ರಾಜ್ಯ

ಬ್ರಹ್ಮಾಂಡ ಗುರೂಜಿ ವಿರುದ್ದ ಪ್ರಕರಣ ದಾಖಲು

ಕೊಡಗು prajakiran.com : ಕೊಡಗಿನಲ್ಲಿ ಬರುವ ದಿನಗಳಲ್ಲಿ ಭಾರಿ ಭೂಕಂಪವಾಗುತ್ತದೆ. ಇದರಿಂದಾಗಿ ಇಡೀ ಊರು ನೆಲಸಮವಾಗುತ್ತದೆ ಎಂದು ಭಾರೀ ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರ ವಿರುದ್ದ ಕೊನೆಗೂ ಪ್ರಕರಣ ದಾಖಲಾಗಿದೆ. ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಕೊಡಗು ಬೆಳೆಗಾರರ ಒಕ್ಕೂಟ ಅವರ ವಿರುದ್ದ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು   ಮಾಡಿದ್ದಾರೆ. ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಸೋಮವಾರವಷ್ಟೇ […]

ರಾಜ್ಯ

ಧಾರವಾಡದಲ್ಲಿ ಲಾಕಡೌನ್  ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ 22 ಜನರ ವಿರುದ್ದ ಪ್ರಕರಣ

ಧಾರವಾಡ prajakiran.com :  ಲಾಕಡೌನ್  ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ರಾಜನಗರ ಶಿವಳ್ಳಿ ಪ್ಲಾಟ್ ಮುಕ್ತಾಯ ಹಂತದಲ್ಲಿ ಇರುವ ಹಜರತ ನಿಜಾಮೋದ್ದೀನ್ ಮದರಸಾದಲ್ಲಿ ಲಾಕಡೌನ್ ನಿಯಮ‌ ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್ ಮಾಡಿರುವ ಘಟನೆ ನಡೆದಿದೆ. ಕರೋನಾ ಹಿನ್ನಲೆಯಲ್ಲಿ ದೇಶದ್ಯಾಂತ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನಿರಾಕರಿಸಿ, ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಕಟ್ಟು ನಿಟ್ಟಿನ ಸೂಚನೆ ಇದ್ದರೂ ಸಹ ಜಿಲ್ಲಾಡಳಿತ ಹಾಗೂ […]

ರಾಜ್ಯ

ದೇವಸ್ಥಾನಗಳಿಗೆ ತಟ್ಟಿದ ಲಾಕ್ ಡೌನ್ ಎಫೆಕ್ಟ್  : ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ 6 ಕೋಟಿ  ನಷ್ಟ

ಬೆಳಗಾವಿ prajakiran.com : ಕರೋನಾ ಲಾಕ್ ಡೌನ್ ಎಫೆಕ್ಟ್ ದೇಶದ ಹಾಗೂ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೂ ತಟ್ಟಿದೆ. ಇದರಿಂದಾಗಿ ದೇವಸ್ಥಾನಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿರುವುದು ಬೆಳಕಿಗೆ ಬರುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಕೋಟ್ಯಾಂತರ ಜನರ ಆರಾಧ್ಯ ದೈವವಾಗಿರುವ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆದಾಯಕ್ಕೂ ಪೆಟ್ಟು ಬಿದ್ದಿದೆ. ಆದಿಶಕ್ತಿಯ 64 ಶಕ್ತಿಪೀಠಗಳಲ್ಲಿ ಒಂದಾಗಿರುವ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಮೂರು ತಿಂಗಳಲ್ಲಿಯೇ ಬರೋಬ್ಬರಿ 6 ಕೋಟಿ […]

ರಾಜ್ಯ

ಧಾರವಾಡದಿಂದ ರಾಯಗಡ್ ಗೆ ಮರಳಲು ಆದಿವಾಸಿ ವಲಸೆ ಕಾರ್ಮಿಕರಿಗೆ ವಿಶೇಷ ಬಸ್  

ಧಾರವಾಡ prajakiran.com : ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಪಟ್ಟಣದಲ್ಲಿ ವಿವಿಧ ಕೂಲಿ ಕೆಲಸ ಮಾಡುತ್ತಿದ್ದ  ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯ ವಲಸೆ ಕಾರ್ಮಿಕರು ಲಾರಿ ಮೂಲಕ ಅನಧಿಕೃತವಾಗಿ ಸಂಚರಿಸುತ್ತಿದ್ದಾಗ ಮಂಗಳವಾರ ಬೆಳಿಗ್ಗೆ ಜಿಲ್ಲೆಯ ತೇಗೂರ ಚೆಕ್‌ಪೋಸ್ಟ್ ನಲ್ಲಿ ಅವರನ್ನು ತಡೆದು  ನಗರದ ಕಲ್ಯಾಣ ಮಂಟಪದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಮಹಾರಾಷ್ಟ್ರ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ರಾಯಗಡ ಜಿಲ್ಲಾಧಿಕಾರಿಯೊಂದಿಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ವಲಸೆ ಕಾರ್ಮಿಕರನ್ನು ಮರಳಿ ಅವರ ತವರು ಜಿಲ್ಲೆ ರಾಯಗಡಕ್ಕೆ ಕಳುಹಿಸಲು […]

ರಾಜ್ಯ

ಬೆಳಗ್ಗೆ 100, ಸಂಜೆ ಕೇವಲ 1 ಕರೋನಾ ಕೇಸ್ : ನೆಮ್ಮದಿಯ ನಿಟ್ಟುಸಿರು ಬಿಟ್ಟ ಕರುನಾಡು

ಬೆಂಗಳೂರು prajakiran.com : ಬೆಳಗ್ಗೆ ಬರೋಬ್ಬರಿ 100 ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಬೆಚ್ಚಿಬಿಳಿಸಿದ್ದ ಕರೋನಾ ವೈರಸ್ ಸಂಜೆ ವೇಳೆಗೆ ಒಂದು ಪ್ರಕರಣ ಬೆಳಕಿಗೆ ಬರುವ ಮೂಲಕ ಕರುನಾಡನ್ನು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಸಂಜೆ ವೇಳೆಗೆ ವಿಜಯಪುರ ಜಿಲ್ಲೆಯ ಒಂದು ಪ್ರಕರಣ ಖಚಿತಗೊಂಡಿದೆ. ಆ ಮೂಲಕ ಮಂಗಳವಾರ ವಿಜಯಪುರದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಐವರಿಗೆ ಪತ್ತೆಯಾಗಿತ್ತು. ರಾಜ್ಯದ ಪಾಸಿಟಿವ್ ಕೇಸ್ ಸಂಖ್ಯೆ 101 ಕ್ಕೆ ಏರಿದೆ.   ಕೋಟೆ ನಾಡು ಚಿತ್ರದುರ್ಗದಲ್ಲಿ […]

ರಾಜ್ಯ

ಬಸ್ ಪ್ರಯಾಣ ದರ ಹೆಚ್ಚಳ ಸದ್ಯಕ್ಕೆ ಇಲ್ಲ ಎಂದ ಡಿಸಿಎಂ ಲಕ್ಷ್ಮಣ ಸವದಿ

ಹುಬ್ಬಳ್ಳಿ prajakiran.com : ಕರೋನಾ ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳಿಂದ ಸದ್ಯಕ್ಕೆ ಯಾವುದೇ  ಬಸ್ ಪ್ರಯಾಣ ದರ ಹೆಚ್ಚಳ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವರು ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. ಅವರು ಮಂಗಳವಾರ ಸಂಜೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಹೇಳಿಕೆ ನೀಡಿದರು. ರಾಜ್ಯದಲ್ಲೆಡೆ ಶೀಘ್ರದಲ್ಲಿಯೇ ರಾತ್ರಿ ವೇಳೆ ಬಸ್ ಸಂಚಾರ ಆರಂಭಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಕರ್ನಾಟಕ ರಸ್ತೆ ಸಾರಿಗೆ […]

ರಾಜ್ಯ

ಯೋಗೀಶಗೌಡ ಕೊಲೆ ಪ್ರಕರಣ : ಮತ್ತೇ ಚುರುಕುಗೊಂಡ ಸಿಬಿಐ ಅಧಿಕಾರಿಗಳ ತನಿಖೆ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಮತಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಮತ್ತೇ ತನಿಖೆ ಚುರುಕುಗೊಳಿಸಿದ್ದಾರೆ. 8 ಜನ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದ ಬೆನ್ನಲ್ಲೇ ಮತ್ತೇ ತನಿಖೆ ಮುಂದುವರೆರಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಉದಯ ಜಿಮ್ ನಲ್ಲಿ ಬೆಳ್ಳಂಬೆಳಗ್ಗೆ ಯೋಗೀಶ ಗೌಡ ಗೌಡರ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ದಿನದಂದು ಹುಬ್ಬಳ್ಳಿ-ಧಾರವಾಡ […]

ರಾಜ್ಯ

ಹಾಸನ ಜಿಲ್ಲೆಯಲ್ಲಿ ಮತ್ತೇ 13 ಹೊಸ  ಪ್ರಕರಣ : ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆ

ಹಾಸನ prajakiran.com : ಹಾಸನ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 13 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯ  ಕರೋನಾ ಸೋಂಕಿತರ ಸಂಖ್ಯೆ  112 ಕ್ಕೆ ಏರಿಕೆಯಾಗಿದೆ . ಇಂದು ವರದಿಯಾದ ಎಲ್ಲಾ ‌ಪಾಸಿಟಿವ್ ಪ್ರಕರಣಗಳಿಗೆ ಮಹಾರಾಷ್ಟ್ರ ದಿಂದ  ಆಗಮಿಸಿದ‌ ಹಿನ್ನಲೆ ಇದೆ. ಎಲ್ಲರೂ ಚನ್ನರಾಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ .  ಸೋಂಕು ಪತ್ತೆಯಾದ ಎಲ್ಲರನ್ನೂ ನಗರದ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ದಾಖಲಾಗಿರುವ ಎಲ್ಲರೂ ಆರೋಗ್ಯಯುತವಾಗಿದ್ದು […]

ರಾಜ್ಯ

ತಬ್ಲೀಗ್, ಅಜ್ಮೀರ್ ನಂತರ ಬೆಳಗಾವಿಗೆ ಜಾರ್ಖಂಡ್ ಕಂಟಕ

ಬೆಳಗಾವಿ prajakiran.com : ಮತ್ತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಂಗಳವಾರ 13 ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆ ಮೂಲಕ ಬೆಳಗಾವಿ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 135 ಕ್ಕೇರಿದೆ. ಗಡಿ ಜಿಲ್ಲೆಗೆ ಹೊರ ರಾಜ್ಯದ ನಂಜು ಬಿಟ್ಟುಬಿಡದೆ ಕಾಡುತ್ತಿದೆ. ತಬ್ಲೀಗ್, ಅಜ್ಮೀರ್, ಮುಂಬೈ ಬಳಿಕ ಈಗ ಜಾರ್ಖಂಡ್ ನಂಜು ಆವರಿಸಿದೆ. ಜಾರ್ಖಂಡನಿಂದ ಬೆಳಗಾವಿಗೆ ಬಂದಿದ್ದ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ  ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್ ಇಡಲಾಗಿತ್ತು. […]

ರಾಜ್ಯ

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 100 ಕರೋನಾ ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 100 ಪ್ರಕರಣ ಪತ್ತೆಯಾಗಿವೆ. ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ ಆಗಿದೆ. ಈವರೆಗೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 44 ಜನ ಮಂದಿ ಬಲಿಯಾಗಿದ್ದಾರೆ. ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇವತ್ತು ಒಂದೇ ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 17 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋಟೆ ನಾಡು ಚಿತ್ರದುರ್ಗದಲ್ಲಿ ಇವತ್ತು ಒಂದೇ ದಿನ 20 ಸೋಂಕಿತರು ಪತ್ತೆಯಾಗಿದ್ದಾರೆ. ಇವರೆಲ್ಲರೂ ತಮಿಳುನಾಡಿನಿಂದ ಬಂದವರಾಗಿದ್ದಾರೆ. ಇವರಿಗೆ ನಿಗದಿತ […]