ಧಾರವಾಡ prajakiran.com : ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ಶನಿವಾರ ಸಂಜೆ ನಡೆದಿದೆ.
ಧಾರವಾಡದ ಹೊಸಯಲ್ಲಾಪುರ ಪ್ರದೇಶದಲ್ಲಿನ ಸುಣ್ಣದ ಭಟ್ಟಿ ಬಳಿ ರ್ದುಘಟನೆ ಸಂಭವಿಸಿದೆ.
ಕಾಯಿಪಲ್ಯೆ ವ್ಯಾಪಾರ ಮಾಡುತ್ತಿದ್ದ ಹಳಿಯಾಳ ಮೂಲದ ಯಲ್ಲವ್ವ ಶಿವಪ್ಪ ದೊಡ್ಡಮನಿ (೪೮) ಎಂಬುವರೇ ಮೃತಪಟ್ಟ ಮಹಿಳೆ ಎಂದು ಗೊತ್ತಾಗಿದೆ.
ಬೈಕ್ ಸವಾರ ಜಮೀರ ಮಗದುಮಸಾಬ ಹಂಗರಕಿ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದುಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂದೆ ಕುಳಿತಿದ್ದ ಮಹಿಳೆ ಯಲ್ಲವ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಬೈಕ್ ಸವಾರ ಜಮೀರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಕುರಿತು ಧಾರವಾಡ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.