ಅಪರಾಧ

ಧಾರವಾಡದಲ್ಲಿ ಸಾಲಭಾದೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಧಾರವಾಡ prajakiran.com : ಸಾಲಭಾದೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ ರಾಯಪ್ಪ ರಾಮಪ್ಪ ಹೂಗಾರ (27) ತನ್ನ ತಂದೆ ನರೇಂದ್ರ  ಸಿಂಡಿಕೇಟ ಬ್ಯಾಂಕ್ ದಲ್ಲಿ  ಮನೆ ಸಾಲ  ಹಾಗೂ ಬೆಳೆ ಸಾಲ ಮಾಡಿದ್ದ. ಹೀಗಾಗಿ ಎಂಟು ಲಕ್ಷ ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ದಿಕೊಂಡು, ತನ್ನ ದನದ ಮನೆಯಲ್ಲಿ ನೂಲಿನ ಹಗ್ಗದಿಂದ ಎಳೆಗೆ ಉರುಲು ಹಾಕಿಕೊಂಡು ಸತ್ತಿದ್ದಾನೆ ಎಂದು ಮೃತನ ತಾಯಿ ಈ ಕುರಿತು ಗರಗ […]

ರಾಜ್ಯ

ಪಿಎಸ್‌ಐ ಪರೀಕ್ಷೆಯಲ್ಲಿ ಗದಗ ರೈತನ ಮಗಳ ಸಾಧನೆ

ಮಂಜುನಾಥ ಎಸ್. ರಾಠೋಡ ಗದಗ prajakiran.com : ಬಡತನದ ನಡುವೆಯೂ ಗದಗ ಜಿಲ್ಲೆಯ ಕುಗ್ರಾದ ಯುವತಿ ಸಹನಾ ಪಾಟೀಲ ಪಿ ಎಸ್ ಐ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ನಾಡಿನ ಗಮನ ಸೆಳೇದಿದ್ದಾರೆ. ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಸಹನಾ ಫಕೀರಗೌಡ ಪಾಟೀಲ ಸತತ ಪರಿಶ್ರಮದಿಂದ ಓದಿ, ಪಿಎಸ್‌ಐ ನೇಮಕಾತಿ ಫಲಿತಾಂಶದ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ೨೬ನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವಿದ್ದರೆ ಏನನ್ನು […]

ರಾಜ್ಯ

ಧಾರವಾಡದ ಎಂಜಿನಿಯರ್ ಈಗ ಪ್ರಗತಿಪರ ರೈತ

ಧಾರವಾಡ prajakiran.com : ಅವರು ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಆದ್ರೆ ಸಾಫ್ಟವೇರ್ ಕಡೆಗೆ ಒಲವು ತೋರಿಸಿ ನಂತರ ಸಾಫ್ಟವೇರ್ ಎಂಜಿನಿಯರ್ ಆದ್ರು. ಅಂದುಕೊಂಡಂತೆ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ರು. ಅದಾದ ನಂತರ ಯುಎಸ್ಎ ಹಾಗೂ ಲಂಡನ್ ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ರು. ತಿಂಗಳಿಗೆ 3.50 ಲಕ್ಷ ವೇತನ ಕೂಡ ಇತ್ತು. ಆದ್ರೆ ಅದೆಲ್ಲವನ್ನು ಬಿಟ್ಟು ಮಾತೃಭೂಮಿಯಲ್ಲೇ ಅದರಲ್ಲೂ ಕೃಷಿಯಲ್ಲೇ ಏನನ್ನಾದರೂ ಸಾಧನೆ ಮಾಡಬೇಕು ಎಂದು ಉದ್ಯೋಗ, ಹುದ್ದೆ ಎಲ್ಲವನ್ನೂ ಬಿಟ್ಟು ಮರಳಿ ಧಾರವಾಡಕ್ಕೆ […]

ಜಿಲ್ಲೆ

ಧಾರವಾಡ ಬೆಳಹಾನಿ ವೀಕ್ಷಣೆಗೆ ಅಧಿಕಾರಿಗಳ ಬರ …!

ಧಾರವಾಡ prajakiran.com : ಮುಂಗಾರು ಹಂಗಾಮಿನ ಬೆಳೆಹಾನಿ ಹಾಗೂ ಮಳೆಯಿಂದ ಆದ ಬೆಳೆ ಹಾನಿ ವೀಕ್ಷಣೆಗೆ ಅಧಿಕಾರಿಗಳೇ ಬರುತ್ತಿಲ್ಲ ಎಂದು ಆರೋಪಿಸಿ ರೈತರೇ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ಗಮನ ಸೆಳೇದರು. ಈ ಕುರಿತು ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ರೈತರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಸಲ್ಲಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಆಗಮಿಸಿದ ಮಿಶ್ರಿಕೋಟಿ, ಉಗ್ನಿಕೇರಿ, ಚಳಮಟ್ಟಿ, ಕಾಮಧೇನು, ಕಾಡನಕೊಪ್ಪ ಹಾಗೂ ಹಾರೂಗೇರಿ ಗ್ರಾಮಗಳ ಗ್ರಾಮಸ್ಥರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬಿನ ಬೆಳೆಗೆ […]

ರಾಜ್ಯ

ಕೊನೆಗೂ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ

ತೇಲಿಹೋದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ  ಪರಿಹಾರ ಧಾರವಾಡ prajakiran.com : ತುಪ್ಪರಿಹಳ್ಳದ ಪ್ರವಾಹದಲ್ಲಿ ತೇಲಿಹೋದ ಹಾರೋಬೆಳವಡಿಯ ರೈತ ಮಡಿವಾಳಪ್ಪ ಜಕ್ಕಣ್ಣವರ ಅವರ ತಂದೆ ನಾಗಪ್ಪ ಅವರಿಗೆ 5 ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು ಭಾನುವಾರ ಧಾರವಾಡ ಜಿಲ್ಲಾಡಳಿತ ಕೊನೆಗೂ ಹಸ್ತಾಂತರಿಸಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದೆ. ತುಪರಿಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ, ಹಿರಿಯ ಜೀವಗಳ ಕಣ್ಣೀರು ಒರೆಸದ ಜಿಲ್ಲಾಡಳಿತ ಎಂದು ಈ ಕುರಿತು ಪ್ರಜಾಕಿರಣ.ಕಾಮ್ ಸಮಗ್ರ ವರದಿ ಪ್ರಕಟಿಸಿತ್ತು. […]