ರಾಜ್ಯ

ಬ್ರಹ್ಮಾಂಡ ಗುರೂಜಿ ವಿರುದ್ದ ಪ್ರಕರಣ ದಾಖಲು

ಕೊಡಗು prajakiran.com : ಕೊಡಗಿನಲ್ಲಿ ಬರುವ ದಿನಗಳಲ್ಲಿ ಭಾರಿ ಭೂಕಂಪವಾಗುತ್ತದೆ. ಇದರಿಂದಾಗಿ ಇಡೀ ಊರು ನೆಲಸಮವಾಗುತ್ತದೆ ಎಂದು ಭಾರೀ ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರ ವಿರುದ್ದ ಕೊನೆಗೂ ಪ್ರಕರಣ ದಾಖಲಾಗಿದೆ.

ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಕೊಡಗು ಬೆಳೆಗಾರರ ಒಕ್ಕೂಟ ಅವರ ವಿರುದ್ದ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು   ಮಾಡಿದ್ದಾರೆ.

ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಸೋಮವಾರವಷ್ಟೇ ಈ ಭವಿಷ್ಯ ನುಡಿದಿದ್ದು, ಈ ಬಾರಿ ಮತ್ತೇ ಕೊಡಗಿಗೆ ವಿಪತ್ತು ಕಾದಿಟ್ಟ ಬುತ್ತಿ. ಇದನ್ನು ನಂಬುವುದಾದರೆ ನಂಬಲಿ ಇಲ್ಲದಿದ್ದರೆ ಬಿಡಲಿ ಎಂದು ಹೇಳಿದ್ದರು.

ವಾಸುಕಿ ಕ್ಷೇತ್ರವಾದ ಸುಬ್ರಮಣ್ಯ ಕ್ಷೇತ್ರದಿಂದ ಕೊಡಗಿನ ಬೆಟ್ಟ ಭಾಗದವರೆಗೆ ಬೆಟ್ಟ ಗುಡ್ಡಗಳು ಕುಸಿಯುತ್ತದೆ ಕೊಡಗಿನಲ್ಲಿ ಯಾವ ಭಾಗ ಎಂದು ಯಾರಿಗೆ ಗೊತ್ತಾಗುತ್ತದೆ. ಭೂಮಿ ಭೂಕಂಪಗಳು ಎಂದರೆ ರಾಹು ಶನಿ ಜೊತೆಗೆ ಕುಳಿತಾಗ ಗುರು ಸಂಚಾರದಲ್ಲಿದ್ದಾಗ ವಾಪಾಸ್ಸು ಹೋಗುವಾಗ ಈ ಘಟನೆ ಸಂಭವಿಸುತ್ತದೆ ಎಂದು ವಿವರಿಸಿದ್ದರು. ನಾಗಕ್ಷೇತ್ರಗಳಲ್ಲಿ ಈ ಘಟನೆ ಸರ್ವೇ ಸಾಮಾನ್ಯ.

ಅಮೆರಿಕಾದಿಂದ ಆಸ್ಟ್ರೇಲಿಯಾ ದವರೆಗೆ ಇರುವ ಘ್ಲಾಟಿಟ್ಲೂಡ್. ಆಗುತ್ತದೆ ಎಂದು ಹೇಳಿರುವುದು ಸತ್ಯ. ಸಮಯ ಹೇಳಲು ಸಾಧ್ಯವಿಲ್ಲ.

ಶನಿ ಐದು ಗ್ರಹಗಳ ಜೊತೆಗೆ ಸೇರಿದಾಗ ನಾಗಕೇತ್ರಗಳಾದ ಕುಮಾರಧಾರಾ, ಸಕಲೇಶಪುರದಲ್ಲಿರುವ ಬೆಟ್ಟಗುಡ್ಡಗಳಿಗೆ ತಗಲುತ್ತದೆ.

ಮುಂದಿನ ಜೂನ್ ತಿಂಗಳಿಂದ ಹಿಡಿದು ಒಂದು ಮುಕ್ಕಾಲು ವರ್ಷದ ಒಳಗೆ ಈ ರ್ದುಘಟನೆ ಸಂಭವಿಸುತ್ತದೆ.

ಮುಂದಿನ ನವೆಂಬರ್ 28ರ ವರೆಗೆ ಒಂದು ಗಂಡಾಂತರ, ನವೆಂಬರ್ ನಿಂದ ಮತ್ತೊಂದು ಗಂಡಾಂತರ, ಫೆಬ್ರುವರಿ ಸಂಕ್ರಮಣದವರೆಗೆ ಒಂದು ಘಟನೆ ನಡೆಯಲಿವೆ ಎಂದು ವಿವರಿಸಲಾಗಿದೆ.

ಕರ್ನಾಟಕದ ಕೊಡಗಿನ ಭಾಗ, ಕೊಡಚಾದ್ರಿ ಭಾಗದಲ್ಲಿ ಎತ್ತರದ ಸ್ಥಳಗಳಲ್ಲಿ ಸಂಭವಿಸುತ್ತದೆ ಎಂದು ಎಚ್ಚರಿಸಿದ್ದರು.

ಸ್ವಾಮಿಜಿಯ ಹೇಳಿಕೆಯನ್ನು ಸರಕಾರ ನಂಬುವುದಾದರೆ ಆತಂಕದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಿ.

ಇಲ್ಲದಿದ್ದರೆ ಸುಳ್ಳು ಎಂದು ಭಾವಿಸಿ ಮೌಢ್ಯ ಪ್ರಚಾರ ಮಾಡಿ ಅನಗತ್ಯವಾಗಿ ಆತಂಕ ಉಂಟು ಮಾಡುತ್ತಿರುವ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ, ಈ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡ್ತೇವೆ.

ದುರಂತ ಸಂಭವಿಸಬಾರದು ಎಂದು ಮುನ್ನಚ್ಚರಿಕೆ ಕ್ರಮವನ್ನು ತಿಳಿಸಲಾಗಿದೆ. ಒಂದು ವೇಳೆ ಈ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೂಡ ಯಾಚಿಸುತ್ತೇವೆ.

ಇದರಲ್ಲಿ ಯಾವುದೇ ಭಯ ಭೀತಿ ಸೃಷ್ಟಿಸುವ ಪ್ರಶ್ನೇಯೇ ಇಲ್ಲ. ಜನರ ಕಲ್ಯಾಣಕ್ಕಾಗಿ ದೇವರ ಪ್ರೇರಣೆಯಿಂದ ಹೇಳಲಾಗಿದೆ. ಇದನ್ನು ಅನ್ಯತಾಭಾವಿಸಬಾರದು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ರಾಜ್ಯದ ಬಿಜೆಪಿ ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಬರುವ ದಿನಗಳಲ್ಲಿ ಕಾದುನೋಡಬೇಕಿದೆ.  

ನಮ್ಮ ಫೇಸ್ ಬುಕ್ ಫೇಜ್ ಲೈಕ್, ಶೇರ್ ಹಾಗೂ ಫಾಲೋ ಮಾಡಲು ಈ ಲಿಂಕ್ ಬಳಸಿ  follow/like: facebook.com/prajakirannews

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *