ರಾಜ್ಯ

ಮಾಜಿ ಸಚಿವ ವಿನಯ್ ಕುಲಕರ್ಣಿ, ಸೋದರ ಮಾವ ಚಂದೂ ಮಾಮ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಧಾರವಾಡ prajakiran.com : ಧಾರವಾಡದ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಸೋದರ ಮಾವ ಚಂದೂ ಮಾಮ ನ್ಯಾಯಾಂಗ ಬಂಧನ ಅವಧಿ ಮತ್ತೆ‌‌ ವಿಸ್ತರಣೆಗೊಂಡಿದೆ. ಸೋಮವಾರ ಡಿ. 28ಕ್ಕೆ ಇಬ್ಬರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಮತ್ತೆ ಅವಧಿ ವಿಸ್ತರಿಸುವಂತೆ ಧಾರವಾಡದ ಮೂರನೇ ಅಧಿಕ ನ್ಯಾಯಾಲಯ ಹಾಗೂ ವಿಶೇಷ ಸಿಬಿಐ ನ್ಯಾಯಾಲಯದ ಎದುರು ಅವರ ಪರ ವಕೀಲರು ಮನವಿ […]

ರಾಜ್ಯ

ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪ ಬಿಜೆಪಿ ಮುಂದಿಲ್ಲ

ಹುಬ್ಬಳ್ಳಿ prajakiran.com : ಜೆಡಿಎಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ವಿಲೀನ ಮಾಡಿಕೊಳ್ಳುವ ಪ್ರಸ್ತಾಪ ಬಿಜೆಪಿ ಮುಂದಿಲ್ಲ. ವಿಷಯಾಧಾರಿತ ಹೊಂದಾಣಿಕೆಯೇ ಬೇರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯಾಬಲ ಇಲ್ಲ. ಹಾಗಾಗಿ ಅಲ್ಲಿ ವಿಷಯಾಧಾರಿತ ಹೊಂದಾಣಿಕೆ ಮಾಡಕೊಳ್ಳಲಾಗಿದೆ ಎಂದು ಹೇಳಿದರು. ಅದನ್ನು ಬಿಟ್ಟರೆ ಜೆಡಿಎಸ್‌ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದರು. ಸ್ವಂತ ಬಲದ ಮೇಲೆ ದೇಶಾದ್ಯಂತ ಪಕ್ಷವನ್ನು […]

ರಾಜ್ಯ

ಧಾರವಾಡದಲ್ಲಿ ಜಾಗಟೆ ಬಾರಿಸುವ ಮೂಲಕ ರೈತರ ಹೋರಾಟಕ್ಕೆ ಸಾಥ್

ಧಾರವಾಡ prajakiran.com : ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ರೈತರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕ್ಯಾರೆ ಎನ್ನದಿರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಕಿಡಿಕಾರಿದರು. ಅವರು ಭಾನುವಾರ ರಾತ್ರಿ ರೈತರ ಹೋರಾಟ ಬೆಂಬಲಿಸಿ ಧಾರವಾಡದ ಕಲಾಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ಜಾಗಟೆ ಬಾರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಗಳ […]

ರಾಜ್ಯ

ಜ. 14ಕ್ಕೆ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ

ಧಾರವಾಡ prajakiran.com : ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ವೀರಪ್ಪ ಮೋಯ್ಲಿಯಿಂದ ಯಡಿಯೂರಪ್ಪವರೆಗೆ ಮನವಿ ಮಾಡಿಕೊಂಡಿದ್ದೇವೆ‌  ಇವರಿಗೆಲ್ಲ ಮನವಿ ಕೊಟ್ಟು, ಶಾಲು ಹಾಕಿ ಸನ್ಮಾನ ಮಾಡಿ ವಿನಂತಿ ಮಾಡಿದ್ದೆಲ್ಲ ಸಾಕಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಧಾರವಾಡದಲ್ಲಿ ಸಮಾಜದ ಮುಖಂಡರ ಸಭೆ ನಡೆಸಿ, ನಮ್ಮ ಸಮಾಜದ ಸಂಘಟನೆ ಆರಂಭವಾಗಿ 20 ವರ್ಷ ಆಗಿವೆ. ರಾಜ್ಯವನ್ನು ಸ್ವತಂತ್ರ ಬಂದಾಗಿನಿಂದ 8 ಜನ ಲಿಂಗಾಯತ ಸಿಎಂಗಳಾಗಿದ್ದಾರೆ. ಆದರೆ ರಾಜಕೀಯ ಜಾಗೃತಿಗೆ […]

ರಾಜ್ಯ

ಬಸ್ – ಕ್ರೂಸರ್ ನಡುವೆ ಡಿಕ್ಕಿ : ಐವರ ಸಾವು, ಏಳು ಜನರಿಗೆ ತೀವ್ರ ಗಾಯ

ಚಿತ್ರದುರ್ಗ prajakiran.com : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂಕ್ರೂಸರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಳು ಜನರು ತೀವ್ರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಇದರಿಂದಾಗಿ ಕ್ರೂಸರ್‌ನಲ್ಲಿದ್ದ ದುರ್ಗಪ್ಪ, ಮಹೇಶ, ತಿಮ್ಮಣ್ಣ, ರತ್ನಮ್ಮ ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರಿನವರು ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ತೆರಳುತ್ತಿದ್ದ […]

ರಾಜ್ಯ

ಜ.1ರಿಂದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯು ತರಗತಿ ಪ್ರಾರಂಭ : ಹಾಜರಾತಿ ಕಡ್ಡಾಯವಲ್ಲ

ಧಾರವಾಡ prajakiran.com : ಸರ್ಕಾರದ ಆದೇಶದಂತೆ ಬರುವ ಜನೆವರಿ 1 ರಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುವುದು. ಆದರೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಜನೆವರಿ 1 ರಿಂದ ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆ ಮತ್ತು ಕಾಲೇಜುಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿರುವುದರಿಂದ ನಮ್ಮ […]

ರಾಜ್ಯ

ಗ್ರಾಮ ಪಂಚಾಯತ ಚುನಾವಣೆ : ಧಾರವಾಡದಲ್ಲಿ ಅಕ್ರಮ ಮದ್ಯ, ವಾಹನ ಸೇರಿ 7.55 ಲಕ್ಷ ಮೌಲ್ಯದ ವಸ್ತು ಜಪ್ತಿ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಬಕಾರಿ ಹಾಗೂ ಜಾಗೃತ ದಳಗಳು ನಿರಂತರ ಕಾರ್ಯಾಚರಣೆ ಹಾಗೂ ವಿವಿಧ ಸ್ಥಳಗಳಲ್ಲಿ ನಿಗಾವಹಿಸಿದ್ದು, ನವೆಂಬರ 30 ರಿಂದ ಡಿ.26 ವರೆಗೆ ಸುಮಾರು 5 ಲಕ್ಷ, 85 ಸಾವಿರ ಮೌಲ್ಯದ ಅಕ್ರಮ ಮದ್ಯ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೃಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಬಕಾರಿ ಕಾಯ್ದೆ 1956 ರ ಅಡಿಯಲ್ಲಿ ಇಲ್ಲಿವರೆಗೆ ಒಟ್ಟು […]

ರಾಜ್ಯ

ಬೀರದೇವರ ದೇವಾಲಯಕ್ಕೆ ಕನ್ನ ಹಾಕಿದ ಕಿರಾತಕರು….!

ಬೆಳಗಾವಿ prajakiran.com : ಬೀರದೇವರ ದೇವಾಲಯಕ್ಕೆ ಕನ್ನ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ‌ರಾಮದುರ್ಗ ತಾಲೂಕಿ‌ನ ಸಿದ್ನಾಳ ಗ್ರಾಮದಲ್ಲಿಯೇ ಈ ದುಷ್ಕೃತ್ಯ ನಡೆದಿದೆ. ಬೀರ ದೇವರ ಬೆಳ್ಳಿಯ ವಿಗ್ರಹ ಸೇರಿ ಅನೇಕ ಆಭರಣ ಕಳ್ಳತನವಾಗಿವೆ. 30 ಕೆ.ಜಿ. ಬೆಳ್ಳಿ ಹಾಗೂ 25 ಗ್ರಾಂ ಬಂಗಾರ ಕಳ್ಳರ ಪಾಲಾಗಿದೆ. ಮಾಹಿತಿ ಅರಿತು ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಹಾಗೂ ಸಿಪಿಐ ಭೇಟಿ ನೀಡಿ , ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂದ ಪೊಲೀಸರು ಖದೀಮರ ಬಂಧನಕ್ಕೆ […]

ರಾಜ್ಯ

ಬೆಂಗಳೂರಿನ ವರ್ತೂರು ಕೊಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರು ನಾಮಕರಣ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಬೇಸರ

ಬೆಂಗಳೂರು prajakiran.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 84ರ ಹಗದೂರು ವ್ಯಾಪ್ತಿಯ ವರ್ತೂರು ಕೊಡಿ ವೃತ್ತಕ್ಕೆ ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿ ದಿವಂಗತ ಮಧುಕರ್ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡುವುದಕ್ಕೆ ಕೌನ್ಸಿಲ್ ಸಭೆಯು ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. ಆದರೆ, ಅದಕ್ಕೆ ಅನುಮೋದನೆ ನೀಡಬೇಕಾದ ರಾಜ್ಯದ ನಗರಾಭಿವೃದ್ದಿ ಇಲಾಖೆ ಅಪರ್ ಮುಖ್ಯಕಾರ್ಯದರ್ಶಿ ಅದನ್ನು ತಿರಸ್ಕರಿಸಿರುವುದಕ್ಕೆ ಜನಜಾಗೃತಿ ಸಂಘದ ಅಧ್ಯಕ್ಷ ಹಾಗೂ ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಹೆಚ್. ಕೊರವರ ತೀವ್ರಬೇಸರ […]

ರಾಜ್ಯ

ವಾಜಪೇಯಿ ನಗರ ನಾಮಕರಣ ಸಮಾರಂಭ : ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿ

ಧಾರವಾಡ prajakiran.com : ಹುಬ್ಬಳ್ಳಿಯ ಅಮರಗೊಳದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು  ತರಾತುರಿಯಲ್ಲಿ ಆಯೋಜಿಸಿದ್ದ “ವಾಜಪೇಯಿ ನಗರ ” ನಾಮಕರಣ ಸಮಾರಂಭ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಮೂಲತಃ 1992 ರಲ್ಲಿ ಕೆ ಐ ಎ ಡಿ ಬಿ ಗೆ ಸೇರಿದ 29 ಎಕರೆ ಜಮೀನಿನಲ್ಲಿ ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಎಸ್ ಆರ್ ಮೊರೆ ಯವರು ಆಶ್ರಯ ಯೋಜನೆಯಲ್ಲಿ ಸುಮಾರು 825 ಬಡ ಕುಟುಂಬಗಳಿಗೆ ನಿವೇಶನ ಹಂಚಿ ಮನೆಗಳ ನಿರ್ಮಾಣ ಮಾಡಿ ಅದಕ್ಕೆ ಶ್ರೀ ಮಹಾತ್ಮ ಗಾಂಧಿ ನಗರ ಎಂದು ಹೆಸರಿಟ್ಟಿದ್ದರು. ಅಂದಿನಿಂದ ಇಂದಿನವರೆಗೆ ಅದೇ ಹೆಸರಿನಿಂದ ಈ ಬಡಾವಣೆಯನ್ನು ಜನರು ಗುರುತಿಸಿದ್ದಾರೆ. ಆದರೆ, ಶಾಸಕರು ಅದನ್ನು ಇಂದು “ಅಟಲ್ ಬಿಹಾರಿ ನಗರ “ಎಂದು ಮರುನಾಮಕರಣ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ ಜೋಶಿಯವರ ಮೂಲಕ  ಕೊಳಚೆ ಮಂಡಳಿಯ ಯೋಜನೆಯಲ್ಲಿ ಮನೆಗಳ […]