ಅಂತಾರಾಷ್ಟ್ರೀಯ

ಶಿವಗಂಗೆಯ ಬೆಟ್ಟದ ತುತ್ತತುದಿಯಲ್ಲಿ ತೀರ್ಥೋದ್ಬವ……!

ಬೆಂಗಳೂರು prajakiran.com : ಶಿವ-ಗಂಗೆ ನೆಲೆಸಿರುವ ತಪೋಭೂಮಿ, ದಕ್ಷಿಣಯಾನ ಕಳೆದು ಉತ್ತರಾಯಣ ಪ್ರಾರಂಭದ ದಿನ ಸಂಕ್ರಮಣ, ಈ ವಿಶೇಷ ದಿನದಂದು ಬೆಟ್ಟದ ತುತ್ತತುದಿಯ ಬಂಡೆಯಲ್ಲಿ ಬೊಗಸೆ ನೀರು ಪ್ರತ್ಯಕ್ಷವಾಗಿ ಜನರಲ್ಲಿ ಕೊವಿಡ್ ೧೯ ಮಧ್ಯೆಯೂ ವಿಸ್ಮಯದ ರೀತಿಯಲ್ಲಿ ಪವಾಡವನ್ನ ಮೂಡಿಸಿದೆ. 

ಒಂದೆಡೆ ಚಾರಣಿಗರಿಗೆ ಸವಾಲಿನಂತೆ ಅಲಂಕಾರಗೊಂಡಿರುವ ಬೆಟ್ಟ, ವಿದ್ಯುತ್ ದೀಪಗಳ ಸಾಲು. ಭೂಮಿಯಿಂದ ಸರಿಸುಮಾರು ೧೬೦೦ ಅಡಿಗಿಂತ ಎತ್ತರದ ದಕ್ಷಿಣ ಕಾಶಿ ಎಂದೆ ಪ್ರಸಿದ್ಧವಾಗಿರುವ ಪುಣ್ಯಕ್ಷೇತ್ರ ಶಿವಗಂಗೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಈ ಶಿವಗಂಗೆ ಕ್ಷೇತ್ರದಲ್ಲಿ ಇಂದು ಶಿವ ಹಾಗೂ ಗಿರಿಜೆಗೆ ಕಲ್ಯಾಣ ಮಹೋತ್ಸವ ನಡೆದಿದೆ.

ಈ ಕಲ್ಯಾಣ ಮಹೋತ್ಸಕ್ಕೆ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಹಾಗೆ, ಬೆಟ್ಟದ ತುತ್ತತುದಿಯಲ್ಲಿರುವ ಉರಿಕಂಬ ಹಾಗೂ ತೀರ್ಥಕಂಬದ ನಡುವಿನ ಬಂಡೆಯಲ್ಲಿ ಗಂಗೆ ಮಕರ ಸಂಕ್ರಾಂತಿಯಂದು 11.31 ಕ್ಕೆ ನಿಮಿಷಕ್ಕೆ ಮಕರ ಲಗ್ನದಲ್ಲಿ ಉಗಮವಾಗಿ, ನಂತರ ಮಧ್ಯಾಹ್ನ 1 ರಿಂದ 1.30 ರ ಮಕರಲಗ್ನದಲ್ಲಿ, ಬೆಟ್ಟದ ತುತ್ತತುದಿಯಿಂದ ತೆಗೆದುಕೊಂಡು ಬಂದ ಗಂಗೆ ಯಿಂದ ಶಿವಪಾರ್ವತಿಗೆ ಕಲ್ಯಾಣ ವನ್ನ ಧಾರ್ಮಿಕ ವಿಧಿ ವಿಧಾನಗಳಿಂದ ನಡೆಸಲಾಯಿತು ಎಂದು ಪ್ರಧಾನ ಅರ್ಚಕ ಡಾ.ಸೋಮಸುಂದರ್ ದೀಕ್ಷಿತ್ ತಿಳಿಸಿದರು.

ಇನ್ನೂ ಬೆಟ್ಟದ ತುತ್ತತುದಿಯಲ್ಲಿರುವ ಉರಿಕಂಬ ಹಾಗೂ ತೀರ್ಥಕಂಬದ ನಡುವಿನ ಬಂಡೆಯಲ್ಲಿ ಗಂಗೆ ಕೈಯಲ್ಲಿ ಬೊಗಸೆಯಾಗಿ ಉದ್ಬವವಾಗಿದ್ದು ಜನರಲ್ಲಿ ಸಂತಸ ಹಾಗೂ ಪವಾಡವನ್ನ ಸೃಷ್ಟಿಮಾಡಿದೆ.

ಈ ಬಾರಿ ಬೆಟ್ಟದ ತುತ್ತತುದಿಯಲ್ಲಿ ಹೇರಳವಾಗಿ ಗಂಗೆಯ ಉಗಮದಿಂದ ರಾಜ್ಯದಲ್ಲಿ ಉತ್ತಮ ಮಳೆಬೆಳೆಯಾಗಿ ಸಮೃದ್ಧಿಯಾಗಲಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಕೋವಿಡ್ ೧೯ ಕೋರೋನ ಎಚ್ಚರಿಕೆ ಮಧ್ಯೆ, ತಾಲೂಕು ಆಡಳಿತ ಹಾಗೂ ಮುಜರಾಯಿ ಇಲಾಖೆಯಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಟ್ಟದಲ್ಲಿ ಸಿಸಿ ಕ್ಯಾಮಾರ ಅಳವಡಿಸಿದ್ದಾರೆ.

ಇನ್ನೂ ಸೀಮಿತ ಭಕ್ತರು ಗಿರಿಜಾ ಕಲ್ಯಾಣ ಮಹೋತ್ಸವವನ್ನು ನೋಡಿ ಪುನೀತರಾದರು.
ಒಟ್ಟಾರೆ ದಕ್ಷಿಣ ಕಾಶಿಯಾಗಿ ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಶಿವಗಂಗೆ, ಸಂಕ್ರಮಣದ ದಿನವಾದ ಇಂದು ಮತ್ತೊಂದು ವಿಸ್ಮಯಕ್ಕೆ ಕಾರಣವಾಗಿದೆ.

ಇನ್ನೂ ಈ ರೋಮಾಂಚನ ಕ್ಷಣವಾದ ಬೆಟ್ಟದ ತುತ್ತ ತುದಿಯಲ್ಲಿ ತೀಥೋದ್ಬವ ಹಾಗೂ ಗಿರಿಜೆ-ಗಿರಿಜೇಶನ ವಿವಾಹ ನೋಡಿ ಅಸಂಖ್ಯಾತ ಭಕ್ತರು ಭಕ್ತಿಪರಾಕಷ್ಟೆ ಹೊಂದಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *