ರಾಜ್ಯ

ಯಡಿಯೂರಪ್ಪ ವಿರುದ್ದ ಮತ್ತೇ ಅಸಮಾಧಾನ ಸ್ಪೋಟ : ಬಿಜೆಪಿ ಅತೃಪ್ತ ಶಾಸಕರ ಸಭೆ ನಡೆಸಿದ ಉಮೇಶ ಕತ್ತಿ….!

ಬೆಳಗಾವಿ prajakiran.com : ಕರೋನಾ ಲಾಕ್ ಡೌನ್ ನಡುವೆ ಕೆ ಬಿಜೆಪಿ ಶಾಸಕರು ರಹಸ್ಯವಾಗಿ ಸಭೆ ನಡೆಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯವೈಖರಿ ವಿರುದ್ದಅಸಮಾಧಾನ ಹೊರ ಹಾಕಿದ್ದಾರೆ. ಅಚ್ಚರಿಯ ಬೆಳವಣಿಗೆಯೆಂದರೆ ಈ ಸಭೆಯ ನೇತೃತ್ವವನ್ನು ಸಚಿವಸ್ಥಾನ ಸಿಗದೆ ಸಿಟ್ಟಿಗೆದ್ದಿರುವ ಮಾಜಿ ಸಚಿವ ಉಮೇಶ ಕತ್ತಿ ಸಾರಥ್ಯವಹಿಸಿದ್ದರು ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಬಿಜೆಪಿಯ ಫೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳ, ಮಹಾದೇವ್, ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 25ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. […]

ರಾಜ್ಯ

ಗುರುವಾರ ಬೆಳಗ್ಗೆ 75, ಸಂಜೆ ಮತ್ತೇ 40 ಜನರಿಗೆ ಸೋಂಕು : ಒಂದೇ ದಿನ 115 ಪ್ರಕರಣ ಪತ್ತೆ

ಬೆಂಗಳೂರು prajakiran.com :  ರಾಜ್ಯದಲ್ಲಿ ಗುರುವಾರ ಕರೋನಾ ಪ್ರಕರಣಗಳು ಮತ್ತೇ ನೂರರ  ಗಡಿ ದಾಟಿದ್ದು, ಒಂದೇ ದಿನ 115 ಪ್ರಕರಣಗಳು ಪತ್ತೆಯಾಗಿವೆ. ಬೆಳಗ್ಗೆಯಷ್ಟೇ 75 ಪ್ರಕರಣಗಳು ಕಂಡು ಬಂದಿದ್ದವು. ಆದರೆ ಸಂಜೆ ವೇಳೆಗೆ ಮತ್ತೇ 40 ಜನರಿಗೆ ಸೋಂಕು ವಕ್ಕರಿಸಿದೆ. ಮೈಸೂರಿನ ನಾಲ್ವರು ಪೊಲೀಸರಿಗೆ ಕ್ವಾರಂಟಿನ್ ಮಾಡಲಾಗಿದೆ. ಕ್ವಾರಂಟಿನ್ ಕೇಂದ್ರದಿಂದ ಮನೆಗೆ ಕಳುಹಿಸಿದ್ದ ವ್ಯಕ್ತಿಗೆ ಸೋಂಕು ಕಂಡು ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬೇಗೂರು ಗ್ರಾಮದಲ್ಲಿ ನಡೆದಿದೆ. ಮುಂಬೈನಿಂದ ಬಂದ ನಾಲ್ವರಿಗೆ ಸೋಂಕು ತಗುಲಿದ ಘಟನೆ […]

ರಾಜ್ಯ

ಧಾರವಾಡ ಜಿಲ್ಲೆಯ ೧,೫೦೦ ಜನರ ಕರೋನಾ ವರದಿ ನಿರೀಕ್ಷೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಇದುವರೆಗೆ ಸುಮಾರು ೧೪ ಸಾವಿರ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಸುಮಾರು ೧೨,೫೦೦ ಜನರ ವರದಿ ನೆಗೆಟಿವ್ ಬಂದಿರುವುದು ಸಮಾಧಾನದ ಸಂಗತಿಯಾಗಿದೆ. ಇನ್ನೂ ೧,೫೦೦ ಜನರ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರಯೋಗಾಲಯ ವರದಿಗಳು ಹೆಚ್ಚು ವಿಳಂಬವಾಗದಂತೆ ಎಚ್ಚರ ವಹಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಗೌರವ್ ಗುಪ್ತ ಹೇಳಿದರು. ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗೆ ಜಿಲ್ಲೆಯಲ್ಲಿ ಇದುವರೆಗೆ ವೆಂಟಿಲೆಟರ್‌ಗಳ ಬಳಕೆಯ ಅಗತ್ಯ […]

ರಾಜ್ಯ

ಹಾಸನದಲ್ಲಿ ಕೋವಿಡ್ 19ನಿಂದ 29 ಮಂದಿ ಗುಣಮುಖ

ಹಾಸನ‌ prajakiran.com  : ಹಾಸನದಲ್ಲಿ ಕೋವಿಡ್ 19 ಪ್ರಕರಣಗಳು  ಹೆಚ್ಚುತ್ತಿರುವ ಬೆನ್ನಲ್ಲೇ ಗುರುವಾರ  29 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ 6 ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ 23 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಬಿಡುಗಡೆ ಹೊಂದಿದ ಎಲ್ಲರೂ ಆಸ್ಪತ್ರೆಯಲ್ಲಿ ತಮಗೆ ದೊರೆತ ಚಿಕಿತ್ಸೆ ಹಾಗೂ ಸೌಲಭ್ಯ ಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಈ‌ ಸಂದರ್ಭದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ  ಸಿ.ಎನ್ ಬಾಲಕೃಷ್ಣ,ಜಿಲ್ಲಾಧಿಕಾರಿ ಆರ್ .ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ […]

ರಾಜ್ಯ

ರಾಜ್ಯದಲ್ಲಿ ಗುರುವಾರ ಮತ್ತೇ 75 ಹೊಸ ಕೇಸ್ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರ ಮತ್ತೇ 75 ಹೊಸ ಕೇಸ್ ಪತ್ತೆಯಾಗಿವೆ ಎಂದು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ. ಇಂದು ಅತಿ ಹೆಚ್ಚು ಸೋಂಕಿತರು ಉಡುಪಿ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಒಂದೇ ದಿನ 27 ಪ್ರಕರಣಗಳು ಖಚಿತಗೊಂಡಿವೆ. ಮಲೆನಾಡು ಚಿಕ್ಕಮಗಳೂರಿನಲ್ಲಿ 3, ಗುಮ್ಮಟನಗರಿ ವಿಜಯಪುರದಲ್ಲಿ 2, ರಾಯಚೂರಿನಲ್ಲಿ 1,  ಯಾದಗಿರಿ 7, ಬೆಂಗಳೂರು 7, ಹಾಸನ 13, ಚಿತ್ರದುರ್ಗ 6, ಕಲಬರುಗಿ ಜಿಲ್ಲೆಯಲ್ಲಿ 3 ಪತ್ತೆಯಾಗಿವೆ. ಇವತ್ತು ಕೂಡ ಮುಂಬಯಿ, ತಮಿಳುನಾಡು, […]

ರಾಜ್ಯ

ಸಾಮಾಜಿಕ ಜಾಲತಾಣಗಳಲ್ಲಿ ನಿಜಗುಣಾನಂದ ಶ್ರೀಗಳ ವಿರುದ್ಧ ಅಪ್ರಚಾರ ಖಂಡಿಸಿ ಪ್ರತಿಭಟನೆ

ಬೆಳಗಾವಿ prajakiran.com : ಸಾಮಾಜಿಕ ಜಾಲತಾಣಗಳಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತೋಂಟದಾರ್ಯ ಶಾಖಾಮಠದ ಪೀಠಾಧಿಕಾರಿ ಹಾಗೂ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯಿತು. ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರಿಂದ ಬೆಳಗಾವಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ನಿಜಗುಣಾನಂದ ಶ್ರೀಗಳಿಗೆ ಕಳೆದ ಹಲವು ದಿನಗಳಿಂದ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು. […]

ರಾಜ್ಯ

ಧಾರವಾಡದ ಮೆಣಸಿನಕಾಯಿ ವ್ಯಾಪಾರಿ ಗುಣಮುಖ : ಆಸ್ಪತ್ರೆಯಿಂದ ಬಿಡುಗಡೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಮೆಣಸಿನಕಾಯಿ ವ್ಯಾಪಾರಿ ಕೋವಿಡ್ ನಿಂದ ಗುಣಮುಖರಾಗಿ  ಬುಧವಾರ  ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದಾಗಿ , ಮೇ  ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಧಾರವಾಡ ಹೊಸಯಲ್ಲಾಪುರದ ಕೋಳಿಕೆರೆ, ನವಲೂರ ಅಗಸಿ ಪ್ರದೇಶದ ಪಿ- 705 ( 35 ವರ್ಷ,ಪುರುಷ)  ಸಂಪೂರ್ಣ ಗುಣಮುಖರಾಗಿದ್ದಾರೆ. ಇವರಿಗೆ 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ […]

ರಾಜ್ಯ

ತಿರುಪತಿ ತಿಮ್ಮಪ್ಪನ  ಆಸ್ತಿಗೆ ಕೈ ಹಾಕಿದರೆ ನಿಮ್ಮ ತಂದೆಗೆ ಬಂದ ಪರಿಸ್ಥಿತಿ : ಪ್ರಮೋದ ಮುತಾಲಿಕ್ ಎಚ್ಚರಿಕೆ  

ಧಾರವಾಡ prajakiran.com : ದೇಶದ ಕೋಟ್ಯಾಂತರ ಭಕ್ತರ ಆರಾದ್ಯದೈವವಾಗಿರುವ ತಿರುಪತಿ ತಿಮ್ಮಪ್ಪನ   ಆಸ್ತಿಗೆ ಕೈಹಾಕಿದರೆ ನಿಮ್ಮ ತಂದೆಗೆ ಆದ ಪರಿಸ್ಥಿತಿ ನಿಮಗೂ ಬರಬಹುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಬುಧವಾರ ಧಾರವಾಡ ಜಿಲ್ಲಾಧಿಕಾರಿ ಮುಖಾಂತರ ಆಂಧ್ರಪ್ರದೇಶದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಿರುಪತಿ ತಿಮ್ಮಪ್ಪನ ದೇವಸ್ಥಾನದ ಆಸ್ತಿ ಮಾರಾಟಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ತಾತ್ಕಾಲಿಕವಾಗಿ ಅದಕ್ಕೆ ತಾನೇ ತಡೆಯಾಜ್ಞೆ […]

ರಾಜ್ಯ

ನಾಲ್ವರು ಸಿವಿಲ್ ಪೊಲೀಸರಿಗೆ ಪಾಸಿಟಿವ್ : ಭೇಟಿ ನೀಡಿದ್ದ ಹೋಟೆಲ್ ಸೀಲ್ ಡೌನ್

ಹಾಸನ: ಹಾಸನ ಜಿಲ್ಲೆಯ ನಾಲ್ವರು ಸಿವಿಲ್ ಪೊಲೀಸರಿಗೆ ಕರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಅರಸೀಕೆರೆ ಪಟ್ಟಣದ ಒಂದು ಹೋಟೆಲ್ ಸೀಲ್ ಡೌನ್ ಮಾಡಿದೆ. ಪಟ್ಟಣದ ಅಯೋಧ್ಯೆ ಹೋಟೆಲ್ ಅನ್ನು ಅರಸಿಕೆರೆ ತಾಲ್ಲೂಕು ಆಡಳಿತ ಸೀಲ್ ಮಾಡಿದೆ. ಅವರೆಲ್ಲರೂ ನಿಪ್ಪಾಣಿಯಿಂದ ಡ್ಯೂಟಿ ಮುಗಿಸಿ ಹಾಸನಕ್ಕೆ ಬರೋ ಮಾರ್ಗ ಮಧ್ಯೆ ಹೋಟೆಲ್ ಗೆ ಭೇಟಿ ನೀಡಿದ್ದರು. ಈ ಹೋಟೆಲ್ ನಲ್ಲಿ ಪೊಲೀಸರು ಊಟ ಪಾರ್ಸೆಲ್ ಪಡೆದಿದ್ದರು. ಇದೀಗ ಪೊಲೀಸರಿಗೇ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ‌ಹೋಟೆಲ್  ಬಂದ್ ಮಾಡಲಾಗಿದೆ. ಆರೋಗ್ಯ ಇಲಾಖೆ ಹೋಟೆಲ್ […]

ರಾಜ್ಯ

ಕೊಗನೋಳಿ ಚೆಕ್ ಪೋಸ್ಟ್ ನಲ್ಲಿದ್ದ ಹಾಸನ ಜಿಲ್ಲೆಯ 4 ಪೊಲೀಸರಲ್ಲಿ ಕರೋನಾ ಸೋಂಕು ಪತ್ತೆ

ಬೆಳಗಾವಿ prajakiran.com : ಕೊಗನೋಳಿ ಚೆಕ್ ಪೋಸ್ಟ್‍ನಲ್ಲಿ ಕರ್ತವ್ಯದಲ್ಲಿದ್ದ ಹಾಸನ ಜಿಲ್ಲೆಯ 4 ಪೊಲೀಸರಲ್ಲಿ ಕರೋನಾ ಸೋಂಕು ಪತ್ತೆಯಾಗಿರುವುದು ನಿಪ್ಪಾಣಿಯಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕ ಪ್ರವೇಶಿಸುತ್ತಿರುವ ಜನರನ್ನು ನಿಯಂತ್ರಣ ಮಾಡಲು ಹಾಗೂ ಅವರವರ ಜಿಲ್ಲೆಗಳಿಗೆ ತೆರಳಿ ಕ್ವಾರೆಂಟನ್‍ನಲ್ಲಿಡಲು ದೃಷ್ಟಿಯಿಂದ ಬೆಳಗಾವಿ ಆಡಳಿತ ಸರ್ಕಾರಕ್ಕೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು, […]