ರಾಜ್ಯ

ಜಾನಮಟ್ಟಿಯಲ್ಲಿ ಮೊದಲ ಕರೋನಾ ಪಾಸಿಟಿವ್ : ಆತಂಕದಲ್ಲಿ ಗ್ರಾಮಸ್ಥರು…!





ಬಾಗಲಕೋಟೆ prajakiran.com :  ಕರೋನಾ ವೈರಸ್ ನಗರ ಸೇರಿದಂತೆ ಹಳ್ಳಿಗಳಿಗೂ ವೇಗವಾಗಿ ವೈರಸ್ ಹಬ್ಬುತ್ತಿದೆ.

ಇಷ್ಟು ದಿನಗಳ ವೆರೆಗೆ ಕೇವಲ ನಗರಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವೈರಸ್ ಇದೀಗ ಹಳ್ಳಿಯ ಮೂಲೆಗೂ ತನ್ನ ರೌದ್ರ ಅವತಾರ ತೋರಿಸುತ್ತಿದೆ. ಇದರಿಂದ ಗ್ರಾಮಗಳಲ್ಲೂ ಕರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.





ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿಯಲ್ಲಿ ಮೊದಲ ಕರೋನಾ ವೈರಸ್ ಪತ್ತೆಯಾಗಿದೆ. 63 ವರ್ಷದ ಪುರುಷನಲ್ಲಿ ವೈರಸ್ ಪತ್ತೆಯಾಗಿದೆ.

ಹೀಗಾಗಿ ಅವರ ಮನೆಯ ಸ್ಥಳದಿಂದ 100 ಮೀಟರ್ ಮುಳ್ಳುಕಂಟಿಗಳಿಂದ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ, ಜಾನಮಟ್ಟಿ ಗ್ರಾಮಕ್ಕೂ ಮೊದಲ ವೈರಸ್ ಹಬ್ಬುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.




ಗ್ರಾಮಗಳಿಗೆ ಕರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತವಾಗುತ್ತಿವೆ.

ಅದಕ್ಕಾಗಿ  ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮಾಸ್ಕ್ ಬಳಸುವಂತೆ ಬೀಳಗಿ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *