ಹಾಸನ: ಹಾಸನ ಜಿಲ್ಲೆಯ ನಾಲ್ವರು ಸಿವಿಲ್ ಪೊಲೀಸರಿಗೆ ಕರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಅರಸೀಕೆರೆ ಪಟ್ಟಣದ ಒಂದು ಹೋಟೆಲ್ ಸೀಲ್ ಡೌನ್ ಮಾಡಿದೆ. ಪಟ್ಟಣದ ಅಯೋಧ್ಯೆ ಹೋಟೆಲ್ ಅನ್ನು ಅರಸಿಕೆರೆ ತಾಲ್ಲೂಕು ಆಡಳಿತ ಸೀಲ್ ಮಾಡಿದೆ.
ಅವರೆಲ್ಲರೂ ನಿಪ್ಪಾಣಿಯಿಂದ ಡ್ಯೂಟಿ ಮುಗಿಸಿ ಹಾಸನಕ್ಕೆ ಬರೋ ಮಾರ್ಗ ಮಧ್ಯೆ ಹೋಟೆಲ್ ಗೆ ಭೇಟಿ ನೀಡಿದ್ದರು. ಈ ಹೋಟೆಲ್ ನಲ್ಲಿ ಪೊಲೀಸರು ಊಟ ಪಾರ್ಸೆಲ್ ಪಡೆದಿದ್ದರು.
ಇದೀಗ ಪೊಲೀಸರಿಗೇ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೋಟೆಲ್ ಬಂದ್ ಮಾಡಲಾಗಿದೆ. ಆರೋಗ್ಯ ಇಲಾಖೆ ಹೋಟೆಲ್ ನ ಐವರು ಸಿಬ್ಬಂದಿಗಳ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳಿಸಿತ್ತು.
ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಸೋಂಕಿತ ಪೊಲೀಸರು ವಾಪಸ್ ಬರೋ ವೇಳೆ ಅವರನ್ನ ಭೇಟಿ ಮಾಡಿದ್ದ ಅರಸೀಕೆರೆಯ ಮತ್ತೋರ್ವ ಪೊಲೀಸ್ ಸಿಬ್ಬಂದಿಯ ಸ್ವ್ಯಾಬ್ ಪಡೆದು ಪರೀಕ್ಷೆಗೆ ತಯಾರಿ ಮಾಡಲಾಗಿದೆ.
ಹಾಸನ ಜಿಲ್ಲೆಯ ಪೊಲೀಸರಿಗೆ ಸೋಂಕು ಬಂದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.