ರಾಜ್ಯ

ಧಾರವಾಡದ ಕೋವಿಡ್ ಆಸ್ಪತ್ರೆಗಳ ಎಲ್ಲ ಒಳರೋಗಿಗಳಿಗೆ ಆ್ಯಂಟಿಜನ್ ಪರೀಕ್ಷೆ

ಧಾರವಾಡ prajakiran.com : ಸರ್ಕಾರದಿಂದ ಜಿಲ್ಲೆಗೆ ೩,೩೦೦ ಆ್ಯಂಟಿಜನ್ ಪರೀಕ್ಷಾ ಕಿಟ್‌ಗಳು ಬರುತ್ತಿವೆ. ಕಿಮ್ಸ್, ಎಸ್‌ಡಿಎಂ, ಜಿಲ್ಲಾಸ್ಪತ್ರೆ ಸೇರಿದಂತೆ ಅಗತ್ಯವಿರುವ ಇತರೆ ಆಸ್ಪತ್ರೆಗಳಲ್ಲಿ ದಾಖಲಾಗುವ ಇತರೆ ಸಾಮಾನ್ಯ ಒಳ ರೋಗಿಗಳನ್ನು ಆ್ಯಂಟಿಜನ್ ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗಲಿದೆ. ಈ ಪರೀಕ್ಷೆಯಿಂದ ಕೋವಿಡ್‌ನ ತಪಾಸಣಾ ವರದಿ ತ್ವರಿತವಾಗಿ ಕೆಲವೇ ಗಂಟೆಗಳಲ್ಲಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ನಡೆದ ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೀವ್ರ ನೆಗಡಿ, […]

ರಾಜ್ಯ

ಜುಲೈ 5ರಿಂದ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ 

ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರ ಅಧ್ಯಕ್ಷತೆಯಲ್ಲಿ ಸಚಿವರ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಲ್ಲೂ ಜುಲೈ 5ರಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು. (ವಸ್ತುಗಳ ಸಾಗಾಣಿಕೆಗೆ ನಿರ್ಬಂದವಿಲ್ಲ).   ಜುಲೈ 10ರಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ […]

ಜಿಲ್ಲೆ

ದ್ವಿತೀಯ ಪಿ.ಯು.ಸಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

ಧಾರವಾಡ prajakiran.com : ಕೋವಿಡ್-೧೯ರ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಕರ್ನಾಟಕದ ದ್ವಿತೀಯ ಪಿ.ಯು.ಸಿ ಮತ್ತು  ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉಚಿತ ಬಸ್ ವ್ಯವಸ್ಥೆ ಮಾಡಿದೆ.  ೨೦೧೯-೨೦ನೇ ಸಾಲಿನ ಅಂತಿಮ ಪರೀಕ್ಷೆಗಳು ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜೂನ್ ೧೮ ರಂದು ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜೂನ್ ೨೫ ರಿಂದ ಜುಲೈ ೦೪ ರವರೆಗೆ ನಡೆಯಲಿವೆ. ಪರೀಕ್ಷೆ ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಮತ್ತು ಹಿಂದಿರುಗುವಾಗ ಪರೀಕ್ಷಾ […]

ರಾಜ್ಯ

ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ 19 ಪ್ರಕರಣ ಪತ್ತೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 19 ಪ್ರಕರಣ ಪತ್ತೆಯಾಗಿವೆ. ಸೋಂಕಿತರನ್ನು ಡಿಡಬ್ಲ್ಯೂಡಿ 73-ಪಿ-6251 ನೇ ಸೋಂಕಿತ 34 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಬಂದವರು. ಡಿಡಬ್ಲ್ಯೂಡಿ 74-ಪಿ-6252 ನೇ ಸೋಂಕಿತ 72 ವರ್ಷದ ಮಹಿಳೆ ವೈರಲ್ ಇನ್ ಪೆಕ್ಷನ್, ಡಿಡಬ್ಲ್ಯೂಡಿ 75-ಪಿ-6253ನೇ ಸೋಂಕಿತ 37 ವರ್ಷದ ಪುರುಷ ಚಿತ್ರದುರ್ಗದಿಂದ ಬಂದ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ. ಡಿಡಬ್ಲ್ಯೂಡಿ 76-ಪಿ-6254 ನೇ ಸೋಂಕಿತ 40 ವರ್ಷದ ಸೋಂಕಿತ ಪುರುಷ ವೈರಲ್ ಇನ್ ಪೆಕ್ಷನ್, […]

ರಾಜ್ಯ

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು : ಚಾರ್ಜ್ ಶೀಟ್ ಸಲ್ಲಿಸದ ಪೊಲೀಸರ ವಿರುದ್ದ ತನಿಖೆಗೆ ಆದೇಶ

ಬೆಳಗಾವಿ prajakiran.com : ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ  ಜಾಮೀನು ಮಂಜೂರು ಆಗಲು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಗೊತ್ತಾಗಿದೆ. ಧಾರವಾಡ ಜಿಲ್ಲಾ ಪೊಲೀಸರು 90ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸದೆ ಇರುವುದು ಆರೋಪಿಗಳಿಗೆ ಜಾಮೀನು ಪಡೆಯಲು ಅನುಕೂಲವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿ ಜಾಕ್ಸನ್ ಡಿಸೋಜಾ ಅವರು ಸಿ ಆರ್ ಪಿಸಿ 167 (2) ಅಡಿ 90 ದಿನಗಳ ಒಳಗೆ […]

ರಾಜ್ಯ

ಗಂಡಾಂತರಿಂದ ಪಾರಾದ ಗಡಿ ಜಿಲ್ಲೆ ಚಾಮರಾಜನಗರ

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ಕರೋನಾ ಸೋಂಕಿನ ಭಯದಲ್ಲಿದ್ದ ಗಡಿ ಜಿಲ್ಲೆ ಚಾಮರಾಜನಗರ ಗಂಡಾಂತರಿಂದ ಪಾರಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ. ಸ್ಪಷ್ಟನೆ ನೀಡಿದ್ದಾರೆ. ಅವರು ಮಂಗಳವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಸುದ್ದಿಗಾರರರಿಗೆ  ಮಾತನಾಡಿ, ಆ ಮೂಲಕ ಗ್ರೀನ್ ವಲಯದಲ್ಲಿ ಮುಂದುವರಿಕೆಯಾಗಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿದ್ದ ಆತಂಕ ದೂರವಾಗಿದೆ ಎಂದರು. ಕರೋನಾ ಸೋಂಕಿತ ವ್ಯಕ್ತಿ ಮಹಾರಾಷ್ಟ್ರದ ಮೂಲದ ಯುವಕನಾಗಿದ್ದಾನೆ. ಸೋಂಕಿತ ವ್ಯಕ್ತಿ  ಚಾಮರಾಜನಗರ ಜಿಲ್ಲೆಯವನಲ್ಲ. ಸೋದರ  ಮಾವನ ಮನೆಗೆ ಆಗಮಿಸಿದ್ದ ಸೋಂಕಿತನಾಗಿದ್ದಾನೆ ಎಂದರು. ಚಾಮರಾಜನಗರ ಜಿಲ್ಲೆ ಹನೂರು […]

ರಾಜ್ಯ

ಹಿರಿಯ ಪೊಲೀಸ್ ಅಧಿಕಾರಿ ಜಿನೇಂದ್ರ ಖಣಗಾವಿ ವಿಚಾರಣೆ ನಡೆಸಿದ ಸಿಬಿಐ

ಬೆಂಗಳೂರು prajakiran.com :  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರವೂ ಹಿರಿಯ ಪೊಲೀಸ್ ಅಧಿಕಾರಿಯ ವಿಚಾರಣೆ ನಡೆಸಿದರು. ಅಂದು ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದ ಹಾಗೂ ಸದ್ಯ ರಾಮನಗರ ಪೊಲೀಸ್ ತರಬೇತಿ ಶಾಲೆ ಮುಖ್ಯಸ್ಥರಾಗಿರುವ ಜಿನೇಂದ್ರ ಖಣಗಾವಿಅವರನ್ನು ವಿಚಾರಣೆ ನಡೆಸಿದರು. ಅವರು ಯೋಗೀಶಗೌಡ ಗೌಡರ ಕೊಲೆಯಾದ ದಿನದಂದು 2016ರ ಜೂನ್ 15ರಂದು   ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಬೆಳಗ್ಗೆಯಿಂದ ತೀವ್ರ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ. […]