ರಾಜ್ಯ

ರಾಜ್ಯದಲ್ಲಿ ಗುರುವಾರ ಮತ್ತೇ 75 ಹೊಸ ಕೇಸ್ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರ ಮತ್ತೇ 75 ಹೊಸ ಕೇಸ್ ಪತ್ತೆಯಾಗಿವೆ ಎಂದು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ.

ಇಂದು ಅತಿ ಹೆಚ್ಚು ಸೋಂಕಿತರು ಉಡುಪಿ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಒಂದೇ ದಿನ 27 ಪ್ರಕರಣಗಳು ಖಚಿತಗೊಂಡಿವೆ.

ಮಲೆನಾಡು ಚಿಕ್ಕಮಗಳೂರಿನಲ್ಲಿ 3, ಗುಮ್ಮಟನಗರಿ ವಿಜಯಪುರದಲ್ಲಿ 2, ರಾಯಚೂರಿನಲ್ಲಿ 1,  ಯಾದಗಿರಿ 7, ಬೆಂಗಳೂರು 7, ಹಾಸನ 13, ಚಿತ್ರದುರ್ಗ 6, ಕಲಬರುಗಿ ಜಿಲ್ಲೆಯಲ್ಲಿ 3 ಪತ್ತೆಯಾಗಿವೆ.

ಇವತ್ತು ಕೂಡ ಮುಂಬಯಿ, ತಮಿಳುನಾಡು, ಆಂಧ್ರ, ತೆಲಂಗಾಣ, ದೆಹಲಿ,ಕೇರಳ ನಂಟು ತಗುಲಿದೆ. ಕಲಬರುಗಿಯ ಮೂವರಿಗೆ ಗುರುವಾರ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಸೋಂಕಿತರ ಸಂಖ್ಯೆ 188ಕ್ಕೆ ಏರಿದೆ.  

ಅದೇ ರೀತಿ ಉಡುಪಿಯ 27 ಜನರ ಪೈಕಿ ಮಹಾರಾಷ್ಟ್ರದಿಂದ ಬಂದ 24 ಜನರಿಗೆ ಆಂಧ್ರದಿಂದ ಬಂದ ಇಬ್ಬರಿಗೆ  ಹಾಗೂ ಕೇರಳದಿಂದ ಬಂದ ಒಬ್ಬರಿಗೆ ಸೋಂಕು ತಗುಲಿದೆ.

ಆ ಮೂಲಕ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 27 ಪ್ರಕರಣ ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಗೆ ಆತಂಕ ತಂದಿದೆ.

ಕೇರಳದಿಂದ ಬಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿರುವುದು ಜನತೆಗೆ ಮತ್ತೇ ಭೀತಿ ಆವರಿಸಿದೆ. ಆ ಮೂಲಕ ಉಡುಪಿಜಿಲ್ಲೆಯ 147ಜನರಿಗೆ ಸೋಂಕು ಕಾಣಿಸಿಕೊಂಡಂತಾಗಿದೆ.

ಕರಾವಳಿಗೂ ಕಂಟಕ ತಂದ ಮುಂಬೈನ ನಂಟಿನ ನಂಜು ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ ಇಂದು ಮತ್ತೇ ಹೊಸದಾಗಿ 6 ಜನರಿಗೆ ಸೋಂಕಿರುವುದು ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ದುಬೈ, ಸಾರಿ, ಫಸ್ಟ್ ನ್ಯೂರೋ ನಂತರ ಮುಂಬೈ ನಂಜು ತಗುಲಿದೆ. ಆ ಮೂಲಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ79ಕ್ಕೆ ಏರಿಕೆಯಾದಂತಾಗಿದೆ.

ನಾಲ್ವರು ಪುರುಷರು ಇಬ್ಬರು ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಗೆ ಬೆಚ್ಚಿಬೀಳಿಸಿದೆ. 

ಕ್ರೂರಿ ಕರೋನಾ ಇವತ್ತು ಹಾಸನ ಜಿಲ್ಲೆಗೆ ದೊಡ್ಡ ಆಘಾತ ನೀಡಿದೆ. ಇಂದು ಪತ್ತೆಯಾದ  13 ಹೊಸ ಕೇಸ್ ಗಳ ಪೈಕಿ ಮಹಾರಾಷ್ಟ್ರದಿಂದ ಬಂದ ಇಬ್ಬರಿಗೆ ಸೋಂಕು ಉಳಿದವರ ಸೋಂಕಿನ ಮೂಲವನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದೆ. ಆ ಮೂಲಕ ಹಾಸನ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 148ಕ್ಕೆ ಏರಿದೆ.

ಚಿತ್ರದುರ್ಗ ದಲ್ಲಿ ಇಂದು ಒಟ್ಟು ಆರು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಒಬ್ಬ ಬಾಲಕ ಐವರು ಯುವಕರಿಗೆ ತಗುಲಿದೆ.

ಇವರೆಲ್ಲಾ ಚಳ್ಳೆಕೆರೆ ಕ್ರಾಸ್ ನಲ್ಲಿ ಕಂಟೇನೈರ್ ನಲ್ಲಿ ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದ 57ಜನರನ್ನು ಪೊಲೀಸರು ತಡೆಹಿಡಿದಿದ್ದರು. ಆ ಮೂಲಕ ಚಿತ್ರದುರ್ಗದಲ್ಲಿ ಕೂಡ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ.

ಇನ್ನೂ ಇಷ್ಟು ದಿನ ಗ್ರೀನ್ ಜೋನ್ ನಲ್ಲಿದ್ದ ಮಲೆನಾಡು ಚಿಕ್ಕಮಗಳೂರಿಗೆ ಕೂಡ ಕರೋನ ಕಾಡುತ್ತಿದೆ. ಮುಂಬೈ, ದೆಹಲಿ ಕಂಟಕ ಎದುರಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂವರಿಗೆ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮುಂಬೈನಿಂದ ಬಂದವರಾಗಿದ್ದರೆ,ಒಬ್ಬರು ದೆಹಲಿಯಿಂದ ಬಂದವರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 15 ಕೇಸ್ ಆಗಿವೆ.

ಇನ್ನೂ ಕೋಟೆ ನಾಡು ಚಿತ್ರದುರ್ಗದ 15 ವರ್ಷದ ಬಾಲಕ, ಉಡುಪಿಯಲ್ಲಿ 6 ವರ್ಷದ ಬಾಲಕಿಗೆ ಸೋಂಕು ಹಾಸನದಲ್ಲಿ 12 ವರ್ಷದ ಬಾಲಕ, 18 ವರ್ಷದ ಬಾಲಕಿ ಸೇರಿ ಹಲವು ಮಕ್ಕಳಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದೆ.

ಇಂದಿನ  75 ಪ್ರಕರಣಗಳಲ್ಲಿ 43 ಕಾರ್ಮಿಕರಿಗೆ ಮಹಾರಾಷ್ಟ್ರನಂಟು ಇದ್ದರೆ, ತಮಿಳುನಾಡಿನಿಂದ 6 ಜನರು ತೆಲಂಗಾಣದಿಂದ ಬಂದ ಇಬ್ಬರು, ದೆಹಲಿ ಹಾಗೂ ಕೇರಳದಿಂದ ಬಂದ ತಲಾ ಒಬ್ಬರಿಗೆ ಕರೋನಾ ಕಂಟಕ ಎದುರಾಗಿದೆ.

ಇವತ್ತು ಒಟ್ಟು 28 ಜನ ಗುಣಮುಖರಾಗಿದ್ದು, ಈವರೆಗೆ 809 ಜನ ಚೇತರಿಕೆಯಾಗಿದ್ದಾರೆ.

ಒಟ್ಟು 1635 ಸಕ್ರಿಯ ಕರೋನಾ ಪ್ರಕರಣಗಳಿದ್ದು, ಅವರನ್ನು ರಾಜ್ಯದ ಆಯಾ ಜಿಲ್ಲೆಗಳ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 47ಕ್ಕೆ ಏರಿಕೆಯಾಗಿದ್ದು, ಒಟ್ಟು ಕರೋನಾ ಪೀಡಿತರ ಸಂಖ್ಯೆ  2493 ಆದಂತಾಗಿದೆ.

ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಒಟ್ಟು ಸೋಂಕಿತರಸಂಖ್ಯೆ 81 ಆಗಿದೆ. ಹಾಸನ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 140 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *