ಧಾರವಾಡ : ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಡಯಾಲಿಸಿಸ್ ಮಾಡಿಸಿಕೊಳ್ಳಲು ಆತನ ಕುಟುಂಬದ ಸದಸ್ಯರೊಂದಿಗೆ ಆ. 28 ರಂದು ಧಾರವಾಡದ ಆಸ್ಪತ್ರೆ ಗೆ ದಾಖಲು ಆಗಿದ್ದ.
ಅದೇ ದಿನ ವೈದ್ಯರು ಕೋವಿಡ್ ಟೆಸ್ಟ್ ಮಾಡಿದ್ದು ಆ. 29 ರಂದು ಕೋವಿಡ್ ಸೋಂಕು ಪಾಸಿಟಿವ್ ಬಂದ ಕಾರಣ ಆಸ್ಪತ್ರೆಯ ಪ್ರತ್ಯೇಕ ಕೋವಿಡ್ ಕೇಂದ್ರ ದಲ್ಲಿ ದಾಖಲು ಮಾಡಿದ್ದರು.
ಈ ಹಿನ್ನಲೆಯಲ್ಲಿ ತನಗೆ ಕೋವಿಡ್ ಇದೆ ಎಂಬ ಕಾರಣಕ್ಕೆ ಜೀವನದಲ್ಲಿ ಮತ್ತಷ್ಟು ಜಿಗುಪ್ಸೆಗೊಂಡು ಆಸ್ಪತ್ರೆಯ 6 ನೇಯ ಮಹಡಿಯಿಂದ ಆ. 30 ರಂದು ಬೆಳಗ್ಗೆ 6.45 ಕ್ಕೆ ಮೇಲಿನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಮೃತ ಕೋವಿಡ್ ಸೋಂಕಿತನನ್ನು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಗ್ರಾಮವೊಂದರ ವ್ಯಕ್ತಿಯೊಂದು ಗುರುತಿಸಲಾಗಿದೆ ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ.