ರಾಜ್ಯ

ಧಾರವಾಡ ಜಿಲ್ಲಾಸ್ಪತ್ರೆ ಐಸಿಯು ವಾರ್ಡ್ ನಿಂದ ಹೊರಬಂದು ಮಹಾನಗರ ಪಾಲಿಕೆ ಎದುರು 7 ನೇ ದಿನವೂ ಬಸವರಾಜ ಕೊರವರ ಆಮರಣ ಉಪವಾಸ ಸತ್ಯಾಗ್ರಹ

ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಮುಂದುವರಿದ ಸರದಿ ಉಪವಾಸ

 

ಕಣ್ಣು ಮುಚ್ಚಿ ಕುಳಿತ ಸರಕಾರಕ್ಕೆ ಭಜನೆ ಮೂಲಕ ಆಕ್ರೋಶ

ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ 358 ಬಡ ಮಕ್ಕಳ ಬದುಕು ಬೀದಿಗೆ ತಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ದುರಾಡಳಿತ ಖಂಡಿಸಿ
ಧಾರವಾಡ ಜಿಲ್ಲಾಸ್ಪತ್ರೆ ಐಸಿಯು ವಾರ್ಡ್ ನಿಂದ ಬಿಡುಗಡೆ ಗೊಂಡು ಮಹಾನಗರ ಪಾಲಿಕೆ ಎದುರು 7ನೇ ದಿನವೂ ಬಸವರಾಜ ಕೊರವರ ಆಮರಣ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಇದೇ ವೇಳೆ ಜನಜಾಗೃತಿ ಸಂಘ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಹೋರಾಟದ ಹಿತದೃಷ್ಟಿಯಿಂದ ವೈದ್ಯರ ಬಳಿ ಮನವಿ ಮಾಡಿ
ಆಮರಣ ಉಪವಾಸ ಮೊಟಕುಗೊಳಿಸಿ ಸರದಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದರು.

ಅವರು ಶನಿವಾರ ಮಧ್ಯಾಹ್ನ ಮಹಾನಗರ ಪಾಲಿಕೆ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈರೇಶ ಅಂಚಟಗೇರಿ ಅವರು ನಿನ್ನೆ ಮಹಾನಗರ ಪಾಲಿಕೆ ಧಾರವಾಡ ಕಚೇರಿಗೆ ಭೇಟಿ ನೀಡಿ ನಮ್ಮ ನೂರಾರು ನೌಕರರ ಪ್ರತಿಭಟನೆಯ ಸ್ಥಳದಿಂದಲೇ ತಮ್ಮ ಕಚೇರಿಗೆ ತೆರಳಿದರೂ ಸೌಜನ್ಯಕ್ಕೂ ನಮ್ಮವರನ್ನು ಮಾತನಾಡಿಸದೆ ತೆರಳಿರುವುದು ಅವರ ಅಧಿಕಾರ ದರ್ಪ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿ ತೋರಿಸುತ್ತದೆ ಎಂದು ಕಿಡಿಕಾರಿದರು.

ಮೇಯರ್ ಅವರೇ ನಿಮ್ಮ ಅವಧಿಯಲ್ಲಿ 358 ಬಡವರ ಮಕ್ಕಳಿಗೆ ಅನ್ಯಾಯ ಆಗಿದೆ ಎಂಬ ಕಪ್ಪು ಚುಕ್ಕೆ ಕೊನೆಯವರೆಗೂ ಶಾಶ್ವತವಾಗಿ ಉಳಿಯಲಿದೆ.

ಹೀಗಾಗಿ ಹಠಮಾರಿ ಧೋರಣೆಯನ್ನು ಕೈಬಿಟ್ಟು, ರಾಜ್ಯದ ಘನ ಸರಕಾರದ ಆದೇಶವನ್ನು ಗಾಳಿಗೆ ತೂರದೆ ಯಥಾವತ್ತಾಗಿ ಪಾಲಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಆಯುಕ್ತರು ಹಾಗೂ ಎಲ್ ಆಂಡ್ ಟಿ ಯವರು ನೌಕರರ ಮರು ನೇಮಕಕ್ಕೆ ತೆಗೆದುಕೊಳ್ಳಲು ಸಿದ್ದರಿದ್ದು, ಅವಳಿನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ಹೊಂದಿದರೂ ಅದಕ್ಕೆ ಅಡ್ಡಗಾಲು ಹಾಕುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇಷ್ಟೆಲ್ಲಾ ಆದರೂ ಜಿಲ್ಲೆಯ ಜನಪ್ರತಿನಿಧಿಗಳು ಜಾಣಕುರುಡು ತೋರಿಸುತ್ತಿದ್ದಾರೆ. ಈವರೆಗೆ ಯಾರೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.

ಈಗಲಾದರೂ ಬಡನೌಕರರ ಪರ ಕಾಳಜಿ ತೋರ ಬೇಕು ಇಲ್ಲದಿದ್ದರೆ ಎಲ್ ಆಂಡ್ ಟಿ ಹಠಾವೋ ಹುಬ್ಬಳ್ಳಿ ಧಾರವಾಡ ಬಚಾವೋ ಆಂದೋಲನಕ್ಕೆ ಕರೆ ನೀಡಬೇಕಾಗುತ್ತದೆ ಎಂದು ನಾಗರಾಜ ಕಿರಣಗಿ ಎಚ್ಚರಿಸಿದರು ‌

ಇದೇ ವೇಳೆ ಮಹಾನಗರ ಪಾಲಿಕೆ ಆಯುಕ್ತ ಗೋಪಾಲ ಕೃಷ್ಣ ನಿನ್ನೆ ನಮ್ಮ ನೀರು ಸರಬರಾಜು ನೌಕರರ ಇಬ್ಬರು ಮುಖಂಡರನ್ನು ತಮ್ಮ ಕಚೇರಿಗೆ ಕರೆದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ
ಕೇವಲ 50 ನೌಕರರ ಮರುನೇಮಕ ಮಾಡಿಕೊಳ್ಳುವ ಅವಕಾಶವಿದೆ ಎಂದು ಹೇಳಿದ್ದಾರೆ.

ಹಾಗಿದ್ದರೆ ಡಿ. 6ರಂದು ಮೌಖಿಕವಾಗಿ 358 ನೌಕರರು ಕೆಲಸಕ್ಕೆ ಬರಬೇಡಿ ಎಂದು ಯಾವ ಪುರುಷಾರ್ಥ ಕ್ಕೆ ಹೇಳಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ‌‌.

ನೀವು ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ರಾಜ್ಯ ಸರ್ಕಾರದ ಆದೇಶವನ್ನು ಕೂಡ ಅರಿತುಕೊಳ್ಳದೆ ಬೇಜವಾಬ್ದಾರಿಯುತ ಕೆಲಸ ಹೇಗೆ ಮಾಡಿದಿರಿ.

ಎಲ್ ಆಂಡ್ ಟಿ ಪೈಪ್ ಲೈನ್ ಸರಬರಾಜು ಮಾಡುವ ಕಂಪನಿ ಅವರಿಗೆ ನೀರು ಸರಬರಾಜು ಮಾಡುವ ಅನುಭವವಿಲ್ಲ.

ಅಲ್ಲದೆ, ಅವರಿಗೆ ಯಾವ ಮಾನದಂಡದ ಆಧಾರದ ಮೇಲೆ ಕೊಡಲಾಗಿದೆ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡಲಾಗಿದೆಯೇ.

ಇದರ ಜೊತೆಗೆ ಜಲಮಂಡಳಿ ವಿರುದ್ದ ಏನಾದರೂ ದೂರುಗಳಿದ್ದವಾ ಎಂಬುದನ್ನು ಬಹಿರಂಗ ಪಡಿಸಿ ಎಂದು ನಾಗರಾಜ ಕಿರಣಗಿ ಒತ್ತಾಯಿಸಿದರು.

ಜಲಮಂಡಳಿ 12 ವರ್ಷಗಳ ಅವಧಿಗೆ 800 ಕೋಟಿ ಪ್ರಸ್ತಾವನೆ ಸಲ್ಲಿಸಿದ ನಂತರವೂ 1200 ಕೋಟಿ ಗೆ ಅಂದ್ರೆ ನಾಲ್ಕು ನೂರು ಕೋಟಿ ಹೆಚ್ಚಿನ ಅನುದಾನಕ್ಕೆ ಎಲ್ ಆಂಡ್ ಟಿ ಕಂಪನಿಗೆ ಹೇಗೆ ಒಪ್ಪಿಗೆ ಸೂಚಿಸಲಾಗಿದೆ. ಇದರ ಹೊಣೆ ಯಾರ ಹೊರಬೇಕು ಎಂದು ಪ್ರಶ್ನಿಸಿದರು.

ಆದರೂ ಅವರೊಂದಿಗೆ 12 ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿದ್ದು, ಯಾವ ಉದ್ದೇಶಕ್ಕೆ ನುರಿತ ಜಲಮಂಡಳಿಯನ್ನು ನಾಮಕಾವಾಸ್ತೆ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸದನದಲ್ಲಿ ವಿಷಯವನ್ನು ಪ್ರಸ್ತಾಪಿಸಿ
ಎಲ್ ಆಂಡ್ ಟಿ ಕಂಪನಿಯನ್ನು
ಕಪ್ಪು ಪಟ್ಟಿಗೆ ಸೇರಿಸಿ, ಜಲಮಂಡಳಿ ಮುಂದುವರೆಸಿ
ಎಂದು ಹೇಳಿದ ಬಳಿಕವೂ ಈವರೆಗೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇವರು ಇಪ್ಪತ್ತು ವರ್ಷಗಳ ಕಾಲ ಅನುಭವ ಹೊಂದಿದ 358 ನೌಕರರನ್ನು ಹೊರಗಿಟ್ಟಿದ್ದರ ಹಿಂದೆ ನೌಕರರ ಸಂಖ್ಯೆ ಕಡಿಮೆಗೊಳಿಸುವ ಹುನ್ನಾರವೆನಾದರೂ ಅಡಗಿದೆಯಾ ಎಂಬ ಪ್ರಶ್ನೆ ನಮಗೆ ಈಗ ಕಾಡುತ್ತಿದೆ ಎಂದರು.

ಇದಲ್ಲದೇ ಎಲ್ ಆಂಡ್ ಟಿ ಕಂಪನಿಯ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ದಾಖಲೆಯನ್ನು ಸಂಪೂರ್ಣವಾಗಿ ಇವರೆಗೆ ಹೊರಗೆ ಬಂದಿಲ್ಲ. ಹಾಗೂ ಮಹಾನಗರ ಪಾಲಿಕೆ ಬ್ರಹ್ಮಾಂಡ ಭ್ರಷ್ಟಾಚಾರ ವಿರುದ್ಧ ಬಹಿರಂಗ ಸಮರ ಸಾರಬೇಕಾಗುತ್ತದೆ. ಎಲ್ಲೆಲ್ಲಿ ಏನೇನು, ಯಾರು ಯಾವ ರೀತಿಯ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ಶೀಘ್ರವಾಗಿ ದಾಖಲೆ ಸಮೇತ ನಿಮ್ಮ ಮುಂದೆ ಬರುತ್ತೇವೆ ಎಂದು ಗುಡುಗಿದರು.

ಆರು ದಿನಗಳ ಆಮರಣ ಉಪವಾಸ ಸತ್ಯಾಗ್ರಹ ಬಳಿಕ
ಒಟ್ಟು 340 ನೌಕರ ಪೈಕಿ
237 ನೀರು ಸರಬರಾಜು ನೌಕರರ ಮೂರು ತಿಂಗಳ
ಸಂಬಳವನ್ನು ಮಾತ್ರ
ಎಲ್ ಆಂಡ್ ಕಂಪನಿ ಬಿಡುಗಡೆ ಮಾಡಿದೆ.

ಇನ್ನುಳಿದವರ ಸಂಬಳ ಕೂಡ ಬಿಡುಗಡೆ ಮಾಡಲಾಗುವುದು. ಅನುದಾನದ ಕೊರತೆ ಹಿನ್ನೆಲೆಯಲ್ಲಿ
ಉಳಿದ ನಾಲ್ಕು ತಿಂಗಳ ಸಂಬಳ ನಂತರ ಬಿಡುಗಡೆ ಮಾಡಲಾಗುವುದು ಎಂದು
ಕೆ ಯು ಡಿ ಐ ಎಫ್ ಸಿ ಅಧಿಕಾರಿ ಕರಿಯಪ್ಪ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *