ರಾಜ್ಯ

ಪಿಎಸ್‌ಐ ಪರೀಕ್ಷೆಯಲ್ಲಿ ಗದಗ ರೈತನ ಮಗಳ ಸಾಧನೆ

ಮಂಜುನಾಥ ಎಸ್. ರಾಠೋಡ

ಗದಗ prajakiran.com : ಬಡತನದ ನಡುವೆಯೂ ಗದಗ ಜಿಲ್ಲೆಯ ಕುಗ್ರಾದ ಯುವತಿ ಸಹನಾ ಪಾಟೀಲ ಪಿ ಎಸ್ ಐ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ನಾಡಿನ ಗಮನ ಸೆಳೇದಿದ್ದಾರೆ.

ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಸಹನಾ ಫಕೀರಗೌಡ ಪಾಟೀಲ ಸತತ ಪರಿಶ್ರಮದಿಂದ ಓದಿ, ಪಿಎಸ್ ನೇಮಕಾತಿ ಫಲಿತಾಂಶದ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ೨೬ನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಸಹನಾ ಸಾಕ್ಷಿಯಾಗಿದ್ದು, ಹಳ್ಳಿ ಹೆಣ್ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ.

 ಸರ್ಕಾರಿ ಶಾಲೆಯ ಓದು:

ತೆಗ್ಗಿನಭಾವನೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಾಚೇನಹಳ್ಳಿ ಸರ್ಕಾರಿ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ, ಶಿರಹಟ್ಟಿಯ ಡಬಾಲಿ ಕಾಲೇಜ್ನಲ್ಲಿ ಪಿಯುಸಿ, ಶಿರಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಪದವಿ ಶಿಕ್ಷಣ ಮುಗಿಸಿ, ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಪಾಲಕರ ಪ್ರೋತ್ಸಾಹ ಸಾಧನೆ ರಹದಾರಿ:

ಚಿಕ್ಕನಿಂದಲೂ ಓದಿನಲ್ಲಿ ಚುರುಕಿದ್ದ ಸಹನಾಳಿಗೆ ಕಿತ್ತು ತಿನ್ನುವ ಬಡತನ ಇದ್ದರೂ ಪ್ರತಿಭಾನ್ವಿತ ಮಗಳು ತಮ್ಮಂತಯೇ ಹೊಲದಲ್ಲಿ ಕೆಲಸ ಮಾಡಬಾರದು.

ನಮ್ಮ ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂದು ಪೋಷಕರು ಎಲ್ಲಾ ರೀತಿಯಿಂದ ಸಹಕಾರ ನೀಡಿದ್ದರು. ಕೊನೆಗೂ ಹೆತ್ತವರ ಕನಸನ್ನು ಸಹನಾ ಪಿಎಸ್‌ಐ ಆಗುವ ಮೂಲಕ ಈಡೇರಿಸಿದ್ದಾಳೆ.

ಸಹನಾಳ ಇಬ್ಬರು ಅಕ್ಕಂದಿರು ಹೈಸ್ಕೂಲ್ವರೆಗೆಷ್ಟೇ ಓದಿ ಮದುವೆಯಾಗಿ ಹೋದರು. ಅಣ್ಣಂದಿರು ಕಾಲೇಜ್ ಮೆಟ್ಟಿಲು ಹತ್ತದೇ, ಕೃಷಿಯಲ್ಲಿ ನಿರತರಾದರೂ ಸಹನಾ  ಸತತ ಓದಿನಿಂದ ಯಶಸ್ಸಿನ ಮೆಟ್ಟಿಲು ಹತ್ತಿದ್ದಾಳೆ.

ಎರಡನೇ ಪ್ರಯತ್ನದಲ್ಲಿ ಯಶಸ್ವಿ:

ಉಪನ್ಯಾಸಕಿ ಆಗಬೇಕೆಂಬ ಆಸೆಯಿಂದ ಕೆಲ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ೨೦೧೯ರಲ್ಲಿ ಮೊದಲ ಪ್ರಯತ್ನದಲ್ಲಿ ಆಗಿರದಿದ್ದರೂ ೨೦೨೦ರಲ್ಲಿ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಸಕಲ ಸಿದ್ಧತೆಯೊಂದಿಗೆ ಮತ್ತೆ ಪರೀಕ್ಷೆ ಬರೆದಿದ್ದರು.

ಪರೀಕ್ಷೆಯಲ್ಲಿ ೨೦೦ರಲ್ಲಿ ೧೩೭ ಅಂಕ ಪಡೆದು ಮಹಿಳಾ ಕೋಟಾದಲ್ಲಿ ರಾಜ್ಯಕ್ಕೆ ೨೬ನೇ ಸ್ಥಾನ ಪಡೆದಿದ್ದಾಳೆ. ಕೆ-ಸೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ಅವರು,  ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದು, ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಒಟ್ಟಾರೆ, ಸಹನಾ ಸಾಧನೆ ಗ್ರಾಮವೇ ಹುಬ್ಬೇರುವಂತೆ ಮಾಡಿದ್ದು, ಸಾಧನೆಗೆ ಬಡತನ, ಗ್ರಾಮೀಣ ಪ್ರದೇಶ ಯಾವುದೂ ಅಡ್ಡಿಯಾಗದು ಎಂದು ಸಾಧಿಸಿ ತೋರಿಸಿದ್ದಾಳೆ.

” ನನ್ನ ಸಾಧನೆಗೆ ಅಣ್ಣ ಹಾಗೂ ಕುಟುಂಬದವರ ತ್ಯಾಗ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನ ಕಾರಣ.  ನನ್ನನ್ನು ಅವರು ಕಷ್ಟದಲ್ಲಿ ಓದಿಸಿದ್ದಾರೆ.

ನಾನು ಮೊದಲ ಪ್ರಯತ್ನದಲ್ಲೇ ಪಿಎಸ್‌ಐ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೆ. ಆದರೆ, ಎರಡನೇ ಪ್ರಯತ್ನದಲ್ಲಿ ಸಫಲವಾಗಿರುವುದು ಖುಷಿ ನೀಡಿದೆ. ಐಎಎಸ್ ಮಾಡುವ ಗುರಿಯನ್ನು ಹೊಂದಿದ್ದೇನೆ.” ಸಹನಾ ಪಾಟೀಲ, ಸಾಧಕಿ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *