ರಾಜ್ಯ

ರಾಜ್ಯದಲ್ಲಿ ಸೋಮವಾರವೂ ಕರೋನಾ ಮಹಾಸ್ಪೋಟ : 30 ಸಾವು, 1843 ಪ್ರಕರಣ ಪತ್ತೆ





ಬೆಂಗಳೂರು prajakiran.com : ರಾಜ್ಯದಲ್ಲಿ ಸೋಮವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 30   ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 1843   ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ       25ಸಾವಿರ ಗಡಿ ದಾಟಿ 25317ಕ್ಕೆ ಏರಿಕೆಯಾಗಿದೆ.



 ಇಂದು ರಾಜ್ಯದಲ್ಲಿ  680 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  10527   ಜನ ಗುಣಮುಖರಾಗಿದ್ದು,    14385   ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  279   ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಸೋಮವಾರವೂ  30  ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ   401ಕ್ಕೆ ಏರಿಕೆಯಾದಂತಾಗಿದೆ.

ಸೋಮವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಬೆಂಗಳೂರಿನಲ್ಲಿ ನಿನ್ನೇ  1235 ಜನ ಸೋಂಕಿತರಿದ್ದರೆ ಇಂದು ಬರೋಬ್ಬರಿ  981 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.



 ಇನ್ನೂಳಿದಂತೆ ಬಳ್ಳಾರಿ 99, ಉತ್ತರಕನ್ನಡ 81, ಬೆಂಗಳೂರು ಗ್ರಾಮಾಂತರ 68, ಧಾರವಾಡ 56, ಕಲಬುರಗಿ 53, ಹಾಸನ 49, ಮೈಸೂರು 45, ಬೀದರ 44, ಉಡುಪಿ 40, ಮಂಡ್ಯ 39, ವಿಜಯಪುರ 36, ಯಾದಗಿರಿ 35, ದಕ್ಷಿಣ ಕನ್ನಡ 34, ಬಾಗಲಕೋಟೆ 33, ತುಮಕೂರು 31, ಶಿವಮೊಗ್ಗ 24, ಗದಗ 18, ಚಾಮರಾಜನಗರ 12, ರಾಮನಗರ 11, ಕೋಲಾರ 10, ಹಾವೇರಿ ಹಾಗೂ ಕೊಪ್ಪಳ 9, ಚಿಕ್ಕಬಳ್ಳಾಪುರ 7, ರಾಯಚೂರು ಹಾಗೂ ಚಿತ್ರದುರ್ಗ ತಲಾ 6, ದಾವಣಗೆರೆ 3, ಚಿಕ್ಕಮಗಳೂರು ಹಾಗೂ ಕೊಡಗು ತಲಾ 2  ಹೀಗೆ ಒಟ್ಟು 29 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ  ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಸೋಮವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ  10 ಜನ ಸಾವನ್ನಪ್ಪಿದ್ದರೆ, ಬೀದರ 8, ಮೈಸೂರು 3,   ದಕ್ಷಿಣ ಕನ್ನಡ 2, ದಾವಣಗೆರೆ,  ತುಮಕೂರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಹಾಸನ, ಕೊಡಗು, ಬಳ್ಳಾರಿ, ಜಿಲ್ಲೆಯಲ್ಲಿ ತಲಾಒಬ್ಬರು ಸಾವನ್ನಪ್ಪಿದ್ದಾರೆ.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *