ರಾಜ್ಯ

ಮೃತ ವ್ಯಕ್ತಿಗೆ ಕೊರೊನಾ ಪಾಸಿಟಿವ್ : ಅಂತ್ಯಕ್ರಿಯೆಯಲ್ಲಿ ಭಾಗಿಯಾದವರಲ್ಲಿ ಆತಂಕ

ಕೊಡಗು prajakiran.com : ಎದೆನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿ ಮೃತಪಟ್ಟಿದ್ದಾರೆ. ವೈದ್ಯರು ಇದು ಹೃದಯಘಾತದಿಂದ ಸಂಭವಿಸಿರುವ ಸಾವು ಎಂದು ದೃಡಪಡಿಸಿದ್ದಾರೆ. ಹೀಗಾಗಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಆದರೂ ಜವಾಬ್ದಾರಿಯುತ ಕುಟುಂಬ ಇರಲಿ ಎಂದು ಸ್ವಾಬ್ ಟೆಸ್ಟ್ ಮಾಡಿಸಿದ ಬಳಿಕ ತಮ್ಮ ಊರಿನಲ್ಲಿ   ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಇದಲ್ಲಾ ನಡೆದು ಐದು ದಿನಗಳ ಬಳಿಕ ಮೃತ ವ್ಯಕ್ತಿಯ ವರದಿ ಪಾಸಿಟಿವ್ ಎಂದು ಬಂದಿದ್ದು,ಇದರಿಂದಾಗಿ ಅಂತ್ಯಕ್ರಿಯೆಯಲ್ಲಿ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶನಿವಾರ ಬರೋಬ್ಬರಿ 6 ಸಾವು 186 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹೊಸದಾಗಿ 186 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1917 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.  ಧಾರವಾಡ ಜಿಲ್ಲೆಯಲ್ಲಿ ಶನಿವಾರ ಬರೋಬ್ಬರಿ 6 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ  58ಕ್ಕೆ ಏರಿದೆ.   ಶನಿವಾರ […]

ರಾಜ್ಯ

ಧಾರವಾಡದ ಕೋವಿಡ್ ಕೇರ್ ಸೆಂಟರುಗಳಿಗೆ ಪುಸ್ತಕ, ಪತ್ರಿಕೆ, ಮನರಂಜನಾ ಚಟುವಟಿಕೆ

*ಪುಸ್ತಕ ದಾನ ನೀಡಲು ಸಾರ್ವಜನಿಕರಿಗೆ ಮನವಿ ಧಾರವಾಡ prajakiran.com :   ಕೋವಿಡ್ ಕೇರ್ ಸೆಂಟರುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷಣ ರಹಿತ ಸೋಂಕಿತರ ಮನೋ ಸ್ಥೈರ್ಯ ಹೆಚ್ಚಿಸಲು ದೂರವಾಣಿ ಮೂಲಕ ಆಪ್ತ ಸಮಾಲೋಚನೆ,ಯೋಗ, ಮನರಂಜನಾ ಚಟುವಟಿಕೆಗಳನ್ನು ಕೈಗೊಳ್ಳುವುದು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಪುಸ್ತಕಗಳನ್ನು ಪೂರೈಸಲು ಕ್ರಮವಹಿಸಲಾಗುವುದು. ಸಾರ್ವಜನಿಕರು ಕೂಡ ಪುಸ್ತಕಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಕಾರ್ಯಪಡೆ ಸಭೆಯ […]

ರಾಜ್ಯ

ಕೋವಿಡ್ ನಿಂದ ಮೃತಪಟ್ಟವರಿಗಾಗಿ ಪ್ರತ್ಯೇಕ ಸ್ಥಳ ನಿಗದಿ ಮಾಡಲು ಇಮ್ರಾನ್ ಕಳ್ಳಿಮನಿ ಒತ್ತಾಯ

ಧಾರವಾಡ prajakiran.com : ಕೋವಿಡ್ 19 ನಿಂದ ಮೃತಪಟ್ಟ ಮುಸ್ಲಿಂ ಸಮಾಜದ ಬಂಧುಗಳಿಗೆ ಧಾರವಾಡದಲ್ಲಿ ಪ್ರತ್ಯೇಕ ಸ್ಥಳ ನಿಗದಿ ಪಡಿಸಿ, ಅದರಲ್ಲಿಯೇ ಅವರ ಅಂತಿವಿಧಿವಿಧಾನ ನೆರವೇರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಹಾಗೂ ಇತ್ತಿಹಾದ್ ಗ್ರೂಪ್ ಸಂಚಾಲಕ ಇಮ್ರಾನ್ ಕಳ್ಳಿಮನಿ, ಹಿರಿಯ ಸದಸ್ಯರಾದ ರಿಯಾಜ್ ಕಿತ್ತೂರ, ವಕೀಲರಾದ ಮೂಸಾ ಖಾನ್ ಪಠಾಣ ಮನವಿ ಮಾಡಿದ್ದಾರೆ. ಅವರು ಶನಿವಾರ ಧಾರವಾಡದ ಅಪರ್ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು. […]

ಅಪರಾಧ

ಶಹಾಪುರದಲ್ಲಿ ಲಾಡ್ಜ್ ಮೇಲೆ ಖಾಕಿ ದಾಳಿ : ಅಕ್ರಮ ಮದ್ಯದ ದಾಸ್ತಾನು ವಶ

ಯಾದಗಿರಿ prajakiran.com  : ಲಾಡ್ಜ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಅಪಾರ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಡೀ ಯಾದಗಿರಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಶಹಾಪುರದ ವೈಷ್ಣವಿ ಲಾಡ್ಜ್ ನಲ್ಲಿ ಮದ್ಯವನ್ನು ಅಕ್ರಮ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಜಾಡು ಹಿಡಿದು ಪೊಲೀಸರು ದಾಳಿ ನಡೆಸಿದ್ದಾರೆ. ರಾಜಾರೋಷವಾಗಿ  ಮದ್ಯದ ವ್ಯಾಪಾರ ನಡೆಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಯಾದಗಿರಿ ಜಿಲ್ಲೆ ಶಹಾಪುರ […]

ರಾಜ್ಯ

ಧಾರವಾಡದ ಮತ್ತೊಬ್ಬ ಹಿರಿಯ ಮಕ್ಕಳ ತಜ್ಞಗೆ ವಕ್ಕರಿಸಿದ ಕರೋನಾ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳಿಗೆ ಬೆಂಬಿಡದೆ ಕಾಡುತ್ತಿರುವುದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಸಿಲುಕಿಸುತ್ತಲೇ ಇದೆ. ಧಾರವಾಡದ ನಾರಾಯಣಪುರದ ಒಬ್ಬ ಮಕ್ಕಳ ತಜ್ಞವೈದ್ಯ ಕರೋನಾ ಸೋಂಕಿನಿಂದ ಗುಣಮುಖರಾದ ಬೆನ್ನಲ್ಲೇ ಮತ್ತೋಬ್ಬ ಮಕ್ಕಳ ತಜ್ಞ ಹಿರಿಯ ವೈದ್ಯರಿಗೂ ಕರೋನಾ ಹರಡಿದೆ. ಮೊದಲಿಗೆ ಅವರ ಪತ್ನಿಗೆ ವಕ್ಕರಿಸಿದ್ದ ಮಹಾಮಾರಿ ಕರೋನಾ ಸೋಂಕು ಅವರಿಂದ ಪತಿ ಹಾಗೂ ಮಕ್ಕಳ ತಜ್ಞರಾಗಿರುವ ಹಿರಿಯ ವೈದ್ಯರಿಗೆ ಬಂದಿದೆ. ಇದರಿಂದಾಗಿ ಅವರ ಕುಟುಂಬ […]

ಜಿಲ್ಲೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ಹುಬ್ಬಳ್ಳಿ ಧಾರವಾಡ ೬೭ ವಾರ್ಡಗಳಲ್ಲಿ ಟಾಸ್ಕ್ ಪೊರ್ಸ್ ಸಮಿತಿ

ಧಾರವಾಡ prajakiran.com : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡುವ, ಸ್ಯಾನಿಟೈಜರ್ ಬಳಕೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಅಗತ್ಯವಿದೆ. ಸ್ವಯಂ ಸೇವಕರಾಗಿ ಪಾಲ್ಗೋಳ್ಳಲು ಸಿದ್ಧರಿರುವವರ ತಂಡ ರಚಿಸಿ, ಜನಜಾಗೃತಿ ಹೆಚ್ಚಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ಅವರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಪಾಡಲು ರಚಿಸಿರುವ ಸಮಿತಿ ಹಾಗೂ ವಿವಿಧ ಸ್ವಯಂ ಸೇವಾ ಸಮಿತಿ, ಸರ್ಕಾರೇತರ ಸಂಸ್ಥೆಗಳ […]

ರಾಜ್ಯ

ಜಾನಮಟ್ಟಿಯಲ್ಲಿ ಮೊದಲ ಕರೋನಾ ಪಾಸಿಟಿವ್ : ಆತಂಕದಲ್ಲಿ ಗ್ರಾಮಸ್ಥರು…!

ಬಾಗಲಕೋಟೆ prajakiran.com :  ಕರೋನಾ ವೈರಸ್ ನಗರ ಸೇರಿದಂತೆ ಹಳ್ಳಿಗಳಿಗೂ ವೇಗವಾಗಿ ವೈರಸ್ ಹಬ್ಬುತ್ತಿದೆ. ಇಷ್ಟು ದಿನಗಳ ವೆರೆಗೆ ಕೇವಲ ನಗರಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವೈರಸ್ ಇದೀಗ ಹಳ್ಳಿಯ ಮೂಲೆಗೂ ತನ್ನ ರೌದ್ರ ಅವತಾರ ತೋರಿಸುತ್ತಿದೆ. ಇದರಿಂದ ಗ್ರಾಮಗಳಲ್ಲೂ ಕರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿಯಲ್ಲಿ ಮೊದಲ ಕರೋನಾ ವೈರಸ್ ಪತ್ತೆಯಾಗಿದೆ. 63 ವರ್ಷದ ಪುರುಷನಲ್ಲಿ ವೈರಸ್ ಪತ್ತೆಯಾಗಿದೆ. ಹೀಗಾಗಿ ಅವರ ಮನೆಯ ಸ್ಥಳದಿಂದ 100 ಮೀಟರ್ ಮುಳ್ಳುಕಂಟಿಗಳಿಂದ ಸೀಲ್ ಡೌನ್ […]

ರಾಜ್ಯ

ರಾಜ್ಯಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರ ಹೋರಾಟ

ಧಾರವಾಡ prajakiran.com : ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದು, ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಹೋರಾಟಕ್ಕೆ  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕರೆನೀಡಿದೆ.  ಕಾರ್ಯಕರ್ತೆಯರಿಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಜನವಿರೋಧಿ ಧೋರಣೆಯ ವಿರುದ್ಧ ರಾಜಿರಹಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕೆಂದು  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮನವಿ ಮಾಡಿದ್ದು, ಇಲಾಖೆಯ ಒತ್ತಡಗಳಿಗೆ ಮಣಿಯದೇ ಮುಂದಿನ ರಾಜಿರಹಿತ ಹೋರಾಟಕ್ಕೆ ಮುನ್ನಡೆಸಲು ನಿರ್ಧರಿಸಿದೆ.   ಜು. ೧೩ರಂದು  ರಾಜ್ಯದ ಎಲ್ಲಾ ಜಿಲ್ಲೆ, […]

ರಾಜ್ಯ

ಧಾರವಾಡ ಜಿಲ್ಲಾಸ್ಪತ್ರೆಯ ಸ್ಟಾಪ್ ನರ್ಸ್ ಸೇರಿ ನಾಲ್ವರು ಕರೋನಾ ಸೇನಾನಿಗಳು ಗುಣಮುಖ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಾದ್ಯಂತ ಕರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿರುವ ಬೆನ್ನಹಿಂದೆಯೇ ಗುಣಮುಖರಾಗುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಕರೋನಾ ಸೋಂಕಿನ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಬಳಲಿ ಬೆಂಡಾಗಿ ಆಸ್ಪತ್ರೆಗೆ ಸೇರಿ ಇದೀಗ ಅದರಿಂದ ಗುಣಮುಖರಾಗಿ ಬಿಡುಗಡೆಗೊಂಡಿರುವುದು ಕರೋನಾ ಸೇನಾನಿಗಳ ಹಾಗೂ ಅವರ ಕುಟುಂಬದ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಧಾರವಾಡದ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್ ಒಬ್ಬರು ಗುಣಮುಖರಾಗಿ ಮನೆಗೆ ಮರಳಿದ ಬೆನ್ನಲ್ಲೇ  […]