ಮ ನಿರ್ಧಾರ ಕೇಂದ್ರದ ಪರವಾಗಿದ್ದೀಯೇ? […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜ. 20ಕ್ಕೆ ಮುಂದೂಡಿದ ಹೈಕೋರ್ಟ್

ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಜನೆವರಿ 20ಕ್ಕೆ ಮುಂದೂಡಿದೆ. ಧಾರವಾಡ ಜಿಲ್ಲೆಯ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಈ ಹಿಂದೆ ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ವಿಶೇಷ ಸಿಬಿಐ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ವಾದ ಪ್ರತಿವಾದ ಆಲಿಸಿದ ಬಳಿಕ ಅವರ ಜಾಮೀನು ಅರ್ಜಿಯನ್ನು […]

ಅಪರಾಧ

ದಾವಣಗೆರೆಯಲ್ಲಿ 2 ತಲೆಯ ಹಾವು ಮಾರಲು ಯತ್ನಿಸಿದ ಕಿರಾತಕರು ಅಂದರ್​…..!

ದಾವಣಗೆರೆ prajakiran.com :ಬೆಣ್ಣೆನಗರಿ ದಾವಣಗೆರೆಯಲ್ಲಿ 2 ತಲೆಯ ಹಾವುಗಳನ್ನು ಮಾರಲು ಯತ್ನಿಸಿದ ಕಿರಾತಕರು ಅಂದರ್​ ಆದ ಘಟನೆ ನಡೆದಿದೆ. ನಗರದ ವಿಶ್ವೇಶ್ವರಯ್ಯ ಪಾರ್ಕ್‌ ಬಳಿ ಆರೋಪಿಗಳ ಬಂಧನ ಮಾಡಲಾಗಿದ್ದು, ಬಂಧಿತರಿಂದ 2 ತಲೆ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ. .ಬಂಧಿತರನ್ನು ಚಿತ್ರದುರ್ಗದ ಗಣೇಶ್(28), ಚನ್ನಗಿರಿಯ ಅಭಿಲಾಷ್‌(21), ಶಿವಮೊಗ್ಗದ ನಾಗರಾಜ್‌(34), ಬಳ್ಳಾರಿಯ ಮುತ್ತಪ್ಪ(27) ಹಾಗೂ ಗಾಣದಕಟ್ಟೆಯ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ತಲೆಯ 3 ಹಾವುಗಳನ್ನು ಜಪ್ತಿ ಮಾಡಲಾಗಿದೆ. ಈ ಕಿರಾತಕರು ಲಕ್ಷಾಂತರ ರೂಪಾಯಿಗೆ 2 ತಲೆ ಹಾವು […]

ರಾಜ್ಯ

ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಪವನಕುಮಾರ್ ಮಲಪಾಟಿ ಅಧಿಕಾರ ಸ್ವೀಕಾರ

ಬಳ್ಳಾರಿ prajakiran.com : ಗಣಿನಾಡು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಪವನಕುಮಾರ ಮಲಪಾಟಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ನೂತನ ಜಿಲ್ಲಾಧಿಕಾರಿ ಪವನಕುಮಾರ ಮಲಪಾಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪವನಕುಮಾರ ಮಲಪಾಟಿ 2012ನೇ‌ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದು, ಇದುವರೆಗೆ ವಾಣಿಜ್ಯ ತೆರಿಗೆಗಳ(ಜಾರಿ)ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಈ ಹಿಂದೆ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಹೀಗಾಗಿ ನೂತನ ಜಿಲ್ಲಾಧಿಕಾರಿಗೆ ಬಳ್ಳಾರಿ ಜಿಲ್ಲೆಯ ಪರಿಚಯವಿದೆ. […]

ರಾಜ್ಯ

ಜ. 13 ಇಲ್ಲವೇ 14 ರಂದು ಸಂಪುಟ ವಿಸ್ತರಣೆ

ಹುಬ್ಬಳ್ಳಿ prajakiran.com ; ನಿನ್ನೆ ಸಿಎಂ ಬಿಎಸ್ ವೈ ದೆಹಲಿಗೆ ಹೋಗಿ ಬಂದಿದ್ದಾರೆ. ಜ. 13 ಇಲ್ಲವೇ 14 ರಂದು ಸಂಪುಟ ವಿಸ್ತರಣೆ ಆಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದರು. ಅವರು ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 7 ಜನರು ಸಚಿವರು ಅಗಲಿದ್ದಾರೆ. ಸದ್ಯ ರಾಜ್ಯಸರ್ಕಾರದ 7 ಸಚಿಚ ಸ್ಥಾನಗಳು ಖಾಲಿ ಇವೆ. ಹೀಗಾಗಿ ಎಳು ಜನರು ಸಚಿವರಾಗಲಿದ್ದಾರೆ ಎಂದರು. ಸಂಪುಟದಿಂದ ಯಾರನ್ನ ಕೈ ಬಿಡಲಿದ್ದಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ […]