ರಾಜ್ಯ

ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು 7 ನೇ ದಿನವೂ ಬಸವರಾಜ ಕೊರವರ ಆಮರಣ ಉಪವಾಸ

10 ಜನ ನೌಕರರಿಂದ ಸರದಿ ಉಪವಾಸ

ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ 358 ಬಡ ಮಕ್ಕಳ ಬದುಕು ಬೀದಿಗೆ ತಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರ ನಡೆ ಖಂಡಿಸಿ
ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು 7 ನೇ ದಿನವೂ ಬಸವರಾಜ ಕೊರವರ ಆಮರಣ ಉಪವಾಸ ಸತ್ಯಾಗ್ರಹ ಮುಂದುವರೆಯಿತು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ಆಮರಣ ಉಪವಾಸ ಸತ್ಯಾಗ್ರಹವನ್ನು 358 ನೌಕರರ ಮರು ನೇಮಕ ಆಗುವರೆಗೆ ಕೈ ಬಿಡುವ ಪ್ರಶ್ನೆಯೇ ಇಲ್ಲ.

ಆರು ದಿನಗಳ ಆಮರಣ ಉಪವಾಸದ ಬಳಿಕ 210 ಜನರಿಗೆ ಮೂರು ತಿಂಗಳ ಸಂಬಳ ಬಿಡುಗಡೆ ಆಗಿದೆ. ಇನ್ನೂ 141 ಜನರ ಸಂಬಳ ಈವರೆಗೆ ಬಿಡುಗಡೆ ಮಾಡಿಲ್ಲ.

ಜೊತೆಗೆ ಇನ್ನುಳಿದ 4 ತಿಂಗಳಕ್ಕೆ ಅನುದಾನ ಇಲ್ಲ ಎಂದು ಅಧಿಕಾರಿಗಳು ಕೈ ಚೆಲ್ಲಿದ್ದಾರೆ. ಹೀಗಾಗಿ ತಕ್ಷಣ ಮರುನೇಮಕ ಹಾಗೂ ಎಲ್ಲಾ ನೌಕರರಿಗೆ ಸಂಬಳ ಬಿಡುಗಡೆ ಆಗುವರೆಗೆ ಆಮರಣ ಉಪವಾಸ ಕೈ ಬಿಡುವ ಪ್ರಶ್ನೇಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜನಜಾಗೃತಿ ಸಂಘದ ಉಪಾಧ್ಯಕ್ಷ
ನಾಗರಾಜ ಕಿರಣಗಿ ಮಾತನಾಡಿ,
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ನೌಕರರ ಒತ್ತಾಸೆ ಮೇರೆಗೆ ಹಾಗೂ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ಆಮರಣ ಉಪವಾಸ ಮುಂದುವರೆಸುವ ಜೊತೆಗೆ ನಾಳೆ ಸೋಮವಾರ ಫೆ. 6ರಂದು ಖಾಲಿ ಕೊಡದೊಂದಿಗೆ ಜನಾಂದೋಲನ ನಡೆಸಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಜನತೆ ಹಾಗೂ ಅವಳಿನಗರದ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಭಾನುವಾರದ ಸರದಿ ಉಪವಾಸದಲ್ಲಿ ಸಂಜಯ ಪ್ಯಾಟಿ, ಆನಂದ ಕಾಳಮ್ಮನವರ, ಮಂಜುನಾಥ ಕುಂಬಾರ, ದುಂಡಪ್ಪ ದೇವರ, ಸರೋಜಾ ನಿಂಬಕ್ಕನವರ, ಕುಸಮಾ ಮುಸಿಗೇರಿ, ಪಂಕ್ಷಾಚರಿ ಹನಸಿ, ಅಶೋಕ ದಳವಾಯಿ ಪಾಲ್ಗೊಂಡಿದ್ದಾರೆ.
ಇದೇ ವೇಳೆ ಭಾನುವಾರವೂ ಕೂಡ ಭಜನೆ ಮಾಡಿ ನೀರು ಸರಬರಾಜು ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *