ರಾಜ್ಯ

ರಾಜ್ಯದಲ್ಲಿ ಒಂದೇ ದಿನ 141 ಹೊಸ ಕರೋನಾ ಪ್ರಕರಣ : ಮೂರು ಸಾವಿರ ಗಡಿ ತಲುಪಿದ ಕರುನಾಡು

ಬೆಂಗಳೂರು prajakiran.com : ಶನಿವಾರವೂ ರಾಜ್ಯದಲ್ಲಿ ಒಂದೇ ದಿನ 141 ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ  2922ಕ್ಕೆ ಬಂದು ನಿಂತಿದೆ. ಸೋಂಕಿತೆ ಪಿ-2783 47 ವರ್ಷದ ಬೀದರನ ಮಹಿಳೆ ವಿವಿಧ ಕಾಯಿಲೆಗಳಿಂದ ಬಳಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.  ಆ ಮೂಲಕ ಇಂದು ಸಾವನ್ನಪ್ಪಿದವರ ಸಂಖ್ಯೆ ಕೂಡ 49ಕ್ಕೆ ಹೆಚ್ಚಳವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಶನಿವಾರ ಕರೋನಾ ಬಿಗ್ ಶಾಕ್ ನೀಡಿದ್ದು, 2 ವರ್ಷದ ಹೆಣ್ಣು ಮಗು, 8 ಹಾಗೂ11 […]

ರಾಜ್ಯ

ತಾಂತ್ರಿಕ ಶಿಕ್ಷಣ ನಿರ್ದೇಶಕ ಎಚ್.ಯು.ತಳವಾರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ

ಧಾರವಾಡ prajakiran.com : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಯು.ತಳವಾರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಾತ್ಯಾತೀತ ಜನತಾದಳ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಸರಕಾರವನ್ನು ಆಗ್ರಹಿಸಿದರು. ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೦ ವರ್ಷಗಳಿಂದ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೨೦೧೦ ರಿಂದ ಕಾಲೇಜುಗಳ ಆಡಳಿತ ಮಂಡಳಿ ಜೊತೆ ಶಾಮೀಲಾಗಿ  ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿರುವ ತಳವಾರ, ಇಲಾಖೆಯ ಎಲ್ಲ ನಿಯಗಳನ್ನು […]

ರಾಜ್ಯ

ಖಾಸಗಿ ಶಾಲೆಗಳ ಆರ್ ಟಿಇ ಬಾಕಿ ಮೊತ್ತ ತಕ್ಷಣ ಬಿಡುಗಡೆಗೆ ಒತ್ತಾಯ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಅನುದಾನ ರಹಿತ ಶಾಸಗಿ ಶಾಲೆಗಳ ಆರ್ ಟಿ ಇ ಬಾಕಿ ಮೊತ್ತ ತಕ್ಷಣ ಬಿಡುಗಡೆಗೆ ಒತ್ತಾಯಿಸಿ ಧಾರವಾಡ ಅನುದಾನ ರಹಿತ ಶಾಲಾ ಮಂಡಳಿಗಳ ಒಕ್ಕೂಟದಿಂದ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.  ಈ ಹಿಂದೆ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಐದು ವರ್ಷಗಳ ಅವಧಿಯಿತ್ತು. ಈಗ ಪ್ರತಿ ವರ್ಷ ಮಾಡಿರುವುದು ಅವೈಜ್ಞಾನಿಕವಾಗಿದೆ. ಅತ್ಯುತ್ತಮ ಶಾಲೆಗಳಿಗೆ ಒಂದು ಅವಧಿಗೆ ಮಾನ್ಯತೆ ನವೀಕರಣ ನೀಡುವಂತೆ ಒತ್ತಾಯ ಮಾಡಿದರು. […]

ರಾಜ್ಯ

ಶೆಟ್ಟರ್ ಸಿಎಂ ಮಾಡಲು ಕಾಂಗ್ರೆಸ್ ಟೀಂ ಪ್ಲಾನ್ ಮಾಡ್ತಿದೆ ಎಂದ ಜಾರಕಿಹೊಳಿ

ಬೆಳಗಾವಿ prajakiran.com : ಬಿಜೆಪಿಯಲ್ಲಿ ಸಿಎಂ ಬದಲಾವಣೆ ರಾಜಕೀಯ ನಡೆಯುತ್ತಿದೆ. ಇದನ್ನು ಬಿಜೆಪಿ ಹೈಕಮಾಂಡ ಯಡಿಯೂರಪ್ಪ ಮೇಲೆಯೇ ಬಿಡ್ತಾರಾ ನೋಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಬಿಜೆಪಿ ಪಾಳ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜ್ಯೋಶಿ ಇಲ್ಲವೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನ ಸಿಎಂ ಮಾಡುವ ಚರ್ಚೆ ನಡೆದಿದೆ. ಬಿಜೆಪಿಗೆ ಹೋದ ನಮ್ಮ ಕಾಂಗ್ರೆಸ್ ಟೀಂ ಜಗದೀಶ್ ಶೆಟ್ಟರ್ ಪರವಾಗಿದೆ ಎಂದು ಹೊಸ ಬಾಂಬ್ ಸಿಡಿಸಿದರು. ಬಿಜೆಪಿಗೆ ಹೋದ ನಮ್ಮವರೇ ೧,೨,೩ ಟಾಪ್ ನಲ್ಲಿ […]

ರಾಜ್ಯ

ಭಾನುವಾರದ ಲಾಕ್ ಡೌನ್ ಹಿಂಪಡೆದ ರಾಜ್ಯ ಸರಕಾರ

ಬೆಂಗಳೂರು prajakiran.com : ರಾಜ್ಯಾದ್ಯಂತ ಪ್ರತಿ ಭಾನುವಾರ ಲಾಕ್ ಡೌನ್ ವಿಧಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ವಾಪಾಸ್ಸು ಪಡೆದಿದೆ. ಜನರಿಗೆ ಕರೋನಾ ಹರಡದಂತೆ ಮುಂಜಾಗ್ರತಕ್ರಮವಾಗಿ ಮೇ 31ರಂದು ಭಾನುವಾರ ರಾಜ್ಯಾದ್ಯಂತ ನಿಷೇದಾಜ್ಞೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಿಧಿಸಿದ್ದರು. ಇದೀಗ ಜನರ ಒತ್ತಾಯದ ಮೇರೆಗೆ ಅದನ್ನು ವಾಪಾಸ್ಸು ಪಡೆಯುವಂತೆ  ಸಿಎಂ ಯಡಿಯೂರಪ್ಪ ಅವರ ಸೂಚನೆ ಮೇಲೆ ಈ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಬೆಳಗ್ಗೆ 7 ರಿಂದ […]

ರಾಜ್ಯ

ಶಿಕ್ಷಕರ ವರ್ಗಾವಣೆ ಪ್ರಾರಂಭಿಸಲು ಮನೆಯಿಂದಲೇ ಮನವಿ ಅಭಿಯಾನ

ಧಾರವಾಡ prajakiran.com : ಶಿಕ್ಷಕರ ವರ್ಗಾವಣೆ ಪ್ರಾರಂಭಿಸಲು ಆಗ್ರಹಿಸಿ ಕರ್ನಾಟಕ  ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಭಿನ್ನ ಅಭಿಯಾನ ಆರಂಭಿಸಿದೆ.   ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಗ್ರಾಮೀಣ ಶಿಕ್ಷಕರ ಸಂಘಟನೆಯವತಿಯಿಂದ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಘಟಕಗಳ ಸಂಯೋಜನೆಯಲ್ಲಿ ಮನೆಯಿಂದಲೇ ಮನವಿ ಎಂಬ ವಿಶಿಷ್ಟ ಸಾಪ್ತಾಹಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಮುಖ್ಯ ಮಂತ್ರಿ, ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಯ ರಾಜ್ಯ […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಮೇ 31ರಂದು ೧೪೪ ನೇ ಕಲಂ ಅಡಿ ನಿಷೇಧಾಜ್ಞೆ

ಧಾರವಾಡ prajakiran.com :  ಕರೊನಾ ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಭಾನುವಾರ ಮೇ.೩೧ ರಂದು ಜಿಲ್ಲೆಯಾದ್ಯಂತ ಸಿ ಆರ್ ಪಿ ಸಿ ೧೯೭೩ ರ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶವು  ಮೇ ೩೦ ರ ಸಾಯಂಕಾಲ  ೭  ಗಂಟೆಯಿಂದ  ಜೂನ್ ೧ ರ ಬೆಳಿಗ್ಗೆ ೭  ಗಂಟೆಯವರೆಗೆ  ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ , ಕ್ರೀಡಾ […]

ರಾಜ್ಯ

ಬೆಳಗ್ಗೆ 178, ಸಂಜೆ ಮತ್ತೇ 70 ಕರೋನಾ ಪಾಸಿಟಿವ್ : ಒಂದೇ ದಿನ 248 ಜನರಿಗೆ ಸೋಂಕು ದೃಢ

ಬೆಂಗಳೂರು prajakiran.com : ರಾಜ್ಯದ ಪಾಲಿಗೆ ಶುಕ್ರವಾರ ಕರಾಳವಾಗಿದ್ದು, ಬೆಳಗ್ಗೆ 178 ಸೋಂಕು ದೃಢಪಟ್ಟಿದ್ದರೆ ಸಂಜೆ ಮತ್ತೇ 70 ಪ್ರಕರಣ ವಕ್ಕರಿಸುವ ಮೂಲಕ ಒಂದೇ ದಿನ 248 ಸೋಂಕು ಖಚಿತಗೊಂಡಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಅತಿ ಹೆಚ್ಚು ಸೋಂಕಿತರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪತ್ತೆಯಾಗಿದ್ದು, ಬಿಸಲನಾಡು  ರಾಯಚೂರಿನಲ್ಲಿ 62, ಕಲಬುರಗಿಯಲ್ಲಿ 61,ಯಾದಗಿರಿಯಲ್ಲಿ 60 ಪ್ರಕರಣಗಳು ಈ ಮೂರು ಜಿಲ್ಲೆಗಳಲ್ಲಿಯೇ ಕಂಡು ಬಂದಿವೆ. ಇನ್ನೂಳಿದಂತೆ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ 12  […]

ರಾಜ್ಯ

ಧಾರವಾಡದಲ್ಲಿ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ : ಒಟ್ಟು 44 ಕ್ಕೇರಿದ ಪ್ರಕರಣಗಳ ಸಂಖ್ಯೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಪ್ರಕಟವಾದ ಹೆಲ್ತ್ ಬುಲೇಟಿನ್ ನಲ್ಲಿ ಮತ್ತೊಂದು  ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರನ್ನು ಪಿ-2710 ನೇ 65 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರಯಾಣ ಮಾಡಿದ ಹಿನ್ನೆಲೆ  ಹೊಂದಿದ್ದಾರೆ ಎಂದು ವಿವರಿಸಿದ್ದಾರೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  44  ಕ್ಕೆ ಏರಿಕೆಯಾಗಿದೆ.  ಈ ಪೈಕಿ ಈಗಾಗಲೇ  11 ಜನ ಗುಣಮುಖರಾಗಿ […]

ರಾಜ್ಯ

ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಅಷ್ಟೇ, ನಮ್ಮ ನಾಯಕರು ಅಮಿತ್ ಶಾ ಎಂದ ಯತ್ನಾಳ

ಬೆಂಗಳೂರು prajakiran.com : ಕಳೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸುತ್ತಿದ್ದ ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ ಇದೀಗಅವರ ವಿರುದ್ದ ಮುನಿಸಿಕೊಂಡಿರುವುದು ಸ್ಪಷ್ಟವಾಗಿದೆ. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಅಷ್ಟೇ ಅವರು ನಮ್ಮ ನಾಯಕರಲ್ಲ. ನಮ್ಮ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಅಧ್ಯಕ್ಷ ಜೆಪಿ ನಡ್ಡಾ ನಮ್ಮ ನಾಯಕರು ಎಂದು ಹೇಳಿದ್ದಾರೆ. ನಾವು ಯಡಿಯೂರಪ್ಪ,ಅನಂತಕುಮಾರ್, ಈಶ್ವರಪ್ಪ ಎಲ್ಲಾ ಸಮಕಾಲೀನರು. ನಾನು ಅವರಿಗೆ ಮಂತ್ರಿಗಿರಿ ಕೊಡಿ […]